ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Published On :

ಶಿಕ್ಷಕರ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ
ರಾಮನಗರ: ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಫೆ.28ರಂದು ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ರಾಜಶೇಖರ್ ಹೇಳಿದರು. ಸಮಾವೇಶದಲ್ಲಿ ಶಿಕ್ಷಕರ ಬೇಡಿಕೆಗಳು, ಸಮಸ್ಯೆಗಳು, ಇತ್ತೀಚಿನ ಬೆಳವಣಿಗೆಗಳ ಚರ್ಚೆಯ ಜತೆಗೆ ಸಮಾವೇಶವನ್ನು ಅರ್ಥಪೂರ್ಣವಾಗಿಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಶಿಕ್ಷಕರಲ್ಲಿ ಕೌಶಲ್ಯಾಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ತರಬೇತುದಾರ ಡಾ.ಬಿ.ಎಸ್.ದಕ್ಷಿಣ ಕುಮಾರಸ್ವಾಮಿ ಅವರಿಂದ ಪರೀಕ್ಷೆಗಳು ಮತ್ತು ಜೀವನ ಕೌಶಲ್ಯಗಳ ವಿಚಾರದಲ್ಲಿ ಉಪನ್ಯಾಸವನ್ನು ನೀಡುವರು. ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಕೌಶಲ್ಯವನ್ನು  ವೃದ್ಧಿಸಿಕೊಳ್ಳುವ ಶಿಕ್ಷಕರು ನಂತರ ವಿದ್ಯಾರ್ಥಿಗಳಲ್ಲಿ ಈ ವಿಚಾರದಲ್ಲಿ ಉತ್ಸಾಹ ತುಂಬಲು ಸಹಕಾರಿಯಾಗುತ್ತದೆ ಎಂದರು. ಸಮಾವೇಶವನ್ನು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ಮಾಕರ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಭಾಗವಹಿಸುವರು ಎಂದು ಹೇಳಿದರು.
ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನಿರಂತರ ಮೌಲ್ಯಮಾಪನದಿಂದ ಶಿಕ್ಷಕರಿಗಾಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಈ ಸಮಾವೇಶವನ್ನು ವೇದಿಕೆಯಾಗಿ ಬಳಸಿಕೊಂಡು ಸರ್ಕಾರದ ಗಮನ ಸೆಳೆಯಲಾಗುವುದು. ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಂಜೀವಿನಿ ಯೋಜನೆಯನ್ನು ಏಕರೂಪದಲ್ಲಿ ಜಾರಿಯಾಗಲು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು. ಸಮಾವೇಶದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಒಒಡಿ ರಜೆ ನೀಡಲು ಡಿಡಿಪಿಐ ಒಪ್ಪಿಗೆ ನೀಡಿದ್ದಾರೆ. ಜಿಲ್ಲೆಯ ಎಲ್ಲ ಶಿಕ್ಷಕರು ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಗೋಷ್ಠಿಯಲ್ಲಿ ಟಿ.ಸಿ.ಕೆ.ರಾಜು, ಎಂ.ಎನ್. ದೇವರಾಜ್, ಟಿ.ಆರ್. ರಂಗಸ್ವಾಮಿ, ಎಲ್.ಸಿ. ಮಹದೇವಯ್ಯ, ಡಿ.ಟಿ. ವೆಂಕಟೇಶ್ ಹಾಜರಿದ್ದರು.
ಶಿವರುದ್ರ ಮೂರ್ತಿ ಪ್ರತಿಷ್ಠಾಪನೆ ಇಂದು
ಕುಣಿಗಲ್: ತಾಲೂಕಿನ ಅಮೃತೂರು ಹೋಬಳಿ ಪಡುವುಗೆರೆ ಗ್ರಾಮದ ಸೋಮೇಶ್ವರ ಸ್ವಾಮಿ ದೇವಾಲಯದ ಪುನರ್ ಜೀರ್ಣೋದ್ಧಾರ ಮತ್ತು 19 ಅಡಿ ಶ್ರೀ ಶಿವರುದ್ರ  ಧ್ಯಾನಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಫೆ23ರಂದು ನೆರವೇರಲಿದ್ದು,  ನಾಗಮಂಗಲ ಆದಿ ಚುಂಚನಗಿರಿ ಶಾಖಾ ಮಠದ ಅಮರಾನಂದನಾಥ ಪರಮಹಂಸ ಸ್ವಾಮಿ  ಸಾನಿಧ್ಯ ವಹಿಸಲಿದ್ದಾರೆ ಎಂದು ಸಮಿತಿ ತಿಳಿಸಿದೆ.
ಇಂದು ಪ್ರತಿಷ್ಠಾಪನೆ
ಕುಣಿಗಲ್: ತಾಲೂಕಿನ ಶೆಟ್ಟಿಗೇಹಳ್ಳಿ ಶ್ರೀ ಸತ್ಯ ಹರಿಶ್ಚಂದ್ರ ದೇವಾಲಯದ ವಿಮಾನ ಗೋಪುರ ಶಂಕುಸ್ಥಾಪನೆ ಮತ್ತು ಮಹಾಗಣಪತಿ, ಮಹಾನಂದಿ ಹಾಗೂ ದಾಕ್ಷಾಯಿಣಿ ಅವರ ಪ್ರತಿಷ್ಠಾಪನೆ ಕಾರ್ಯಕ್ರಮ ಫೆ. 23 ಮತ್ತು 24ರಂದು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕುಣಿಗಲ್ ಶಿವಣ್ಣ ತಿಳಿಸಿದ್ದಾರೆ.
ಬೈಕ್- ಲಾರಿ ಡಿಕ್ಕಿ: ಮಹಿಳೆ ಸಾವು
ಹಿರಿಯೂರು: ತಾಲೂಕಿನ ಚಳ್ಳಕೆರೆಯ ಎಸ್.ಆರ್. ಡಾಬಾ ಬಳಿಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಶಿರಾ ತಾಲೂಕಿನ ನಾರಾಯಣಪುರದ ನಿವಾಸಿ ಪಾರ್ವತಮ್ಮ (55) ಮೃತ ಮಹಿಳೆ. ಇನ್ನಿಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ರೋಟರಿ ಕನ್ವೆನ್‌ಷನ್ ಹಾಲ್ ಉದ್ಘಾಟನೆ

ಚಿಕ್ಕನಾಯಕನಹಳ್ಳಿ: ಮನ ಮುಟ್ಟಿ ಮಾಡುವ ಸೇವೆಯೇ ಸರ್ವ ಶ್ರೇಷ್ಠಸೇವೆ  ಎಂದು ರೋಟರಿ ಡಿಸ್ಟ್ರಿಕ್  ಗರ್ವನರ್ ರೊ.ಕೆ.ಎಸ್.ನಾಗೇಂದ್ರ ನುಡಿದರು.
ಗುರುವಾರ ಅವರು ಪಟ್ಟಣದ ರೋಟರಿ  ಕನ್ವೆನ್ಷ್‌ನ್ ಹಾಲ್ ಉದ್ಘಾಟಿಸಿದ ನಂತರ ಜಿಎಸ್‌ಎಸ್ ಅವರ ಕವನ ವಾಚಿಸುವ ಮೂಲಕ ಸೇವೆಗಿರುವ ಮಹತ್ವವನ್ನು ವಿವರಿಸಿ ಮಾತನಾಡುತ್ತಿದ್ದರು. ಇದೊಂದು ಹೃದಯ ಮುಟ್ಟುವ ಗಳಿಗೆ. ನಿಸ್ವಾರ್ಥದಿಂದ ದಾನಮಾಡಿ, ಇಂದು ಇಂತಹ ಸತ್ಕಾರ್ಯಗಳಿಗೆ ಅನುವು ಮಾಡಿಕೊಟ್ಟ ಅಮರ ಆತ್ಮ ನಮ್ಮ ಹತ್ತಿರವಿಲ್ಲ. ಆದರೆ ಅವರ ಕೊಡುಗೆ ಅಜರಾಮರ. ಅಂತಹವರ ಸಾಲಿಗೆ ಆತ್ಮರಾಂ ಸೇರುತ್ತಾರೆ. ಸೇವೆಗೆ ಹೆಸರಾಗಿರುವ ರೋಟರಿ ಸಂಸ್ಥೆಗೆ ಹಲವಾರು ಲಕ್ಷಗಳು ಬೆಲೆಬಾಳುವ ನಿವೇಶನವನ್ನು
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾಹಿತಿ, ಪ್ರಕಾಶಕ ಮತು ್ತಹಿರಿಯ ರೋಟರಿ ಸದಸ್ಯರಾದ ಎಂ.ವಿ.ನಾಗರಾಜರಾವ್, ತಂಡದ ಸದಸ್ಯರ  ಸಂಕಲ್ಪ ಶಕ್ತಿಯಿಯಂದ ಈ ಭವನ ಕಟ್ಟಲು ಸಾಧ್ಯವಾಗಿದೆ ಎಂದರು.
ನಿವೇಶನ ದಾನಿಗಳಾದ ಸಿ.ಎನ್. ಆತ್ಮರಾಂ ಅವರ ಪತ್ನಿ ವಿಜಯ ಅವರನ್ನು ಅಭಿನಂದಿಸಲಾಯಿತು. ರೊ.ಯು.ಬಿ. ಭಟ್, ರೊ. ಶ್ರೀನಾಥ್ ಬಾಬು, ಶೈಲಜಭಟ್, ಶಶಿಕಲಾ ನಾಗೇಂದ್ರ, ರೊ. ಡಾ. ಸಿ.ಎಂ. ಸುರೇಶ್, ಇನ್ನರ್‌ವ್ಹೀಲ್  ಪುಷ್ಪಶಿವಣ್ಣ,ರೋಟರಿ ಅಧ್ಯಕ್ಷರಾದ ರೊ.ಪ್ರದೀಪ್‌ಕುಮಾರ್, ಕಾರ್ಯದರ್ಶಿ ಡಾ. ಪ್ರಶಾಂತಕುಮಾರ ಶೆಟ್ಟಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.