ಆರೋಗ್ಯಕರ ಪರಿಸರ ಅನಿವಾರ್ಯ
ದೊಡ್ಡಬಳ್ಳಾಪುರ: ಪರಸರ ಸಂರಕ್ಷಣೆ ಅತ್ಯಂತ ಮಹತ್ವದ ವಿಚಾರವಾಗಿದ್ದು, ಭವಿಷ್ಯದ ಹಿತದೃಷ್ಟಿಯಿಂದ ಆರೋಗ್ಯಕರ ಪರಿಸರದ ಸೃಷ್ಟಿ ಅನಿವಾರ್ಯವಾಗಿದೆ ಎಂದು ಬೆಂಗಳೂರು ಗ್ರಾಮಾತರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಗೌಡ ಹೇಳಿದರು.
ಇಲ್ಲಿನ ಮಾತೃಭೂಮಿ ಯುವಕರ ಸಂಘದ ನೇತೃತ್ವದಲ್ಲಿ ಕರೇನಹಳ್ಳಿಯಲ್ಲಿರುವ ಮಂಗಳ ವಿದ್ಯಾ ಮಂದಿರದಲ್ಲಿ ಶುಕ್ರವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಪರಿಸರವಾದಿ ಕೆ.ಗುರುದೇವ್ ವಿಶ್ವದಲ್ಲಿ ಭೂ ತಾಪಮಾನ ಏರಿಕೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಲಿದೆ. ಈ ಬಗ್ಗೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆದಿವೆ.
ಭಾರತ ಉಪಖಂಡದಲ್ಲಿ ಪರಿಸರದ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆ ಇದಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ. ಜಾಗೃತಿ ಇಲ್ಲದಿದ್ದರೆ ವಿನಾಶ ಕಟ್ಟಿಟ್ಟಬುತ್ತಿ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಡಾ.ಎಸ್. ಬಾಲಾಜಿ ಮಾತನಾಡಿದರು. ಮಂಗಳಾ ವಿದ್ಯಾ ಮಂದಿರದ ಕಾರ್ಯದರ್ಶಿ ಸದಾಶಿವು, ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಬಿ.ಜಿ. ಅಮರನಾಥ್, ಮುಖ್ಯಶಿಕ್ಷಕ ಉಮಾಪತಿ, ಮಾತೃಭೂಮಿ ಯುವಕರ ಸಂಘದ ತಾಲೂಕು ಅಧ್ಯಕ್ಷ ಆರ್. ಮಧುಸೂದನ್, ಕಾರ್ಯದರ್ಶಿ ಗುಣಸಾಗರ್, ಉಪಾಧ್ಯಕ್ಷ ಕುಮಾರ್ ಮತ್ತಿತರರು ಭಾಗವಹಿಸಿದ್ದರು. ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ದಂಪತಿಗೆ ಅಭಿನಂದನೆ
ಕನಕಪುರ: ಕನಕಪುರ ಲಯನ್ಸ್ ಸಂಸ್ಥೆ ವತಿಯಿಂದ ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಉಚಿತವಾಗಿ ಸಸಿಗಳನ್ನು ವಿತರಿಸುತ್ತಿದ್ದು, ಸಸಿಗಳನ್ನು ಚೆನ್ನಾಗಿ ಕಾಪಾಡಿ ಪೋಷಿಸುವ ಗ್ರಾಮಸ್ಥರನ್ನು ಗುರುತಿಸಿ ಪುರಸ್ಕರಿಸುವ ಕಾರ್ಯಕ್ರಮ ಇಲ್ಲಿನ ಹೊಸಕೋಟೆ ಸಮೀಪದ ಇರುಳಿಗರ ಕಾಲೊನಿಯಲ್ಲಿ ನಡೆಯಿತು.
ಪರಿಸರ ಸಮಿತಿ ಅಧ್ಯಕ್ಷ ಮರಸಪ್ಪ ರವಿ ಅವರು ಕಾಲೊನಿಯ ಮುನಿರಾಜಯ್ಯ, ಶಿವಮ್ಮ ದಂಪತಿ ಅಭಿನಂದಿಸಿದರು. ಐದು ವರ್ಷಗಳ ಹಿಂದೆ ನೀಡಿದ ತೆಂಗಿನ ಸಸಿಗಳನ್ನು ಆಸ್ತೆಯಿಂದ ಬೆಳೆಸಿರುವ ದಂಪತಿ ಈಗ ಫಲವನ್ನು ಬಿಡುತ್ತಿರುವ ಸಸಿಗಳಿಂದ ಸಂತುಷ್ಟರಾಗಿದ್ದಾರೆ. ಇದೇ ರೀತಿ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಗಿಡಗಳನ್ನು ಪೋಷಿಸಬೇಕು ಎಂದು ಮರಸಪ್ಪರವಿ ನುಡಿದರು. ಲಯನ್ಸ್ ಅಧ್ಯಕ್ಷ ಕೆ.ಜಿ.ಸತೀಶ್, ನಿರ್ದೇಶಕ ಸ್ನೇಕ್ ಅರುಣ್, ಲಿಯೋ ಅಧ್ಯಕ್ಷ ವಿಶ್ವಕಾಂತ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

