ಭೂ ಮಾಪನ; ಅವ್ಯವಹಾರ ತಾಣ
ಕನಕಪುರ: ರಾಜ್ಯ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾಗಿರುವ ಭೂ ಮಾಪನ ಇಲಾಖೆ ಅವ್ಯವಸ್ಥೆಗಳ ಆಗರವಾಗಿದ್ದು, ರೈತರನ್ನು ಕಿತ್ತು ತಿನ್ನುತ್ತಿರುವ ನಿರಂತರವಾಗಿ ಶೋಷಿಸುತ್ತಿರುವ ಇಲಾಖೆಯಾಗಿದೆ.
ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಇಲಾಖೆಯನ್ನು ಸರ್ಕಾರ ತಾಂತ್ರಿಕ ಇಲಾಖೆ ಎಂದು ಘೋಷಿಸಿ ಹಲವು ಸವಲತ್ತುಗಳನ್ನು ಘೋಷಿಸಿದೆ. ನೋಂದಣಿ, ತತ್ಕಾಲ್ಪೋಡಿ, ಬ್ಯಾಕ್ಲಾಗ್ ಮ್ಯಟೇಷನ್, ಒತ್ತುವರಿ ತೆರವು, ಗ್ರಾಮ ನಕಾಶೆಗಳ ಡಿಜಿಟಲೀಕರಣ, ಭೂದಾಖಲೆಗಳ ಸ್ಕ್ಯಾನಿಂಗ್, ನಗರಾಸ್ತಿ ದಾಖಲೆಗಳು, ರೀ-ಸರ್ವೆ, ಅಂತರರಾಜ್ಯ ಗಡಿ ನಿರ್ವಹಣೆ ಮೊದಲಾದ ಜವಾಬ್ದಾರಿಗಳನ್ನು ವಹಿಸಿದೆ. (ಸಂಖ್ಯೆ.ಕಂಇ.79.ಭೂದಾನ 2012(ಪಿ1) ದಿನಾಂಕ 4-1-2013).
ಸರ್ಕಾರದ ಆದೇಶದಂತೆ ಭೂಮಾಪನವೊಂದಕ್ಕೆ ರೈತರು ಕನಿಷ್ಠ ಒಂದೂವರೆ ಸಾವಿರ, ಗರಿಷ್ಟ ಎರಡೂವರೆ ಸಾವಿರ ಶುಲ್ಕವನ್ನು ಸರ್ವೇ ಇಲಾಖೆಗೆ ಪಾವತಿಸಬೇಕು. ಭೂಮಾಪನ ಮಾಡುವ ಮಾಪಕರಿಗೆ ಸರ್ಕಾರ ಸೇವಾ ಶುಲ್ಕವಾಗಿ ಮಾಪನವೊಂದಕ್ಕೆ ಎಂಟುನೂರು ರು. ಗಳನ್ನು ನೀಡಿ ಮಿಕ್ಕ ಹಣವನ್ನು ಬ್ಯಾಕ್ಲಾಗ್ಪೋಡಿ ಖಾತೆಗೆ ವರ್ಗಾಯಿಸುತ್ತದೆ. ರಾಜ್ಯದಲ್ಲಿ ಪ್ರತಿವರ್ಷ ಲಕ್ಷಾಂತರ ಸರ್ವೆ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು ಸಂಗ್ರಹವಾಗುವ ಕೋಟ್ಯಂತರ ಹಣದ ವಿಲೇವಾರಿ ಬಗ್ಗೆ ಯಾರಲ್ಲಿಯೂ ಮಾಹಿತಿ ಇಲ್ಲ. ಇದುವರೆಗೂ ಯಾವುದೇ ಲೆಕ್ಕಪರಿಶೋಧನೆ ನಡೆದಿಲ್ಲ, ಅವ್ಯವಹಾರಗಳ ಮೂಟೆಯಾಗಿ ಪರಿವರ್ತನೆಯಾಗಿದೆ. ರೈತರಿಂದ ಮೂರ್ನಾಲ್ಕು ಸಾವಿರ ಹಣ ವಸೂಲಿ ಮಾಡದೆ ಯಾವುದೇ ಸರ್ವೆ ನಡೆಸದ ಪರವಾನಗಿ ಭೂಮಾಪಕರು ನಿರಂತರವಾಗಿ ರೈತರನ್ನು ಶೋಷಿಸುತ್ತಿದ್ದಾರೆ. ಸ್ಕೆಚ್ ತಯಾರಾದ ಮೇಲೆಯೂ ಮೇಲಿನ ಅಧಿಕಾರಿಗಳು ಕಡತ ಪೋಡಿಗಾಗಿ ಕನಿಷ್ಠ ಎರಡುಸಾವಿರ ಲಂಚ ವಸೂಲಿ ಸಹಿಹಾಕುವುದಿಲ್ಲ. ಭೂಮಾಪಕರನ್ನು ದಳ್ಳಾಳಿಗಳನ್ನಾಗಿ ಮಾಡಿಕೊಂಡು ರೈತರ ಶೋಷಣೆ ನಡೆಸಿದ್ದಾರೆ.
ಪರವಾನಗಿ ಭೂಮಾಪಕರನ್ನು ಕಂದಾಯ ಇಲಾಖೆಗೆ ವಿಲೀನಗೊಳಿಸಲು ಮೀನಾಮೇಷ ಎಣಿಸುವ ಸರ್ಕಾರ ಅವರನ್ನು ಭೂಮಾಪಕರ ನೇಮಕ ಪ್ರಕ್ರಿಯೆಯಿಂದಲೇ ಹೊರಗಿರಿಸಿ ಅನ್ಯಾಯ ಮಾಡಿದೆ. ಇತ್ತೀಚೆಗೆ ಎರಡು ಸಾವಿರ ಮಾಪಕರ ಹುದ್ದೆಗಳಿಗೆ ಸಿವಿಲ್ ಡಿಪ್ಲೊಮಾ ಪದವೀಧರರನ್ನು ತೆಗೆದುಕೊಳ್ಳುವ ಮೂಲಕ ನೇಮಕ ಮಾಡಿಕೊಂಡ ಸರ್ಕಾರ ಅವರನ್ನು ತಾಂತ್ರಿಕ ಇಲಾಖೆಗೆ ತೆಗೆದುಕೊಳ್ಳಲು ಪ್ರಸ್ತಾವನೆ ಸಲ್ಲಿಸಿ ನೇಮಕ ಆದೇಶ ನೀಡದೆ ಅತಂತ್ರ ಸ್ಥಿತಿಯಲ್ಲಿರಿಸಿದೆ. ಪರವಾನಗಿ ಭೂಮಾಪಕರ ಹುದ್ದೆಗಳನ್ನು ರದ್ದುಮಾಡದೆ ಅಥವಾ ವಿಲೀನಗೊಳಿಸದೆ ಅವರ ಮೂಗಿಗೂ ತುಪ್ಪಸವರಿ ಇಲಾಖೆಯ ಉನ್ನತ ಅಧಿಕಾರಿಗಳು ಪರಿಸ್ಥಿತಿಯನ್ನು ಹಣದೋಚುವ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ.
ರೈತರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಸರ್ವೆ ಇಲಾಖೆಗೆ ಕಂದಾಯ ಸಚಿವರು ತುರ್ತು ಕಾಯಕಲ್ಪ ನೀಡಬೇಕಾದ ಅಗತ್ಯವಿದೆ. ಭೂಮಾಪನ ಇಲಾಖೆಗೆ ಅಗತ್ಯವಾದ ಹುದ್ದೆಗಳನ್ನು ಭರ್ತಿಮಾಡಿ,ಪರವಾನಗಿ ಮಾಪಕರನ್ನು ಇಲಾಖೆಯಲ್ಲಿ ವಿಲೀನಗೊಳಿಸಿ ರಾಜ್ಯಾದ್ಯಂತ ರೀ ಸರ್ವೇ ಬದಲಿಗೆ ಹಿಸ್ಸಾಸರ್ವೆ, ಪೋಡಿ ಹಾಗೂ ಗೋಮಾಳಗಳ ಸರ್ವೆ ನಡೆಸಿದರೆ ರೈತರಿಗೆ ಅನುಕೂಲವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

