ಲೆಕ್ಕ ತಪಾಸಣೆ ಗ್ರಾಮ ಸಭೆಯಲ್ಲಿ ಗದ್ದಲ
ಗುಂಡ್ಲುಪೇಟೆ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಬಹುತೇಕ ಸದಸ್ಯರ ಗೈರು ಹಾಜರಿಯ ನಡುವೆ ತಾಲೂಕಿನ ಬೇಗೂರು ಗ್ರಾಪಂನ ಸಾಮಾಜಿಕ ಲೆಕ್ಕ ತಪಾಸಣಾ ಗ್ರಾಮ ಸಭೆಯು ಸಾರ್ವಜನಿಕರ ವಿರೋಧದ ನಡುವೆಯೂ ಗದ್ದಲ ಗೊಂದಲದಿಂದ ನಡೆಯಿತು. ಸಭೆಯಲ್ಲಿ ಗ್ರಾಪಂನಲ್ಲಿ ಇದುವರೆಗೂ ಮಾಡಲಾಗಿರುವ ಅಭಿವೃದ್ಧಿ ಕೆಲಸಗಳ ವಿವರ ಮತ್ತು ಅವುಗಳಿಗೆ ಬಳಸಲಾಗಿರುವ ಅನುದಾನ ಕುರಿತು ಕಾರ್ಯದರ್ಶಿ ರಂಗಸ್ವಾಮಿ ಹೇಳಲು ಅನುವಾದಾಗ ಸಾರ್ವಜನಿಕರು ಇದೆಲ್ಲ ಸುಳ್ಳಿನ ಕಂತೆ, ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಇದಕ್ಕೆ ಕೆಲಸಗಳು ಆಗಿರುವ ಬಗ್ಗೆ ವಿವರ ಕೇಳಿದರಲ್ಲದೇ ಸಂಬಂಧಪಟ್ಟ ದಾಖಲಾತಿಗಳನ್ನು ನೀಡುವಂತೆ ಒತ್ತಾಯಿಸಿದರು.
ಇಂಗು ಗುಂಡಿಗಳು, ಬಾಳೆತೋಟಗಳಿಗೆ ನೀಡಿರುವ ಅನುದಾನಗಳು, ತಡೆಗೋಡೆ ನಿರ್ಮಾಣಕ್ಕೆ ಬಿಡುಗಡೆ ಮಾಡಿರುವ ಹಣಕ್ಕೆ ಯಾವುದೇ ಸಂಬಂಧವಿಲ್ಲ. ಆದರೂ ಅಭಿವೃದ್ಧಿ ಕೆಲಸ ಮಾಡಿರುವುದಾಗಿ ಬಿಲ್ ಪಾವತಿ ಮಾಡಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಮುಖಂಡರು ಆರೋಪಿಸಿದರು. ಬೇಗೂರು ಸಮೀಪದ ಸಂತೆಮಾಳದಲ್ಲಿ ನಿರ್ಮಿಸಲಾಗಿರುವ ಇಂಗುಗುಂಡಿ ಗ್ರಾಪಂ ಸದಸ್ಯ ರಮೇಶ್ ಬೇಗೂರು ನಿರ್ಮಿಸಿದ್ದಾರೆ ಎಂದು ದಾಖಲೆ ನೀಡುತ್ತಿದ್ದು, ಆದರೆ ಅಲ್ಲಿ ಆ ಕೆಲಸವೇ ಆಗಿಲ್ಲ ಎಂದು ಅಪಾದಿಸಿದರು.
ಜಿಪಂ ವತಿಯಿಂದ ನಡೆದ ಕಾಮಗಾರಿಗಳ ಬಗ್ಗೆ ಯಾವುದೇ ದೂರು ಬರಲಿಲ್ಲ. ಆದರೆ ಸಸಿ ನೆಡುವುದು, ಇಂಗುಗುಂಡಿ ನಿರ್ಮಾಣದ ಬಗ್ಗೆ ಸಾರ್ವಜನಿಕರು ತಾಪಂ ಇಒಗೆ ದೂರು ನೀಡಲು ನಿರ್ಧರಿಸಿದರು. ತಾಪಂ ಸದಸ್ಯ ಮಲ್ಲಿದಾಸ್, ಗ್ರಾಪಂ ಸದಸ್ಯರಾದ ರಮೇಶ್, ರಾಜಶೆಟ್ಟಿ, ಮಾದಮ್ಮ, ನಾಗಮ್ಮ, ಅಭಿವೃದ್ಧಿ ಅಧಿಕಾರಿ ನಾಗಭೂಷಣ, ಕಾರ್ಯದರ್ಶಿ ರಂಗಸ್ವಾಮಿ, ಜಿಪಂ ಎಂಜಿನಿಯರ್ ರವಿಕುಮಾರ್ ಸೇರಿದಂತೆ ಇದ್ದರು. ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ನಾಗಶೆಟ್ಟಿ ಸೇರಿದಂತೆ ಹತ್ತು ಮಂದಿ ಸದಸ್ಯರು ಗೈರು ಹಾಜರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

