ಗುಂಡ್ಲುಪೇಟೆ ಹಾಪ್‌ಕಾಮ್ಸ್ ರಾಜ್ಯಕ್ಕೇ ಮಾದರಿ
ಗುಂಡ್ಲುಪೇಟೆ: ತಾಲೂಕಿನ ತೋಟಗಾರಿಕೆ ಬೆಳಗಾರರ ಮತ್ತು ಸಂಸ್ಕರಣ ಸಹಕಾರ ಸಂಘ(ಹಾಪ್‌ಕಾಮ್ಸ್)ರಾಜ್ಯದಲ್ಲಿಯೇ ಮಾದರಿ ಸಹಕಾರಿ ಸಂಘವಾಗಿ ಹೊರ ಹೊಮ್ಮಿದೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.
ತಾಲೂಕಿನ ಹಂಗಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಾರಾಟ ಮಳಿಗೆ ಹಾಗೂ ಇಲ್ಲಿನ ಪ್ರೌಢ ಶಾಲೆಯ ಅಡುಗೆ ಮನೆಯ ಉಧ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಔಷಧಿ, ಗೊಬ್ಬರವನ್ನು ನಿಗದಿತ ದರಕ್ಕಿಂತಲೂ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದು, ರೈತರಿಂದ ಖರೀದಿಸುವ ಬಾಳೆಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ಖರೀದಿಸಿ, ಗ್ರಾಹಕರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ರಾಜ್ಯದೆಲ್ಲೂ ಇಂಥ ಸಂಘವು ಕಂಡು ಬರುವುದಿಲ್ಲ ಎಂದರು.
ರಾಜ್ಯದಲ್ಲಿ ಕೋಲಾರದ ರೈತರು ಅತೀ ಬುದ್ಧಿವಂತರು. ಆದರೆ ಗುಂಡ್ಲುಪೇಟೆ ರೈತರು ಕೋಲಾರ ರೈತರಂತೆಯೇ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಬಗ್ಗೆ ಪ್ರಶಂಸಿಸಿದರು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 9 ಕೋಟಿ ಸಹಾಯ ಧನವನ್ನು ರೈತರು ಪಡೆದಿದ್ದಾರೆ, ಈ ಸಂಬಂಧ ಹಾಪ್ಕಾಮ್ಸ್‌ಗೆ ನನ್ನ ಅನುದಾನದಲ್ಲಿ ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಚರ್ಚಿಸಿ ಹಣ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಎಚ್.ಎಸ್. ಮಹದೇವಪ್ರಸಾದ್ ಮಳಿಗೆ ಉದ್ಘಾಟಿಸಿ ಮಾತನಾಡಿ, ಈ ಹಾಪ್ಕಾಮ್ಸ್ ಮಳಿಗೆ ಆರಂಭಿಸಲು ಅನ್ವರ್ ಪಾಷ, ಬಿ.ಎಂ.ಮುನಿರಾಜು ಅವರು ಶ್ರಮ ವಹಿಸಿದ್ದಾರೆ.
ತಾಲೂಕಿನ ಬೇಗೂರಿನಲ್ಲಿ ಹಾಪ್ಕಾಮ್ಸ್ ಮಳಿಗೆ ಸ್ಥಾಪಿಸಲು ನಿವೇಶನಕ್ಕೆ ಹುಡುಕಾಟ ನಡೆದಿದೆ. ನಿವೇಶನ ಪತ್ತೆ ಹಚ್ಚಲಾಗಿದ್ದು, ತಾಂತ್ರಿಕ ತೊಂದರೆಯಿದೆ. ಅದನ್ನು ಶೀಘ್ರವಾಗಿ ಬಗೆಹರಿಸಿ ನಿವೇಶನ ಕೊಡಿಸುವುದಾಗಿ ತಿಳಿಸಿದರು.
ಜಿಪಂ.ಮಾಜಿ ಸದಸ್ಯ ಎಚ್.ಎಸ್.ನಂಜಪ್ಪ, ಹಾಪ್ಕಾಮ್ಸ್ ಮಾಜಿ ಅಧ್ಯಕ್ಷ ಎಚ್.ಎಂ.ಮಹದೇವಪ್ಪ, ಅಧ್ಯಕ್ಷ ಸೋಮಹಳ್ಳಿ ಸದಾಶಿವಪ್ಪ, ತಾಪಂ ಅಧ್ಯಕ್ಷೆ ಗಾಯತ್ರಿ,ಜಿಪಂ ಸದಸ್ಯೆ ಅಂಬಿಕಾ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್,ಗ್ರಾಪಂ ಅಧ್ಯಕ್ಷ ಕರಿಯಯ್ಯ,ತಾಪಂ ಸದಸ್ಯೆ ಶಾರದಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್, ಮಾಜಿ ಅಧ್ಯಕ್ಷರಾದ ವೈ.ಎನ್.ರಾಜಶೇಖರ್, ಹೆಚ್.ಎಂ.ನಾಗರಾಜಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಬೊಮ್ಮಯ್ಯ ಸೇರಿದಂತೆ ನೂರಾರು ಮಂದಿಯಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

