ಬೆಂಗಳೂರು ಗ್ರಾಮಾಂತರ

ಅಪಘಾತದಲ್ಲಿ ಮಹಿಳೆ ಸಾವು

Published On :

ಚನ್ನಪಟ್ಟಣ: ಲಾರಿ ಮತ್ತು ಸ್ಯಾಂಟ್ರೋ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಮಹಿಳೆ ಸಾವಿಗೀಡಾಗಿ ಮೂವರು ಗಾಯಗೊಂಡಿರುವ ಘಟನೆ ಸೋಮುವಾರ ಇಲ್ಲಿನ ಪೋಲಿಸ್ ತರಬೇತಿ ಶಾಲೆ ಮುಂಭಾಗ ಸಂಭವಿಸಿದೆ.
ಲಲಿತಮ್ಮ (60) ಮೃತ ದುರ್ದೈವಿಯಾಗಿದ್ದು, ಇವರ ಮಗ ನಾಗಾನಂದ (30), ಸೊಸೆ ಲಕ್ಷ್ಮಿ(28) ಮೊಮ್ಮಗ ಸಿದ್ಧಾಂತ(1) ಗಾಯಗೊಂಡಿದ್ದಾರೆ. ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳುತ್ತಿರುವಾಗ ಪೊಲೀಸ್ ತರಬೇತಿ ಶಾಲೆಯ ಬಳಿ ಮುಂದೆ ಹೋಗುತ್ತಿದ್ದ ಕೆಎಸ್ ಆರ್ಟಿಸಿ ಬಸ್ ತಕ್ಷಣ ಬ್ರೇಕ್ ಹಾಕಿದ್ದರಿಂದ ಇವರು ಕುಳಿತಿದ್ದ ಕಾರನ್ನು ಚಾಲನೆ ಮಾಡುತ್ತಿದ್ದ ನಾಗಾನಂದ ತಕ್ಷಣ ಬ್ರೇಕ್ ಹಾಕಿದ್ದಾರೆ. ಹಿಂದಿನಿಂದ ಬಂದ ಲಾರಿ ಆಯತಪ್ಪಿ ಇವರ ಕಾರಿಗೆ ಡಿಕ್ಕಿ ಹೊಡೆದಿದೆ.


ದೊಡ್ಡ ಜಾತ್ರೆಗೆ ಪೂರ್ವ ಸಿದ್ಧತಾ ಸಭೆ


ಸೂಲಿಬೆಲೆ: ನಂದಗುಡಿ ಹೋಬಳಿಯಲ್ಲಿನ ತಾವರೆಕೆರೆ ಗ್ರಾಮದಲ್ಲಿ ನಡೆಯಲಿರುವ ದೊಡ್ಡ ಜಾತ್ರೆಗೆ ಪೂರ್ವ  ಸಿದ್ಧತಾ ಸಭೆಯನ್ನು ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ನಡೆಸಲಾಯಿತು. ತಾವರೆಕೆರೆ ಗ್ರಾಮದಲ್ಲಿ 2015ರಲ್ಲಿ ನಡೆಯಲಿರುವ ಕುರುಬ ಸಮುದಾಯದ ದೊಡ್ಡ ಜಾತ್ರೆಗೆ ಸಮುದಾಯದ ಪ್ರತಿಯೊಬ್ಬರು ಕೈ ಜೋಡಿಸಬೇಕು. ಜಾತ್ರೆ ನಡೆದ 8 ವರ್ಷಗಳಾಗಿವೆ. ಈ ಜಾತ್ರೆಯ 5,7 ಹಾಗೂ 9 ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಕುಲ ಸಮುದಾಯದ ಈ ಸಂಪ್ರದಾಯವನ್ನು ಬೆಳೆಸಿಕೊಂಡು ಹೋಗಬೇಕು. ಇದಕ್ಕಿಂತ ಮಿಗಿಲಾಗಿ ಸಮುದಾಯದ ಪ್ರಗತಿಗೆ ಪೂರಕವಾಗಿ ತಾವರೆಕೆರೆ ಗ್ರಾಮದಲ್ಲಿ ಕನಕ ಭವನವನ್ನು ಕಟ್ಟಿಸಬೇಕು. ಇದಕ್ಕೆ ಎಲ್ಲರು ಸಹಕರಿಸಿ ಕೈ ಜೋಡಿಸಬೇಕು. ನಿರ್ಮಾಣವಾಗಲಿರುವ ಕನಕ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲು ಸಭೆಯಲ್ಲಿ ಚರ್ಚೆ ನಡೆಯಿತು. ವಿಧಾನ ಸಭೆ ಸದಸ್ಯರಾದ ಬೈರತಿ ಸುರೇಶ್ ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.