60 ಸಾವಿರ ಎಕರೆ ಅತಿಕ್ರಮ ವಿರುದ್ಧ ಕ್ರಮವಿಲ್ಲ: ದೊರೆಸ್ವಾಮಿ
ಚಾಮರಾಜನಗರ: ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ 60 ಸಾವಿರ ಎಕರೆ ಜಮೀನನ್ನು ಕೇರಳ, ತಮಿಳುನಾಡು, ಆಂಧ್ರ ಮೂಲದ ವ್ಯಕ್ತಿಗಳು ಕಬಳಿಸಿದ್ದು, ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಪರಿಸರ ಸಮಿತಿ ಅಭಿವೃದ್ಧಿ ಅಧ್ಯಕ್ಷ ಡಿ.ಎಸ್. ಪುಣಜನೂರು ದೊರೆಸ್ವಾಮಿ ಆರೋಪಿಸಿದರು.
ಅವರು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 8 ಲಕ್ಷ ಎಕರೆ ಸರ್ಕಾರಿ ಸ್ವಾಮ್ಯದ ಜಮೀನಿದೆ. ಚಾಮರಾಜನಗರ ತಾಲೂಕಿನಲ್ಲಿ ಗೋಮಾಳ ಹೊರತುಪಡಿಸಿ, 5 ಲಕ್ಷ ಹೆಕ್ಟೇರ್ ಭೂಮಿ ಇದ್ದು, ತಹಸೀಲ್ದಾರ್ ಅವರು ಗೋಮಾಳಕ್ಕೆ ಸೇರಿದ 3093 ಹೆಕ್ಟೇರ್ ಭೂಮಿಗೆ ಸಂಬಂಧಪಟ್ಟ ಮಾಹಿತಿ ಮಾತ್ರ ನೀಡಿದ್ದಾರೆ. ಜಿಲ್ಲೆಯಲ್ಲಿ 60 ಸಾವಿರ ಎಕರೆ ಜಮೀನಿನ ಅತಿಕ್ರಮಣ ತೆರವುಗೊಳಿಸಬೇಕೆಂದು ಸರ್ಕಾರಿ ಜಮೀನು ಸಂರಕ್ಷಣಾ ಪಡೆಯ ಅಧ್ಯಕ್ಷ, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ವಿ. ಬಾಲಸುಬ್ರಹ್ಮಣ್ಯ ಅವರು 2010 ಅ. 4 ರಂದು ಅಂದಿನ ಜಿಲ್ಲಾಧಿಕಾರಿ ಚಕ್ರವರ್ತಿ ಮೋಹನ್ ಅವರಿಗೆ ಪತ್ರ ಬರೆದು ಒತ್ತುವರಿ ವಿರುದ್ದ ಕ್ರಮ ವಹಿಸಬೇಕೆಂದು ಆದೇಶ ನೀಡಿದ್ದರು. ಜಿಲ್ಲಾಧಿಕಾರಿ ಅವರು ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದಿರು. ಉಪವಿಭಾಗಾಧಿಕಾರಿಗಳು ತಾಲೂಕು ತಹಸೀಲ್ದಾರ್ಗಳಿಗೆ ಪತ್ರ ಬರೆದು ಒತ್ತುವರಿ ತೆರವಿಗೆ ಆದೇಶಿಸಿದ್ದರು. ಆದರೆ ಇನ್ನೂ ಕ್ರಮ ವಹಿಸಿಲ್ಲ. ಈ ದಂಧೆಯಲ್ಲಿ ಗ್ರಾಮಲೆಕ್ಕಿಗ, ಉಪವಿಭಾಗಾಧಿಕಾರಿ, ರಾಜಸ್ವ ನಿರೀಕ್ಷಕ, ತಹಸೀಲ್ದಾರ್, ಗುಮಾಸ್ತರು ಶಾಮೀಲಾಗಿದ್ದಾರೆ ಎಂದೂ ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

