ಚಾಮರಾಜನಗರ

ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಅದ್ಧೂರಿ

Published On :

ಹನೂರು: ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ 3ನೇ ದಿನವಾದ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.ಮಂಗಳವಾರವೂ ಸಹ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ದೇವರಿಗೆ (ರುದ್ರಾಕ್ಷಿ ಮಂಟಪೋತ್ಸವ) ಮುಡಿಸೇವೆ ಸಲ್ಲಿಸಿದರು, ದೇವರ ದರ್ಶನ ಪಡೆಯಲು ಪ್ರತಿ ಬಾರಿಯೂ ನೂಕುನುಗ್ಗಲು ಇತ್ತು.  ವಿವಿಧ ಹರಕೆ ಸಲ್ಲಿಸಿದ ಭಕ್ತರು, ದೇವಾಲಯದ ಆವರಣದಲ್ಲಿ ನೆಂಟರಿಷ್ಟರಿಗೆ ಸಿಹಿಯೂಟ ಬಡಿಸಿ ಸಂಭ್ರಮಿಸಿದರು. ವಿವಿಧ ಜಿಲ್ಲೆಯಿಂದಲೂ 2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ನೀಲಗಾರರು, ಕಂಸಾಳೆ ಕಲಾವಿದರು, ಜಾನಪದ ಗೀತೆಗಳ ರೂಪದಲ್ಲಿ ಸಿದ್ದಪ್ಪಾಜಿ ಮಂಟೇಸ್ವಾಮಿ ಕುರಿತು ಕಥಾ ಪ್ರಸಂಗ ನಡೆಸಿಕೊಡುತ್ತಿದ್ದರು,ಉಪ ವಿಭಾಗಾಧಿಕಾರಿ ಸತೀಶ್ ಬಾಬು, ಡಿವೈಎಸ್‌ಪಿ ಚನ್ನಬಸವಣ್ಣ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.