ಬೆಂಗಳೂರು ಗ್ರಾಮಾಂತರ

ಯುವಕರಿಬ್ಬರು ನೀರು ಪಾಲು

Published On :

ಕನಕಪುರ:  ವಿಹಾರಕ್ಕೆಂದು ಕನಕಪುರ ತಾಲೂಕಿನ ಸಂಗಮಕ್ಕೆ ತೆರಳಿದ್ದ ಯುವಕರಿಬ್ಬರು ಈಜಾಡಲು ಕಾವೇರಿ ನದಿಗೆ ಇಳಿದು ಸೆಳೆತಕ್ಕೆ ಸಿಲುಕಿ ನೀರುಪಾಲಾಗಿರುವ ಘಟನೆ ನಡೆದಿದೆ.  ಜಲಸಮಾಧಿಯಾದ ನತದೃಷ್ಟರನ್ನು ಬೆಂಗಳೂರಿನ ಮಲ್ಲೇಶ್ವರಂ ಸರ್ಕಲ್ನ ತ್ರಿಪುರ ಸೀಡ್ಸ್ ನೌಕರರಾದ ನವೀನ್(23), ಮಂಜುನಾಥ್ (27) ಎಂದು ಗುರುತಿಸಲಾಗಿದೆ.  ವಾರಾಂತ್ಯದ ರಜೆಗಾಗಿ ಸಂಗಮಕ್ಕೆ 12 ಮಂದಿ ಗೆಳೆಯರು ವಿಹಾರಕ್ಕಾಗಿ ಬಂದಿದ್ದು ಕಾವೇರಿ ನದಿ ನೀರಿನಲ್ಲಿ ಈಜಾಡಲು ತೊಡಗಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಇದುವರೆಗೂ ಶವಗಳು ದೊರೆತಿಲ್ಲ. ಸಾತನೂರು ಆರಕ್ಷಕ ಉಪನಿರೀಕ್ಷಕ ಜಯರಾಂ, ಸಹಾಯಕ ನಿರೀಕ್ಷಕ ಗಣೇಶ್ ತಂಡದವರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಶವಗಳ ಹುಡುಕಾಟ ಮಂದು ವರೆಸಿದ್ದಾರೆ. ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದೆ.  


ಸವಾರರ ಸಾವು
ವಿಜಯಪುರ: ಪಟ್ಟಣದ ವೆಂಕಟಗಿರಿಕೋಟೆ ಕೆರೆ ಬಳಿ ಬೈಕ್ ಸವಾರ  ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ  ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಗೌರಿಬಿದನೂರು ತಾಲೂಕಿನ ಗೊಡ್ಲುಕುಂಟೆಯ ನಿವಾಸಿಗಳಾದ ಹರೀಶ್ (26)ಮತ್ತು ಆತನ ಸಹೋದರ ನರಸಿಂಹಚಾರ್ (24)ಚಿಕ್ಕಬಳ್ಳಾಪುರ ಮಾರ್ಗವಾಗಿ ದೇವನಹಳ್ಳಿ ಕಡೆ ಬರುತ್ತಿದ್ದಾಗ ವೆಂಕಟಗಿರಿಕೋಟೆಯ ಎನ್ಎಚ್-7 ರಾಷ್ಟ್ರಿಯ ಹೆದ್ದಾರಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ಗೆ  ಡಿಕ್ಕಿ ಹೊಡೆದ ಪರಿಣಾಮ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟರು. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.