ಬೀದರ್

ಬಾಲಕಿ ಮೇಲೆ ಬಲಾತ್ಕಾರ?

Published On :

ಬೀದರ್: ಜಿಲ್ಲೆಯಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮುಂದುವರಿದಿದ್ದು, ಇದೀಗ ಕಮಲಾನಗರ ಠಾಣಾ ವ್ಯಾಪ್ತಿಯ ಖತಗಾಂವ್ ಗ್ರಾಮದಲ್ಲಿ 10 ವರ್ಷದ ಬಾಲಕಿಯನ್ನು ಯುವಕನೊಬ್ಬ ಬಲತ್ಕಾರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
   ಮೂಲತಃ ಔರಾದ್ ತಾಲೂಕಿನ ಮಾನೂರ್ ಗ್ರಾಮದ ಬಾಲಕಿಯ ತಂದೆ-ತಾಯಿ ಇಬ್ಬರೂ ಯಾದಗಿರಿ ಜಿಲ್ಲೆಯ ಕಬ್ಬಿನ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕಾಗಿ ತೆರಳಿದ್ದಾರೆ. ಈಕೆಯನ್ನು ಖತಗಾಂವ್ ಗ್ರಾಮದ ಸೋದರ ಮಾವನ ಮನೆಗೆ ಕಳುಹಿಸಲಾಗಿತ್ತು.
  ಶನಿವಾರ ಬೆಳಿಗ್ಗೆ 10.30ರ ಸುಮಾರಿಗೆ ಸೋದರ ಮಾವನ ಹೊಲಕ್ಕೆ ತೆರಳಿ ರೊಟ್ಟಿ ಕೊಟ್ಟು ಬರಲು ತೆರಳುತ್ತಿದ್ದ ಬಾಲಕಿಗೆ ಮಾರ್ಗ ಮಧ್ಯೆ ಅದೇ ಗ್ರಾಮದ ಶ್ರೀಮಂತ ಮೇತ್ರೆ (28) ಎಂಬ ಯುವಕ ದಾರಿ ತಪ್ಪಿಸಿ ಬೇರೆಡೆ ಕರೆದುಕೊಂಡು ಹೋಗಿ, ಬಲತ್ಕರಿಸಿದ್ದಾನೆ ಎಂದು ಬಾಲಕಿಯ ಹೇಳಿಕೆ ಮೇರೆಗೆ ಸಂಬಂಧಿಕರು ಕಮಲಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
  ಸದ್ಯಕ್ಕೆ ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಬೀದರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು ಸ್ಥಳಕ್ಕೆ ಡಿವೈಎಸ್ಪಿ ಮಾಲಗತ್ತಿ, ಸಿಪಿಐ ಬಿಪಿ ಚಂದ್ರಶೇಖರ್ ಭೇಟಿ ನೀಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.