ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ
ಹುಮನಾಬಾದ್: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರು. ಪರಿಹಾರ ಧನದ ಚೆಕ್ ಫಲಾನುಭವಿಗಳಿಗೆ ಶಾಸಕ ರಾಜಶೇಖರ ಪಾಟೀಲ್ ವಿತರಿಸಿದರು. ತಾಲೂಕಿನ ರಾಂಪೂರ ಸಾರ್ವಜನಿಕರು ಗುಲ್ಬರ್ಗ ಜಿಲ್ಲೆಯ ಹಿಪ್ಪರ್ಗಾ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಐದು ಜನರು ಮೃತ ಪಟ್ಟಿದರು. ಮೃತರ ಕುಟುಂಬಗಳು ಕೃಷಿ ಕಾರ್ಮಿಕ ಕುಟುಂಬಗಳಾಗಿವೆ. ಗ್ರಾಮದ ವಾರಸುದಾರರಾದ ರಾಮಶೆಟ್ಟಿ ಭೀಮಣ್ಣಾ, ಸರಸ್ವತಿ ಸಂಗಣ್ಣಾ, ಈರಮ್ಮಾ ಸಂಗಣ್ಣಾ ಹಾಗೂ ಹಣಮಂತ ಬಸವಣಪ್ಪಾ ಅವರಿಗೆ ತಲಾ ಒಂದು ಲಕ್ಷ ರು. ಗಳಂತೆ ಪರಿಹಾರ ಧನದ ಚೆಕ್ ವಿತರಿಸಲಾಯಿತು. ಜಿಪಂ ಸದಸ್ಯ ವೀರಣ್ಣಾ ಪಾಟೀಲ್, ತಹಸೀಲ್ದಾರ್ ತಿಪ್ಪಣ್ಣಾ ಸಾಲಿವಾಲೆ, ಪುರಸಭೆ ಸದಸ್ಯ ಅಫಸರ್ಮಿಯ್ಯಾ, ಮುಖಂಡರಾದ ರಾಜಕುಮಾರ ಇಟಗಿ, ಪ್ರಕಾಶ ಕಾಡಗೊಂಡ, ಮನೋಜಕುಮಾರ ಕೋಟೆಕರ್, ಜಗದೀಶ ಮೂಲಗೆ, ಶಿವಕುಮಾರ ಶಂಕರಶಟ್ಟಿ, ಮಾಣೀಕ ರಾವ್ ಹಾವಶಟ್ಟಿ, ವಿವೇಕಾನಂದ ಕನಸನಾಳೆ, ಚಂದ್ರಶೇಖರ ಪಾಟೀಲ್ ಅಲ್ಲೂರ ಮತ್ತಿತರರು ಉಪಸ್ಥಿತರಿದ್ದರು.
ದಿನದ ತರಬೇತಿ
ಬೀದರ್: ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ, ಬೀದರ್ ಮತ್ತು ಪ್ರವರ್ಧ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಜೈವಿಕ ಇಂಧನ ಕುರಿತು ಕೃಷಿ ವಿಜ್ಞಾನ ಕೇಂದ್ರ ಬೀದರ್ನಲ್ಲಿ ಶನಿವಾರ ಒಂದು ದಿನದ ತರಬೇತಿ ನೆರವೇರಿತು. ಡಾ. ಸುನೀಲ್ ಕುಲ್ಕರ್ಣಿ ಉದ್ಘಾಟಿಸಿದರು, ತರಬೇತಿಯಲ್ಲಿ ರೈತರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಭಾಗವಹಿಸಿದರು. ನಿಂಗದಳ್ಳಿ ಮಲ್ಲಿಕಾರ್ಜುನ ಅವರು ಜೈವಿಕ ಇಂಧನ ಉತ್ಪಾದನೆ ಮತ್ತು ಉಪ ಉತ್ಪನ್ನಗಳ ಬಳಕೆ ಕುರಿತು ತರಬೇತಿ ನೀಡಿದರು. ಇಂಧನ ಉತ್ಪಾದನಾ ಘಟಕ, ಪ್ರಯೋಗಾಲಯದಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಯಿತು. ಪ್ರವರ್ಧ ಸಂಸ್ಥೆಯ ಬಸವರಾಜ ಡಾ. ಆರ್.ಎಲ್. ಜಾಧವ್, ರವಿ ಇತರೆ ಸಿಬ್ಬಂದಿ ಇದ್ದರು.
ಇಂದು ಉಜ್ಜಯನಿ ಜಗದ್ಗುರುಗಳ ಆಗಮನ
ತಾಲೂಕಿನ ಚಾಂಬೋಳ ಗ್ರಾಮಕ್ಕೆ ಉಜ್ಜಯನಿ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾ.17ರಂದು ಆಗಮಿಸಲಿದ್ದಾರೆ. ಬೆ.10ಕ್ಕೆ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ ಹಾಗೂ ಗುರು ರುದ್ರಮುನೇಶ್ವರ ಸಂಸ್ಥಾನ ಮಠದ ಪೂಜ್ಯ ರುದ್ರಮುನಿ ಪಟ್ಟದ್ದೇವರ 50ನೇ ಪಟ್ಟಾಭೀಷೇಕದ ರಜತ ಮಹೋತ್ಸವದ ನಿಮಿತ್ತ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಲಿದೆ. ಬೆ.6ಕ್ಕೆ ಸಂಗೀತ ರುದ್ರಾಭೀಷೇಕ, ಮಹಾ ಪ್ರಸಾದ, ಸಂಜೆ 4ಕ್ಕೆ ಧರ್ಮಸಭೆ, ಮಾ.18ರಂದು ಬೆ.5ಕ್ಕೆ ಅಗ್ನಿ ಪ್ರವೇಶ, 8ಕ್ಕೆ ಜಂಗಿ ಕುಸ್ತಿ ಕಾರ್ಯಕ್ರಮ ಜರುಗಲಿದೆ. ಕಾರಣ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ದರ್ಶನ ಪಡೆಯಬೇಕೆಂದು ಚಾಂಬೋಳ ಮಠದ ಮುರುಘೇಂದ್ರ ದೇವರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

