ಚಾಮರಾಜನಗರ

ಶಿಂಧೆ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Published On :

ಚಾಮರಾಜನಗರ: ಬಿಜೆಪಿ ಮತ್ತು ಆರ್ಎಸ್ಎಸ್ ಉಗ್ರರ ತರಬೇತಿ ಶಾಲೆಗಳನ್ನು ನಡೆಸುತ್ತಿವೆ ಎಂಬ ಕೇಂದ್ರ ಸರ್ಕಾರದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಹೇಳಿಕೆ ಖಂಡಿಸಿ ನಗರ ಹಾಗೂ ತಾಲೂಕು ಘಟಕದ ಬಿಜೆಪಿ ಕಾರ್ಯಕರ್ತರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಯುಪಿಎ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಡಿವಿಯೇಷನ್ ರಸ್ತೆ ಮುಖಾಂತರ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ, ಶಿಂಧೆ ಭಾವಚಿತ್ರ ಸುಟ್ಟು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ದೇಶಪ್ರೇಮಿಗಳಾಗಿರುವ ಆರ್ಎಸ್ಎಸ್ ಮತ್ತು ಬಿಜೆಪಿ ಬಗ್ಗೆ ಮಾತನಾಡುವ ಇವರು ಒಬ್ಬ ಉಗ್ರ ನಾಯಕರು. ಇವರ ಹೇಳಿಕೆ ಬಹುಸಂಖ್ಯಾತ ಹಿಂದೂಗಳ ಮನ ನೋಯಿಸಿದೆ. ಓಟಿಗೋಸ್ಕರ, ಅಲ್ಪ ಸಂಖ್ಯಾತರ ಓಲೈಕೆಗಾಗಿ ಇಂಥ ಕೀಳುಮಟ್ಟದ ರಾಜಕಾರಣ ಮಾಡಬಾರದು. ಹಿಂದೂಗಳ ಬಗ್ಗೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಶಾಸಕ ಓವೈಸಿ ಸೇರಿದಂತೆ ಅನೇಕ ಸಂಘಟನೆಗಳು ಹಿಂದೂಗಳ ವಿರುದ್ಧ ನೀಡುವ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಇವರು, ದೇಶದ ಜನರಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿದ್ದಾರೆ. ಇಂಥವರು ಗೃಹ ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಇವರನ್ನು ಸಂಪುಟದಿಂದ ತಕ್ಷಣ ಕೈ ಬಿಡಬೇಕೆಂದು ಒತ್ತಾಯಿಸಿದರು.
ಒಬ್ಬ ಗೃಹ ಸಚಿವರಾಗಿ ಇಂಥ ಹೇಳಿಕೆ ನೀಡಿರುವುದು ದೇಶಕ್ಕೆ ಅಪಮಾನ. ಇವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ನಗರ ಬಿಜೆಪಿ ಘಟಕದ ಅಧ್ಯಕ್ಷ ಸುಂದರ್ ರಾಜ್, ರಾಜ್ಯ ರೇಷ್ಮೆ ಕೈಗಾರಿಕಾ ನಿಗಮದ ಅಧ್ಯಕ್ಷ ನೂರೊಂದು ಶೆಟ್ಟಿ, ಚುಡಾ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಮುಖಂಡರಾದ ಆರ್. ಸುಂದರ್, ಬಂಗಾರಸ್ವಾಮಿ, ಪರಶಿವಮೂರ್ತಿ, ಪಿ.ಬಿ.ಶಾಂತಮೂರ್ತಿ, ಮೂಡ್ಲುಪುರ ನಂದೀಶ್, ಜಿ.ಲೋಕೇಶ್, ನಗರಸಭಾ ಸದಸ್ಯರಾದ ಚಾ.ಸಿ.ಗೋವಿಂದರಾಜು, ಎಚ್.ಎಸ್.ಚಂದ್ರಶೇಖರ್, ಸಿ.ಎಂ.ಮಂಜುನಾಥ್, ನಾರಾಯಣಪ್ರಸಾದ್, ಚಂದ್ರಶೇಖರ್, ಪಿ.ರಂಗಸ್ವಾಮಿ, ವೇದಮೂರ್ತಿ, ಶುಂಠಿ ಮಹೇಶ್, ಜಯಶಂಕರಸ್ವಾಮಿ, ಮಹೇಶ್, ಪಾಪು, ಎನ್. ಕುಮಾರ್, ಹರವೆ ಮಂಜುಳಾ, ಸುಕೇಶಿನಿ, ಕಲ್ಯಾಣಿ, ವನಜಾಕ್ಷಿ, ಶಶಿರೇಖಾ, ನಾಗೇಶ್ ನಾಯಕ, ರ.ನಾರಾಯಣಗೌಡ, ಬಸವಣ್ಣ, ರಮೇಶ್, ನಾಗರಾಜು, ರಾಕೇಶ್, ಕಾಂತರಾಜು, ಕಮರವಾಡಿ ರೇವಣ್ಣ, ನಾಗಣ್ಣ, ಹುಚ್ಚೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.