ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Published On :

ಬಿಸಿಲು ಮಾರಮ್ಮ ದೇವಿ ಉತ್ಸವ
ಮಾಗಡಿ: ಪಟ್ಟಣದ ತಿರುಮಲೆ ಮತ್ತು ಹೊಸಪೇಟೆ ಗ್ರಾಮದಲ್ಲಿ ಗ್ರಾಮ ದೇವತೆ ಆದಿಶಕ್ತಿ ಬಿಸಿಲು ಮಾರಮ್ಮದೇವಿ ಜಾತ್ರಾ ಮಹೋತ್ಸವ ನೆರವೇರಿತು.  ಮಹಿಳೆಯರು ಮತ್ತು ಮಕ್ಕಳು ಹೊಂಬಾಳೆ ಮುಡಿಸಿ, ಬೇವು, ಹೂವಿನಿಂದ ಅಲಂಕರಿಸಿದ ತಂಬಿಟ್ಟಿನಾರತಿ ಹೊತ್ತು ದೇವಾಲಯ ಪ್ರದಕ್ಷಣೆ ಹಾಕಿ, ಅರಿಶಿಣ, ಕುಂಕುಮ, ಬಳೆ, ರವಿಕೆ, ಮಡಲಕ್ಕಿ ಅರ್ಪಿಸಿದರು.  ಸಂಜೆ ಮಾರಮ್ಮದೇವಿ ಹೊತ್ತ ಅರ್ಚಕರು ತಮಟೆ, ಮಂಗಳವಾದ್ಯ ದೊಂದಿಗೆ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿ ಉತ್ಸವ ನಡೆಸಿದರು. ಇದೇ ವೇಳೆ ಅಲಮರದಜ್ಜಿ, ಕಿಚಾಮಾಸ್ತಿ ವೇಷ ಧರಿಸಿ ಸಂಪ್ರದಾಯಕ ಆಚರಣೆ ನಡೆಯಿತು.
ವಿವಾಹಿತೆ ಮೇಲೆ ಅತ್ಯಾಚಾರ; ಬಂಧನ
ಬೆಂಗಳೂರು: ಕೊಲ್ಕತಾ ಮೂಲದ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಖಾಸಗಿ ಕಂಪನಿ ಉದ್ಯೋಗಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕತ್ರಿಗುಪ್ಪೆ ವಿವೇಕಾನಂದ ನಗರ ನಿವಾಸಿ ಸಿ. ಪ್ರಶಾಂತ್ (26) ಬಂಧಿತ. ಆಂಧ್ರ ಪ್ರದೇಶ ಮೂಲದ ಈತ ವಿವಾಹವಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೌಟುಂಬಿಕ ಕಲಹದಿಂದ ಪತಿಯಿಂದ ದೂರವಾಗಿದ್ದ ಸುಮಾರು 33 ವರ್ಷದ ಮಹಿಳೆ ಕೆಲ ತಿಂಗಳುಗಳಿಂದ ತನ್ನ 8 ವರ್ಷದ ಪುತ್ರಿ ಜತೆ ಬನ್ನೇರುಘಟ್ಟ ರಸ್ತೆಯ ಮಂಜುನಾಥ ಬಡಾವಣೆಯಲ್ಲಿ ವಾಸವಿದ್ದರು. ಈ ವೇಳೆ ಪ್ರಶಾಂತ್ ಪರಿಚಯವಾಗಿತ್ತು ಇಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಆಗ ಪ್ರಶಾಂತ್ ವಿವಾಹವಾಗುವ ಭರವಸೆ ನೀಡಿ ಆಕೆಯನ್ನು ಲೈಂಗಿಕ ಸುಖಕ್ಕೆ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಸಮರ್ಪಕ ಸಾರಿಗೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಮಾಗಡಿ: ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ಅರಳಿಕಟ್ಟೆದೊಡ್ಡಿ ಗ್ರಾಮಕ್ಕೆ  ಅಸಮರ್ಪಕ ಸಾರಿಗೆ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ದಿಢೀರ್ ಪ್ರಭಟನೆ ನಡೆಸಿದರು.
ನಿತ್ಯ ನೂರಾರು ಮಂದಿ ಅರಳಿಕಟ್ಟೆ ಗ್ರಾಮದಿಂದ ಸಂಚರಿಸುತ್ತಾರೆ. ಆದರೆ ಅಸಮರ್ಪಕ ಸೇವೆಯಿಂದ ಗ್ರಾಮೀಣ ಭಾಗದ ಜನತೆ ತುಂಬ ತೊಂದರೆಯಾಗುತ್ತಿದೆ. ಇಲ್ಲಿನ ಟಿಸಿಗಳು ಹಾರಿಕೆ ಉತ್ತರ ನೀಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಸಮರ್ಪಕ ಸಾರಿಗೆಯಿಂದಾಗಿ ಗ್ರಾಮೀಣ ಜನರ ಜೀವನ ಕಷ್ಟಕರವಾಗಿದೆ.
ಈಗ ಪರೀಕ್ಷಾ ಸಮಯವಾಗಿದ್ದು, ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮೀಣ ಭಾಗದ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.