ಪಟ್ಟಲದಮ್ಮನ ಹಬ್ಬ
ಭಾರತೀನಗರ: ಸಮೀಪದ ಕಾರ್ಕಳ್ಳಿಯಲ್ಲಿ ಶ್ರೀಪಟ್ಟಲದಮ್ಮನ ಹಬ್ಬದವು ವಿಜೃಂಭಣೆಯಿಂದ ಜರುಗುವುದರ ಮೂಲಕ ಶ್ರೀಬಸವೇಶ್ವರ ದೇವರ ಕೊಂಡ ಮತ್ತು ಜಾತ್ರೆಗೆ ಚಾಲನೆ ನೀಡಲಾಯಿತು. ಗ್ರಾಮದ ಸ್ತ್ರೀಯರು ಮಡೆ ಹೊತ್ತು ಊರಿನ ಹೊರವಲಯದಲ್ಲಿರುವ ಪಟ್ಟಲದಮ್ಮ ದೇವಸ್ಥಾನಕ್ಕೆ ತೆರಳಿ ಹೆಡೆ ಹಿಕ್ಕಿ ಪೂಜೆ ಸಲ್ಲಿಸಿದರು. ಶ್ರೀಪಟ್ಟಲದಮ್ಮ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಪೂಜೆಹೊತ್ತಿದ್ದ ಅರ್ಚಕರು ಕೊಂಡವನ್ನು ಹಾಯ್ದರು. ನಂತರ ಪಟ್ಟಲದಮ್ಮಮನಿಗೆ ಟಗರನ್ನು ಬಲಿಕೊಡಲಾಯಿತು.
ಲಕ್ಷ್ಮೀ ನರಸಿಂಹ ಬ್ರಹ್ಮರಥೋತ್ಸವ
ಮಾಗಡಿ: ತಾಲೂಕಿನ ಕುದೂರು ಹೋಬಳಿ ಸುಗ್ಗನಹಳ್ಳಿಯ ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಾ.16 ರಂದು ಭಾನುವಾರ ಮಧ್ಯಾಹ್ನ 12 ಗಂಟೆಯಿಂದ 12.40 ರವರೆಗೆ ಬ್ರಹ್ಮರಥೋತ್ಸವ ಜರುಗಲಿದೆ ಪ್ರಕಟಣೆ ತಿಳಿಸಿದೆ. ಬ್ರಹ್ಮರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದ್ದು, ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅರ್ಚಕ ನರಸಿಂಹಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಗನಾಥಸ್ವಾಮಿ ಜಾತ್ರೋತ್ಸವ
ಮಾಗಡಿ: ತಾಲೂಕಿನ ತಿಪ್ಪಸಂದ್ರ ಹೋಬಳಿ, ದೊಡ್ಡ ಮುದಿಗೆರೆಯಲ್ಲಿರುವ ಪುರಾಣ ಪ್ರಸಿದ್ಧ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.16 ರಂದು ಭಾನುವಾರ ಮಧ್ಯಾಹ್ನ 12 ಗಂಟೆಯಿಂದ 12.40 ರವರೆಗೆ ಬ್ರಹ್ಮ ರಥೋತ್ಸವ ಜರುಗಲಿದೆ ಎಂದು ಪಾರುಪತ್ತೆಗಾರ ಎಂ.ವಿ.ದರ್ಶನ್ ತಿಳಿಸಿದ್ದಾರೆ. ಬ್ರಹ್ಮ ರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಜರುಗಲಿದ್ದು, ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮತದಾರ ನೋಂದಣಿ ವಿಶೇಷ ಆಂದೋಲನ
ಮಾಗಡಿ: ಚುನಾವಣಾ ಆಯೋಗದ ನಿರ್ದೇಶನದಂತೆ ಮಾ.9 ರಂದು ನಡೆದ ಮತದಾರರ ನೊಂದಾಣಿ ಆಂದೋಲನಾ ಕಾರ್ಯಕ್ರಮದಲ್ಲಿ ಮತಗಟ್ಟೆ ಸಂಖ್ಯೆ 117, 118, 122, 128, 166, 177, 187, 188 ಮತ್ತು 204ರ ಮತಗಟ್ಟೆಗಳಿಂದ ಅರ್ಜಿ ಸ್ವೀಕಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾ.16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಮತದಾರರ ನೋಂದಣಿ ವಿಶೇಷ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಬಿಎಲ್ಒಗಳು ಆಯಾ ಮತಗಟ್ಟೆಗಳಲ್ಲಿ ಹಾಜರಿದ್ದು, ಅರ್ಜಿ ಸ್ವೀಕರಿಸುವಂತೆ ಸೂಚಿಸಲಾಗಿದೆ. ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳುವಂತೆ ತಹಸೀಲ್ದಾರ್ ಶಿವಕುಮಾರ್ ಮನವಿ ಮಾಡಿದ್ದಾರೆ.
ಕುದುರೆ ಉತ್ಸವ
ಮಾಗಡಿ: ಪಟ್ಟಣದ ತಿರುಮಲೆ ಗ್ರಾಮದಲ್ಲಿ ಗ್ರಾಮ ದೇವತೆ ಆದಿಶಕ್ತಿ ಬಿಸಿಲು ಮಾರಮ್ಮದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಮಾ.16 ರಂದು ಸಂಜೆ ದೇವಿಯ ಕುದುರೆ ಉತ್ಸವ ನಡೆಯಲಿದ್ದು, ಮಾ.17ರಂದು ಆದಿಶಕ್ತಿ ಬಿಸಿಲು ಮಾರಮ್ಮದೇವಿಗೆ ತಂಬಿಟ್ಟಿನಾರತಿ ನೈವೇದ್ಯ, ವಿಶೇಷ ಪೂಜೆಯನ್ನು ಮಹಿಳೆಯರು ನೆರವೇರಿಸಲಿದ್ದಾರೆ. ಮಾ.18ರಂದು ಉತ್ಸವ ಜರುಗಲಿದೆ ಎಂದು ಅರ್ಚಕ ತಿರುಮಲಯ್ಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

