ಬೀದರ್

ಶರಣ ಸಂಸ್ಕೃತಿ ಯಾತ್ರೆಗೆ ಭವ್ಯ ಸ್ವಾಗತ

Published On :

ಕನ್ನಡಪ್ರಭ ವಾರ್ತೆ, ಬೀದರ್, ಮಾ.16
ಬಸವ ಜಯಂತಿ ಶತಮಾನೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಬಸವ ಸಮಿತಿ ಸಹಯೋಗದೊಂದಿಗೆ ಆಯೋಜಿಸಿರುವ ಶರಣ ಸಂಸ್ಕೃತಿ ಮಹಾಯಾತ್ರೆಯನ್ನು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ರಾತ್ರಿ ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು.
  ಮಹಾಯಾತ್ರೆಯು ಶುಕ್ರವಾರ ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ವಿ.ಕೆ. ಸಲಗರ ಗ್ರಾಮದ ಮೂಲಕ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ, ಬಗದೂರಿ, ಯರಂಡಿ, ಮುಡಬಿ, ಸಸ್ತಾಪುರ ಕ್ರಾಸ್ ಮಾರ್ಗವಾಗಿ ಬಸವಕಲ್ಯಾಣ ತಲುಪಿದ್ದು ನಂತರ ಅಲ್ಲಿಂದ ಮಾ.16ರಂದು ಬಸವಕಲ್ಯಾಣದಿಂದ ಬೇಲೂರು, ಹುಲಸೂರು, ಭಾತಂಬ್ರಾ, ಭಾಲ್ಕಿ, ಕಮಲನಗರ, ಔರಾದ್, ಸಂತಪುರ, ಜನವಾಡಾ ಮಾರ್ಗವಾಗಿ ಶನಿವಾರ ರಾತ್ರಿ 8ರ ಸುಮಾರಿಗೆ ಬೀದರ್ ನಗರದ ಬಸವೇಶ್ವರ ವೃತ್ತ ತಲುಪಿದೆ.
ಯಾತ್ರೆಯ ಉದ್ದೇಶ: ನಗರದ ಬಸವಸೇವಾ ಪ್ರತಿಷ್ಠಾನ(ಶರಣ ಉದ್ಯಾನ) ತಲುಪಿ ಅಲ್ಲಿ ಸಾಮೂಹಿಕ ಸಮಾರಂಭ ನೆರವೇರಿಸಲಾಯಿತು. ಮಾ.13ರಂದು ಬಸವನಬಾಗೇವಾಡಿಯಿಂದ ಆರಂಭಗೊಂಡು ಏ.14ರಂದು ಕೂಡಲಸಂಗಮದಲ್ಲಿ ಸಮಾರೋಪಗೊಳ್ಳಲಿರುವ ಮಹಾಯಾತ್ರೆಯು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಸಂಚರಿಸುವ ಮೂಲಕ ಶರಣ ಸಂಸ್ಕೃತಿಯನ್ನು ಬಿಂಬಿಸುವುದು ಮತ್ತು ಪಸರಿಸುವುದು ಮಹಾಯಾತ್ರೆಯ ಉದ್ದೇಶವಾಗಿದೆ ಎಂದು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದರು.
  ಮಹಾಯಾತ್ರೆಯನ್ನು ಸ್ವಾಗತಿಸಲು ಅಪಾರ ಸಂಖ್ಯೆಯಲ್ಲಿ ಬಸವಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯನ್ನು ಜಿಲ್ಲಾಧಿಕಾರಿ ಡಾ. ಪಿ.ಸಿ ಜಾಫರ್ ಬರ ಮಾಡಿಕೊಂಡರು. ಶಾಸಕ ರಹೀಮ್ ಖಾನ್, ಜಿಪಂ ಸಿಇಒ ಉಜ್ವಲಕುಮಾರ ಘೋಷ, ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಡಾ. ಗಂಗಾಂಬಿಕೆ ಪಾಟೀಲ್, ಚನ್ನಬಸಪ್ಪ ಹಾಲಹಳ್ಳಿ, ಬಿ.ಜಿ. ಶೆಟಕಾರ್, ಶರಣಪ್ಪ ಮಿಠಾರೆ, ಶ್ರೀಕಾಂತ ಸ್ವಾಮಿ, ಪಂಚಾಕ್ಷರಿ ಪುಣ್ಯಶೆಟ್ಟಿ, ವೈಜನಾಥ ಕಮಠಾಣೆ, ರಮೇಶಕುಮಾರ ಮಠಪತಿ, ಜಗನ್ನಾಥ ಶಿವಯೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಾಂತಕುಮಾರ ಪಾಟೀಲ್, ಡಿಡಿಪಿಐ ಎಚ್‌ಆರ್ ಬಸಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
  ಮಾ.17ರ ಭಾನುವಾರದಂದು ಬೀದರ್‌ದಿಂದ ಹಳ್ಳಿಖೇಡ, ಹುಮನಾಬಾದ್, ಮೊಳಕೇರಾ, ಬಸವತೀರ್ಥ, ಸಣ್ಣ ಹಳ್ಳಿಖೇಡ ಮೂಲಕ ಗುಲ್ಬರ್ಗ ತಲುಪಲಿದೆ.
ಕಮಲನಗರದಲ್ಲಿ...: ಔರಾದ್ ತಾಲೂಕಿನ ಕಮಲನಗರದಲ್ಲಿ ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಜಿಲ್ಲೆಗೆ ಆಗಮಿಸಿದ ಶರಣ ಸಂಸ್ಕೃತಿ ಮಹಾಯಾತ್ರೆಯನ್ನು ಡಾ. ಚನ್ನಬಸವ ವೃತ್ತದ ಸಮೀಪ ತಾಲೂಕು ವೀರಶೈವ ಅಧ್ಯಕ್ಷರಾದ ಪ್ರೊ. ಎಸ್.ಎನ್. ಶಿವಣಕರವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಯಾತ್ರೆಯು ಬಸವೇಶ್ವರ ವೃತ್ತದ ಮಾರ್ಗವಾಗಿ ಅಲ್ಲಮಪ್ರಭು ವೃತ್ತದಲ್ಲಿ ಸಮಾರೋಪಗೊಂಡಿತು. ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಮಾತನಾಡಿ, ಬಸವಾದಿ ಶರಣರ ತತ್ವಗಳನ್ನು ಪಾಲಿಸುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಮತ್ತಷ್ಟು ಎತ್ತಿ ಹಿಡಿಯಬೇಕೆಂದರು.
   ಮಹಾಯಾತ್ರೆಯ ಉದ್ದೇಶವನ್ನು ಅರಿತ ರಾಜ್ಯ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರ ನೀಡುತ್ತಿರುವುದು ಸ್ಮರಣೀಯ. ಜಿಪಂ ಸದಸ್ಯರಾದ ನೀಲಮ್ಮಾ ವಡ್ಡೆ, ಗ್ರಾಪಂ ಅಧ್ಯಕ್ಷ ಶಿವಕುಮಾರ ಝಲ್ಪೆ, ಡಾ. ಸೋಮನಾಥ ನುಚ್ಚಾ, ಜೆ.ಎಂ ಚಿಮ್ಮಾ, ಎಂಎ ಪಾಟೀಲ್, ಬಾನಾ ಸೋಲಾಪುರೆ, ಕಿರಣ ಪಾಟೀಲ್, ಶ್ರೀರಂಗ ಪರಿಹಾರ, ಶಿವಾನಂದ ವಡ್ಡೆ, ಯಶವಂತ ಬಿರಾದಾರ್, ಪ್ರಭುರಾವ ಬಿರಾದಾರ, ಶರಣು ಹಣಮಶೆಟ್ಟಿ, ಸಂಜು ಬಿರಾದಾರ, ಪ್ರಶಾಂತ ಮಠಪತಿ ಹಾಗೂ ಸುಲಾಖೆ ಸೇರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.