ಬೆಂಗಳೂರು ಗ್ರಾಮಾಂತರ

11ರಂದು ವೈಕುಂಠ ಏಕಾದಶಿ

Published On :

ಚನ್ನಪಟ್ಟಣ:  ತಾಲೂಕಿನ ಕರಿಯಪ್ಪನ ದೊಡ್ಡಿಗ್ರಾಮದಲ್ಲಿರುವ ಚಿಕ್ಕತಿರುಪತಿ ವೆಂಟರಮಣಸ್ವಾಮಿ ದೇವಾಲಯದಲ್ಲಿ  ಜ.11 ರಂದು ವೈಕುಂಠ ಏಕಾದಶಿ ಅಂಗವಾಗಿ  ವೈಕುಂಠ ದ್ವಾರಪ್ರವೇಶ, ಕಲ್ಯಾಣೋತ್ಸವ,ಪಂಚಾಮೃತಾಭಿಷೇಕ, ಪ್ರಸಾದ ವಿನಿಯೋಗ, ಲೋಕ ಕಲ್ಯಾಣಾರ್ಥವಾಗಿ ರಕ್ಷಾಸುದರ್ಶನ ಹೋಮ  ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ದೇವಾಲಯದ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ದೇವಾಲಯದ ಆವರಣದಲ್ಲಿ ಹಮ್ಮಿ ಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೈಕುಂಠ ಏಕಾದಶಿಯ ತಾಲೂಕಿನ ಭಕ್ತರ ಜತೆಗೆ ಸುತ್ತಮುತ್ತಲ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸಲಿದ್ದು 25 ಸಾವಿರಕ್ಕೂ ಹೆಚ್ಚುಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಬೆಳಿಗ್ಗೆ 6ರಿಂದ ರಾತ್ರಿ 12ರ ವರೆಗೆ  ವಿಶೇಷ ಧಾರ್ಮಿಕ ಮತ್ತು ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ವೈಕುಂಠ ಏಕಾದಶಿಯಂದು 13ಕ್ಕೂ ಹೆಚ್ಚು ತಂಡಗಳು ಭಕ್ತಿಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದು, ದಿನಪೂರಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವಂತೆ ಮನವಿ ಮಾಡಿದರು.
ಈ ಹಿಂದೆ ಗ್ರಾಮದಲ್ಲಿ ಚಿಕ್ಕದಾಗಿದ್ದ ದೇವಾಲಯವನ್ನು 32 ವರ್ಷಗಳ ಹಿಂದೆ ವಿಸ್ತಾರವಾಗಿ ನಿರ್ಮಿಸಲಾಗಿದ್ದು, ಸರಳವಾಗಿ ಆಚರಿಸುತ್ತಿದ್ದ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಕಳೆದ 6 ವರ್ಷಗಳಿಂದ ಭಕ್ತಾದಿಗಳ ಸಹಕಾರದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದೆ ಎಂದು ದೇವಾಲಯದ ಪ್ರಧಾನ ಅರ್ಚಕ ಪುಟ್ಟಸ್ವಾಮಿ ತಿಳಿಸಿದರು.
 ದೇವಾಲಯದ ಟ್ರಸ್ಟ್‌ವತಿಯಿಂದ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದ್ದು ಈ ಕಲ್ಯಾಣ ಮಂಟಪವನ್ನು  ಯಾವುದೇ ಬಾಡಿಗೆ ಪಡೆಯದೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಟ್ರಸ್ಟ್‌ನ ಸದಸ್ಯರಾದ ಪುಟ್ಟಸ್ವಾಮಿ, ಗುಂಡಣ್ಣ, ಕರಿಯಪ್ಪನ ದೊಡ್‌ಡಿ ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.