ಬೀದರ್

ಪ್ರಬಂಧ, ಕವನ ಸ್ಪರ್ಧೆಗೆ ಆಹ್ವಾನ

Published On :

ಬೀದರ್: ಜಿಲ್ಲೆಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇಂದಿನ ಜಗತ್ತಿಗೆ ಕಂಪ್ಯೂಟರ್ ಒಂದು ಕೊಡುಗೆ ಅಥವಾ ಶಾಪ  ಎಂಬ ವಿಷಯ ಕುರಿತು ನಗರದ ಅಸ್ತಿತ್ವ ವೆಲ್ಫೇರ್ ಸಂಸ್ಥೆಯಿಂದ ಪ್ರಬಂಧ ಮತ್ತು ಕವನ ಸ್ಪರ್ಧೆ ಆಯೋಜಿಸಿದೆ. ಸಂಸ್ಥೆಯ ಉಪಾಧ್ಯಕ್ಷರಾದ ದುರ್ಗೇಶ ಶಾಸ್ತ್ರಿ ಪ್ರಕಟಣೆ ಹೊರಡಿಸಿದ್ದು ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ವಿಷಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಪ್ರಥಮ ಪುರಸ್ಕಾರ ರು. 1 ಸಾವಿರ ಹಾಗೂ ದ್ವಿತೀಯ ಪುರಸ್ಕಾರ ರು. 500 ನೀಡಲಾಗುವುದು. ಸ್ಪರ್ಧೆಗಳು ಕನ್ನಡದಲ್ಲಿದ್ದು, ಪ್ರಬಂಧ 1500 ಪದಗಳನ್ನು ಮಿರಬಾರದು, ಪ್ರಬಂಧ ಅಥವಾ ಕವನ ಕಳುಹಿಸಲು ಫೆ. 20 ಕೊನೆ ದಿನಾಂಕ. ಕವನ ಹಾಗೂ ಪ್ರಬಂಧಗಳು ಅಸ್ತಿತ್ವ ವೆಲ್ಫೇರ್ ಸಂಸ್ಥೆ, 9-8-498 ಬಸವನಗರ ಕಾಲೇನಿ, ಬಿವಿಬಿ ಕಾಲೇಜು ರಸ್ತೆ ಬೀದರ್- 585403 ವಿಳಾಸಕ್ಕೆ ಕಳುಹಿಸಬಹುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.