ಹರಿಹರ ಸಂಗಮ ರಥೋತ್ಸವ ನಿರ್ಮಾಣಕ್ಕೆ ಚಾಲನೆ
ವಿಜಯಪುರ: ಇಲ್ಲಿನ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದ ನಗರೇಶ್ವರ ಹಾಗೂ ಆದಿನಾರಾಯಣ ಸ್ವಾಮಿಯವರ ನೂತನ ರಥೋತ್ಸವ ನಿರ್ಮಾಣ ಕೆಲಸಕ್ಕೆ ನವಗ್ರಹ ದೇವಾಲಯದ ಮುಂಭಾಗದಲ್ಲಿ ಗುರುವಾರ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಲಾಯಿತು.
ಶ್ರೀ ನಗರೇಶ್ವರ ಅಭಿವೃದ್ಧಿ ಸಮಿತಿ, ಅ.ಶಿ.ವೈನಗರ್ತ ಯುವಕ ಸಂಘ,ರಥೋತ್ಸವ ಕಮಿಟಿ ಹಾಗೂ ಅ.ಶಿ.ವೈಮಹಂತಿ ಮಠ,ಅ.ಶಿ.ವೃ ನಗರ್ತ ಮಹಿಳಾ ಸಂಘ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ರಥೋತ್ಸವವು ಸುಮಾರು 35 ಲಕ್ಷ ರು. ವೆಚ್ಚದಿಂದ ನಿರ್ಮಿಸಲಾಗುತ್ತಿದ್ದು ಶ್ರೀ ನಗರೇಶ್ವರ ಹಾಗೂ ಆದಿನಾರಾಯಣ ಸ್ವಾಮಿಯವರ (ಹರಿ ಹರ)ಸಂಗಮ ರಥೋತ್ಸವ ಆಗಲಿದೆ. ಏಪ್ರಿಲ್ 15 ಮಂಗಳವಾರದಂದು ವಿಜೃಂಭಣೆಯಿಂದ ನಡೆಯಲಿದೆ.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ ನಗರ್ತ ಸಮುದಾಯದ ಸಂಪೂರ್ಣ ಶ್ರಮದಿಂದ ಈ ಕಲ್ಲುಗಾಲಿ ರಥೋತ್ಸವವು ನಡೆಯುತ್ತಲಿದ್ದು ದಾವಣಗೆರೆಯ ಹರಪ್ಪನಹಳ್ಳಿಯ ಖ್ಯಾತ ಶಿಲ್ಪಿಗಳಾದ ಜ್ಞಾನೇಶ್ ಹಾಗೂ ಅಮರೇಶ್ ಅವರ ಕೈಚಳಕದಲ್ಲಿ ನಿರ್ಮಾಣವಾಗುತ್ತಿರುವ ರಥೋತ್ಸವಕ್ಕೆ ಕಲ್ಲುಗಳನ್ನು ಪ್ರಸಿದ್ಧ ಕೊಯಿರಾ ಗ್ರಾಮದಿಂದ ತರಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮೆರುಗು ಬರಲಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ. ಸತೀಶ್ಕುಮಾರ್, ರಥೋತ್ಸವ ಕಮಿಟಿಯ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಚ. ವಿಜಯಬಾಬು, ಖಜಾಂಜಿ ಬಸವರಾಜು, ಅ.ಶಿ.ವೈ ನಗರ್ತ ಯುವಕ ಸಂಘದ ಮಾಜಿ ಅಧ್ಯಕ್ಷರಾದ ಸಿ.ಭಾಸ್ಕರ್, ಪುರಸಭಾ ಸದಸ್ಯ ಎಸ್.ಭಾಸ್ಕರ್, ಎಂ.ಆರ್.ಸುರೇಶ್, ಎಂ.ಶಂಕರ್,ಎಲ್ಲಾ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

