ಭಾವಚಿತ್ರಗಳಿಗೆ ಲೇಬಲ್
ಬಳ್ಳಾರಿ: ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರಕ್ಕೆ ಲೇಬಲ್! ಆಶ್ಚರ್ಯ ಪಡಬೇಡಿ. ರಾಜಕೀಯ ಪಕ್ಷವೊಂದರ ಬೆಂಬಲಕ್ಕೆ ನಿಂತಿರುವ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಮುಖ ಮತ್ತು ಹೆಸರಿಗೆ ಬಳ್ಳಾರಿ ಜಿಲ್ಲೆಯ ಮತಗಟ್ಟೆಗಳಲ್ಲಿ ಪೇಪರ್ ಅಂಟಿಸಿ, ಕಾಣದಂತೆ ವ್ಯವಸ್ಥೆ ಮಾಡಲಾಗಿತ್ತು.
ಸಾಹಿತಿಗಳ ಬಗ್ಗೆ ಜನಸಾಮಾನ್ಯರಿಗೂ ಗೌರವವಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂದರೆ ವಿಶೇಷ ಮನ್ನಣೆ. ಆದರೆ ಈ ಬಾರಿ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡಿದ ಯು.ಆರ್. ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ನಡೆಯನ್ನು ಸಾಮಾನ್ಯ ಮತದಾರರು ಟೀಕಿಸಿದ್ದಾರೆ.
ಮೌಲ್ಯ ಕುಸಿತ
ಜ್ಞಾನಪೀಠ ಪುರಸ್ಕೃತರು ಎಲ್ಲರಿಗೂ ಮಾದರಿ. ಶಾಲಾ ಕೊಠಡಿಗಳಲ್ಲಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ, ಮಕ್ಕಳಿಗೂ ಅವರ ಸಾಹಿತ್ಯ ಸಾಧನೆ ಪರಿಚಯಿಸಲಾಗುತ್ತದೆ. ಆದರೆ, ಈ ಇಬ್ಬರು ಈ ಬಾರಿ ರಾಜಕೀಯ ಪಕ್ಷದ ಬೆಂಬಲಕ್ಕೆ ನಿಂತಿದ್ದರಿಂದ ಚುನಾವಣೆ ವೇಳೆ ಅವರ ಮುಖ ಕಾಣದಂತೆ ಮಾಡಬೇಕಾಯಿತು. ಇದು ಸಾಹಿತ್ಯಾಸಕ್ತರಿಗೆ ಬೇಸರ ಉಂಟುಮಾಡಿತು. ಆದರೂ, ನ್ಯಾಯಸಮ್ಮತ ಮತದಾನಕ್ಕೆ ಅದು ಅನಿವಾರ್ಯವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

