ವಿಜ್ಞಾನ ಪ್ರಬಂಧ ಫಲಿತಾಂಶ
ಕನಕಪುರ: ರಸ್ತೆಜಕ್ಕಸಂದ್ರದ ಜೈನ್ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ರಾಮನಗರ ಜಿಲ್ಲಾ ಮಟ್ಟದ ವಿಜ್ಞಾನ ಪ್ರಬಂಧ ಸ್ಪರ್ಧೆ- ಪರಿಶೋಧ 2013-14 ಕಾರ್ಯಕ್ರಮ ನಡೆಯಿತು.
ಜೈನ್ ವಿದ್ಯಾನಿಕೇತನ ಪ್ರಾಂಶುಪಾಲ ಬಿ.ಪಿ.ಕಿಶೋರ್ ಸ್ಪರ್ಧೆಗೆ ಚಾಲನೆ ನೀಡಿದರು. ಪ್ರಾಂಶುಪಾಲರಾದ ವತ್ಸಲಾ ಅಧ್ಯಕ್ಷತೆ ವಹಿಸಿದ್ದರು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಹಾಗೂ ಜೀವಶಾಸ್ತ್ರ ವಿಭಾಗಗಳಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜೇತರ ವಿವರ: ಭೌತಶಾಸ್ತ್ರ ವಿಭಾಗದಲ್ಲಿ ಪ್ರಥಮ- ಜೈನ್ ಪಬ್ಲಿಕ್ ಶಾಲೆಯ ಭುವನ್, ದ್ವಿತೀಯ- ಕು.ಉಷಾ ಸರ್ಕಾರಿ ಪ್ರೌಢಶಾಲೆ, ಬನವಾಸಿ. ತೃತೀಯ- ಕು.ಭವ್ಯಾ, ಸರ್ಕಾರಿ ಪ್ರೌಢಶಾಲೆ ಚಿಕ್ಕಲ್ಬಾಳು.
ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ- ರಾಮನಗರದ ಹೋಲಿಕ್ರೆಸೆಂಟ್ಶಾಲೆಯ ಕು.ನವ್ಯಶ್ರೀ, ದ್ವಿತೀಯ ತೇಜಸ್ಗೌಡ, ಹೋಲಿ ಕ್ರೆಸೆಂಟ್. ತೃತೀಯ ಕು.ಸೌಂದರ್ಯ ಸರ್ಕಾರಿ ಪ್ರೌಢಶಾಲೆ ಅವ್ವೇರಹಳ್ಳಿ.
ಗಣಿತಶಾಸ್ತ್ರ ವಿಭಾಗದಲ್ಲಿ ಪ್ರಥಮ- ಕು.ಅನನ್ಯ, ಜೈನ್ವಿದ್ಯಾನಿಕೇತನ. ದ್ವಿತೀಯ- ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆಯ ಕು.ರಜನಿ, ತೃತೀಯ- ಚನ್ನಪಟ್ಟಣದ ಬಾಲು ಪಬ್ಲಿಕ್ಶಾಲೆಯ ಪ್ರಜ್ವಲ್ಗೌಡ.
ಜೀವಶಾಸ್ತ್ರ ವಿಭಾಗದಲ್ಲಿ ಪ್ರಥಮ- ಸಾತನೂರಿನ ಪ್ರಿಯದರ್ಶಿನಿ ಆಶ್ರಮಶಾಲೆಯ ಸೂರ್ಯ ಪಟೇಲ್, ದ್ವಿತೀಯ ಜೈನ್ವಿದ್ಯಾನಿಕೇತನದ ಕು.ಎಸ್.ಬಿ.ನೇಹಾ, ತೃತೀಯ ಕನಕಪುರದ ಸರ್ಕಾರಿ ಪ್ರೌಢಶಾಲೆಯ ನವೀನ್ ಪಡೆದಿದ್ದಾರೆ.
ವಿಜೇತರಿಗೆ ಬಹುಮಾನ, ಪ್ರಶಸ್ತಿಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ಕಾಲೇಜಿನ ವಾರ್ಷಿಕೋತ್ಸವದಲ್ಲಿ ವಿತರಿಸಲಾಗುತ್ತದೆ ಎಂದು ಪ್ರಾಂಶುಪಾಲೆ ವತ್ಸಲಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

