ಸತತ 12 ವರ್ಷವೂ ಶತಕ!
ಕನಕಪುರ: ತಾಲೂಕಿನ ರಸ್ತೆ ಜಕ್ಕಸಂದ್ರ ಗ್ರಾಮದ ಜೈನ್ ವಿದ್ಯಾನಿಕೇತನ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ 12 ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸಿದೆ. ಶಾಲೆಯಲ್ಲಿ ಪರೀಕ್ಷೆಗೆ ಕುಳಿತ 159 ವಿದ್ಯಾರ್ಥಿಗಳಲ್ಲಿ 37 ಮಂದಿ ಅತ್ಯುನ್ನತ ಶ್ರೇಣಿ, 106 ಮಂದಿ ಪ್ರಥಮದರ್ಜೆ ಉಳಿದವರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಯ ಕು.ವರ್ಣಿತಾ 607 ಅಂಕ, ಎಂ.ಬಿ.ಅನನ್ಯಾ 602 ಅಂಕ, ಹಾಗೂ ಡಿ.ಎಸ್.ಸ್ನೇಹಾ 600 ಅಂಕ ಪಡೆದು ಕೀರ್ತಿ ತಂದಿದ್ದಾರೆ ಎಂದು ಜೈನ್ ವಿದ್ಯಾನಿಕೇತನ ಶಾಲೆ ಅಭಿನಂದಿಸಿದೆ.
ಬ್ಲಾಸಂ ಪ್ರೌಢಶಾಲೆ 5ನೇ ಬಾರಿ ಶತಕ
ಕನಕಪುರ: ಪಟ್ಟಣದ ಬ್ಲಾಸಂ ಪ್ರೌಢಶಾಲೆ ಸತತವಾಗಿ ಐದನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ. ಶಾಲೆಯ 8 ವಿದ್ಯಾರ್ಥಿಗಳು ಉನ್ನತಶ್ರೇಣಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲೆ ಗಂಗಾಂಬಿಕಾ ಅಭಿನಂದನೆ ಸಲ್ಲಿಸಿದ್ದಾರೆ. ಕನಕಪುರ ತಾಲೂಕು ಹಲಸೂರು ಗ್ರಾಮದ ಪ್ರಿಯದರ್ಶಿನಿ ವಸತಿ ಪ್ರೌಢಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಕುಳಿತ 27 ವಿದ್ಯಾರ್ಥಿಗಳಲ್ಲಿ ಏಳು ಮಂದಿ ಉನ್ನತ ಶ್ರೇಣಿ, 14 ಪ್ರಥಮದರ್ಜೆ ಹಾಗೂ ಒಂದು ತೇರ್ಗಡೆಯಾಗಿದೆ.
ವಿವಿದೋದ್ಧೇಶ ಪ್ರೌಢಶಾಲೆಗೆ ಶೇ.85
ಕನಕಪುರ: ಪಟ್ಟಣದ ಗ್ರಾಮಾಂತರ ವಿವಿದೋದ್ಧೇಶ ಪ್ರೌಢಶಾಲೆ ಶೇ.85 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಕುಳಿತ 266 ವಿದ್ಯಾರ್ಥಿಗಳಲ್ಲಿ ಮೂವರು ಅತ್ಯುನ್ನತ ಶ್ರೇಣಿ, 68 ಪ್ರಥಮ, 55 ದ್ವಿತೀಯ ಹಾಗೂ 97 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ಆರ್.ನಾಗರಾಜು, ಆರ್ಇಎಸ್ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ, ಕಾರ್ಯದರ್ಶಿ ಸಿ.ರಮೇಶ್ ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

