ಬೀದರ್

ಕಾರ್ಮಿಕ ನಿರೀಕ್ಷಕರ ಅಮಾನತು

Published On :

ಬೀದರ್: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಗಳೆಂದು ನೋಂದಣಿ ಮಾಡುವ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ವಿಳಂಬ ಮತ್ತು ಬಾಕಿಯಿಟ್ಟು, ಸುಳ್ಳು ಮಾಹಿತಿಯನ್ನು ನೀಡಿರುವ ಆರೋಪದ ಮೇಲೆ ಕಾರ್ಮಿಕ ನಿರೀಕ್ಷಕರಾದ ಶಾಮರಾವ್ ಅವರ ವಿರುದ್ಧ ಶಿಸ್ತು ಕ್ರಮ ಬಾಕಿಯಿಟ್ಟು ಇಲಾಖೆ ಅಮಾನತುಗೊಳಿಸಿದೆ. ಸದರಿ ಅಮಾನತಿನಲ್ಲಿರುವ ಶಾಮರಾವ್ ಅವರ ಕಾರ್ಯಭಾರವನ್ನು ಭಾಲ್ಕಿ ವೃತ್ತದ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ್ ಕಾರ್ಯವನ್ನು ವಹಿಸಿಕೊಂಡಿರುತ್ತಾರೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.
ತರಬೇತಿಗೆ ಆಯ್ಕೆ, ಬೀಳ್ಕೊಡುಗೆ
ಬೀದರ್: ನಗರದ ನೆಹೆಮಿಯಾ ಮೆಮೋರಿಯಲ್ ಶಾಲೆಯ ಹಳೇ ವಿದ್ಯಾರ್ಥಿ ಅಕ್ಷಯ ಡ್ಯಾನಿಯಲ್  3 ತಿಂಗಳ ವಿಶೇಷ ತರಬೇತಿಗಾಗಿ ಕ್ಯಾಲಿಫೋರ್ನಿಯಾದಲ್ಲಿ ಪಡೆಯಲು ಹೋಗುತ್ತಿರುವ ಪ್ರಯುಕ್ತ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಯ ಕಾರ್ಯಕ್ಷಮತೆಗೆ ಗೌರವ ಸಂದಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಡಾ.ಮನಮೋಹನ ನೆಹೆಮಿಯಾ, ಜಿಲ್ಲಾ ಕ್ರಿಶ್ಚಿಯನ್ ಯುನಿಯನ್ ಅಧ್ಯಕ್ಷ ಸುರೇಶ, ಆಲ್ಬರ್ಟ್ ಕೋಟೆ, ಎಜಿಕೇಲ್ ಹಾಗೂ ಶಾಲೆಯ ಸಿಬ್ಬಂದಿ ಶುಭ ಕೋರಿದರು.
ಮುಷ್ಕರ: ಪ್ರೌಢಶಾಲೆ ಶಿಕ್ಷಕರ ಸಂಘ ಬೆಂಬಲ
ಜವಾಹರ್ ಲಾಲ್ ನೆಹರು ನವೋದಯ ವಿದ್ಯಾಲಯದ ಸಿಬ್ಬಂದಿಗೆ ಪಿಂಚಣಿ ನೀಡುವಂತೆ ಒತ್ತಾಯಿಸಿ ಫೆ. 10 ರಿಂದ ನಡೆಸಲಾಗುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರ ಆದೇಶದ ಮೇರೆಗೆ ಜಿಲ್ಲಾ ಘಟಕದಿಂದ ಸಂಪೂರ್ಣ ಬೆಂಬಲ ಘೋಷಿಸಿದೆ. ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ್, ಶಿಂಗೆ ಸೂರ್ಯಕಾಂತ ಅವರು ಸಿಬ್ಬಂದಿ ನ್ಯಾಯಯುತ ಬೇಡಿಕೆಗೆ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿ  1972ರ ಅನ್ವಯ ಸಿಸಿಎಸ್ ನಿಯಮದಂತೆ ಪಿಂಚಣಿ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಚಾಂಗಲೇರಾದಲ್ಲಿ ಬೆಲ್ದಾಳೆ ಪಾದಯಾತ್ರೆ
ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಕೆಜೆಪಿ ಮುಖಂಡ ಡಾ. ಶೈಲೇಂದ್ರ ಬೆಲ್ದಾಳೆ ಚಾಂಗಲೇರಾದಲ್ಲಿ ಪಾದಯಾತ್ರೆ ನಡೆಸಿದರು. ಗ್ರಾಮದ ಪ್ರತಿಯೊಂದು ಮನೆ ಮನೆಗೆ ಭೇಟಿಯಾಗಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ ಕುಡಿವ ನೀರು, ರಸ್ತೆ, ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಶೀಘ್ರವೇ ಕಲ್ಪಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ತಿಳಿಸುವುದಾಗಿ ಡಾ. ಶೈಲೇಂದ್ರ ಬೆಲ್ದಾಳೆ ಭರವಸೆ ನೀಡಿದರು. ಈ ಮುನ್ನ ಜಿಪಂ ಸದಸ್ಯರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಚಾಂಗಲೇರ್ ಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಜಿಪಂ ಸದಸ್ಯರಾದ ಪ್ರಭು ಮೆಂಗಾ, ಪ್ರೇಮಸಿಂಗ್ ಪವಾರ, ಮಸ್ತಾನ ಪಟೇಲ್, ವೀರಯ್ಯ ಸ್ವಾಮಿ, ಅಶೋಕ, ರಮೇಶ, ಮಹಾದೇವ ಸ್ವಾಮಿ, ಲಕ್ಷ್ಮಣ ಸಿಂಧೋಲ, ಧನರಾಜ ಕಡ್ಯಾಳ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.