ಚಾಮರಾಜನಗರ

ನ್ಯಾಯಾಧೀಶರಿಗೆ ಮರಣಪತ್ರ ಬರೆದು ಆತ್ಮಹತ್ಯೆಗೆ ಶರಣಾದ ಯುವಕ

Published On :

ಯಳಂದೂರು: ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ನನ್ನ ಆತ್ಮಹತ್ಯೆಗೆ ಕಾರಣರಾದ ವ್ಯಕ್ತಿಗಳಿಗೆ ಮರಣಂಡನೆ ವಿಧಿಸಬೇಕೆಂದು ಒತ್ತಾಯಿಸಿ ಯಳಂದೂರಿನ ನ್ಯಾಯಾಧೀಶರಿಗೆ ಮರಣ ಪತ್ರ ಬರೆದು ವಿಷ ಕುಡಿದು ವ್ಯಕ್ತಿಯೊಬ್ಬ ಸಾವಿಗೆ ಶರಣಾದ ಘಟನೆ ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಸೋಮವಾರ ಜರುಗಿದೆ.
ತಾಲೂಕಿನ ಯರಗಂಬಳ್ಳಿ ಗ್ರಾಮದ ರಂಗನಾಯಕ ಅವರ ಪುತ್ರ ಆರ್.ರಾಮಚಂದ್ರ(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ತಮ್ಮ ಗ್ರಾಮದಲ್ಲಿ ನಡೆದ ನ್ಯಾಯ ಪಂಚಾಯಿತಿ ಸಭೆಯಲ್ಲಿ ತನಗೆ ಅನ್ಯಾಯವಾಗಿದ್ದು, ತಪ್ಪಿಲ್ಲದಿದ್ದರೂ ತಪ್ಪಿತಸ್ಥನಂತೆ ತನ್ನ ಮೇಲೆ ಪಂಚಾಯಿತಿಯವರು ಗೂಬೆ ಕೂರಿಸಿ, ತಮ್ಮ ಕುಟುಂಬದವರಿಂದ ದಂಡ ವಸೂಲಿ ಮಾಡಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಕಿರುಕುಳ ನೀಡಿದ್ದಾರೆ.
ನನ್ನ ಸಾವಿಗೆ ಸುಮಾರು 20  ಕ್ಕೂ ಹೆಚ್ಚು ವ್ಯಕ್ತಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗಿದ್ದು, ಅವರೆಲ್ಲರ ಹೆಸರನ್ನು ಮರಣಪತ್ರದಲ್ಲಿ ನಮೂದಿಸಿ ಇವರೆಲ್ಲರಿಗೂ ನ್ಯಾಯಾಧೀಶರು ಮರಣ ದಂಡನೆ ವಿಧಿಸಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾನೆ. ಈ ಬಗ್ಗೆ ಅವನ ಕುಟುಂಬದ ಸದಸ್ಯರು ಯಳಂದೂರು ಪಟ್ಟಣ ಪೊಲೀಸ್ ಠಾಣೆಗೆ ಕೆಲವು ವ್ಯಕ್ತಿಗಳ ವಿರುದ್ಧ ಮಾತ್ರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಮರಣ ಪತ್ರವನ್ನು ಮೃತ ರಾಮಚಂದ್ರನ ಕುಟುಂಬದವರು ಪೊಲೀಸರಿಗೆ ಒದಗಿಸಿದ್ದಾರಲ್ಲದೆ ಅದರ ನಕಲು ಜೆರಾಕ್ಸ್ ಪ್ರತಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ.
ಮೃತರಿಗೆ ಪತ್ನಿ ಕೆ.ಎಸ್.ಲತಾಸುಂದರಿ, ಸಿದ್ಧಾರ್ಥ ಮತ್ತು ರಕ್ಷಿತ್ ಎಂಬ ಇಬ್ಬರು ಮಕ್ಕಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.