ಕೋಟ ದಾಖಲೆ ಪರಿಶೀಲನೆ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಮಾ.25ರಂದು ನಡೆದ ನಾನ್ ಇನ್‌ಸರ್ವಿಸ್ ಕೋಟದ ದಾಖಲೆ ಪರಿಶೀಲನೆಯಲ್ಲಿ 858 ಅಭ್ಯರ್ಥಿಗಳು ಭಾಗವಹಿಸಿದ್ದರು. ಮಾ.27ರಿಂದ ನಾನ್ ಇನ್ ಸರ್ವಿಸ್ ಕೋಟದ 1201ರಿಂದ 2400ನೇ ರ್ಯಾಂಕ್‌ವರೆಗಿನ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುವುದು. ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಆನ್‌ಲೈನ್ ಮೂಲಕ ಸೀಟು ಹಂಚಿಕೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ವಿವರಗಳಿಗೆ -ಡಿಡಿಠ://್ಞಜಛ.್ಞಛ್ಠ.ಟ್ಝ್ಛಿ.್ಝಟಿ.
ನಕಲು: 17 ಡಿಬಾರ್
ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಾ.26ರಂದು ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯಲ್ಲಿ ಅವ್ಯವಹಾರ ಎಸಗಿದ ಬಳ್ಳಾರಿಯ 2, ಬಿಜಾಪುರದ 2, ಧಾರವಾಡ ಹಾಗೂ ಹಾಸನದಲ್ಲಿ ಬದಲಿ ಪರೀಕ್ಷೆ ಬರೆಯುತ್ತಿದ್ದ ತಲಾ 2, ಗುಲ್ಬರ್ಗಾ, ಚಾಮರಾಜನಗರದ ತಲಾ 1 ಹಾಗೂ ರಾಯಚೂರಿನ 2 ವಿದ್ಯಾರ್ಥಿಗಳು ಸೇರಿದಂತೆ 17 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿರುವುದಾಗಿ ಪ್ರಕಟಣೆ ತಿಳಿಸಿದೆ.
ರೌಡಿ ವಜೀರ್, ಸಹಚರರ ಸೆರೆ
ಬೆಂಗಳೂರು: ಕೆ.ಆರ್. ಮಾರುಕಟ್ಟೆ ಫುಟ್‌ಪಾತ್ ವ್ಯಾಪಾರಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ರೌಡಿ ವಜೀರ್ ಹಾಗೂ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೀಲಸಂದ್ರ ನಿವಾಸಿ ವಜೀರ್ (38), ಟಿಪ್ಪುನಗರ ನಿವಾಸಿ ಇನಾಯತ್ (43), ಸಿಟಿ ಮಾರುಕಟ್ಟೆ ನಿವಾಸಿ ಹಬೀಬ್ (33), ಬನಶಂಕರಿ ಉಮರ್‌ಬಾಗ್ ಬಡಾವಣೆಯ ಸೈಯ್ಯದ್ ಕಲೀಂ ಹಾಗೂ ಆರ್.ಆರ್.ನಗರದ ಶಿವಣ್ಣ ಬಂಧಿತರು.ಆರೋಪಿಗಳು ಕೆ.ಆರ್.ಮಾರುಕಟ್ಟೆ ಪುಟ್‌ಪಾತ್ ವ್ಯಾಪಾರಿಗಳ ಸಂಘದ ಹೆಸರಿನಲ್ಲಿ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳ ವ್ಯಾಪಾರಿಗಳ ಬಳಿ ಅಕ್ರಮವಾಗಿ ಚಂದಾ ವಸೂಲಿ ಮಾಡುತ್ತಿದ್ದರು.
ನಕಲಿ ಸಿಡಿ: ಬಂಧನ
ಬೆಂಗಳೂರು: ಕನ್ನಡ, ಹಿಂದಿ, ತಮಿಳು ಸೇರಿದಂತೆ ವಿವಿಧ ಭಾಷೆಗಳ ನಕಲಿ ಸಿಡಿ, ಡಿವಿಡಿಗಳನ್ನು ಮಾರಾಟ ಮಾಡುತ್ತಿದ್ದ ಬಾಲಾಜಿ (24) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1.2 ಲಕ್ಷ ಬೆಲೆಬಾಳುವ ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮಲೆಯಾಳಂ ಭಾಷೆಗಳ 2275 ನಕಲಿ ಡಿವಿಡಿಗಳು, 95 ಎಂಪಿ ತ್ರಿ ಸಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬಾಲಾಜಿ ಹೊಸೂರು ರಸ್ತೆ ಜಂಕ್ಷನ್ ಗೋವಿಂದಚೆಟ್ಟಿ ಪಾಳ್ಯದ ಫುಟ್‌ಪಾತ್ ಮೇಲೆ ನಕಲಿ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

