ಸ್ಫೂರ್ತಿ ಕೇಂದ್ರಕ್ಕೆ ಸಾಹಿತಿಗಳ ಆಗ್ರಹ
ಮೈಸೂರು: ನೂರು ವರ್ಷಗಳಷ್ಟು ಇತಿಹಾಸವುಳ್ಳ ಕನ್ನಡ ಶಾಲೆಯನ್ನು ಕೆಡವಿ, ಆ ಜಾಗದಲ್ಲಿ ವಿವೇಕಾನಂದರ ಹೆಸರಿನಲ್ಲಿ ಸ್ಫೂರ್ತಿ ಕೇಂದ್ರ ತೆರೆಯಬೇಡಿ ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ. ಯಾವುದೇ ಮಗುವಿನ ವಿಕಾಸದ ಸೋಪಾನಕ್ಕೆ ಪ್ರಾಥಮಿಕ ಶಿಕ್ಷಣವೇ ಬುನಾದಿ. ಅದನ್ನು ಅಲುಗಾಡಿಸಿ, ಬೆಳೆದ ಮಕ್ಕಳಿಗೆ ಅದರ ಮೇಲೆ ಸ್ಫೂರ್ತಿ ಕೇಂದ್ರ ನಿರ್ಮಿಸುವ ಆಲೋಚನೆಯನ್ನು ಕೈ ಬಿಡಬೇಕು ಎಂದು ಸಾಹಿತಿಗಳಾದ ಪ್ರೊ. ಅರವಿಂದ ಮಾಲಗತ್ತಿ, ಸಿ.ಎಸ್. ರಾಮಚಂದ್ರ, ಎನ್.ಎಂ. ತಳವಾರ್, ಪ್ರೀತಿ ಶುಭಚಂದ್ರ, ಡಾ.ಸಿ.ಪಿ. ಸಿದ್ದಾಶ್ರಮ ಅವರು ಸರ್ಕಾರ ಹಾಗೂ ಶ್ರೀರಾಮಕೃಷ್ಣ ಮಠವನ್ನು ಕೋರಿದ್ದಾರೆ. ಸ್ಫೂರ್ತಿ ಕೇಂದ್ರವನ್ನು ಅದೇ ಜಾಗದಲ್ಲಿಯೇ ನಿರ್ಮಿಸಬೇಕಾಗಿಲ್ಲ. ಈಗಿರುವ ಸ್ಮಾರಕ ಉಳಿಸಿ ಬೆಳೆಸಲು ಯಾರದೇ ವಿರೋಧವಿಲ್ಲ. ಆದ್ದರಿಂದ ಈ ವಿಷಯವನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸದೆ, ಕನ್ನಡ ಶಾಲೆ ಉಳಿಸುವತ್ತ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ವಧು- ವರರ ಸಮಾವೇಶ
ಹೊಯ್ಸಳ ಕರ್ನಾಟಕ ಸಂಘದಿಂದ ಏ. 21ರಂದು ತ್ರಿಮತಸ್ಥ ವಿಪ್ರ ಬಾಂಧವರ ವಧು- ವರರ ಸಮಾವೇಶ ಏರ್ಪಡಿಸಲಾಗಿದ್ದು, ಆಸಕ್ತ ವಿಪ್ರ ಬಾಂಧವರು ಮಾ. 31ರೊಳಗೆ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಚಾಲಕ ವಿ. ಹರೀಶ್ ತಿಳಿಸಿದ್ದಾರೆ. ದೂ. 0821- 2330995 ಸಂಪರ್ಕಿಸಿರಿ.
ಕಾರ್ಯಕ್ರಮ ಮುಂದೂಡಿಕೆ
ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಮಾ. 29ರಂದು ನಡೆಯಬೇಕಿದ್ದ ತ್ರಿಮತಸ್ಥ ವಧು- ವರರ ಸಮಾವೇಶವನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಗೌರವ ಕಾರ್ಯದರ್ಶಿ ಎನ್.ಕೆ. ಸುಂದರರಾಜು ತಿಳಿಸಿದ್ದಾರೆ.
ನಾಳೆ ವಿಶ್ವರಂಗಭೂಮಿ ದಿನ
ರಂಗ ಸಂಗಮ ಸಂಸ್ಥೆಯು ಸಮನ್ವಯ, ಗೆಜ್ಜೆ ಹೆಜ್ಜೆ, ರಂಗಾನಂದ ತಂಡಗಳ ಜತೆಗೂಡಿ ಆಶಾದಾಯಕ ಟ್ರಸ್ಟ್‌ನ ಅನಾಥ ಮಕ್ಕಳೊಂದಿಗೆ ಮಾ. 27 ರಂದು ಬಿಎಂಶ್ರೀ ನಗರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಆಯೋಜಿಸಿದೆ.
ಮಹಿಳಾ ದಿನ
ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಂಗ ಸಂಸ್ಥೆಯಾದ ಸಣ್ಣ ಉದ್ಯಮದಲ್ಲಿ ಮಹಿಳೆ (ವೈಸ್) ಸಂಸ್ಥೆಯಿಂದ ಮಾ. 27 ರಂದು ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಏರ್ಪಡಿಸಲಾಗಿದ್ದು, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ನೇಮಕ
ನಗರ ಕಾಂಗ್ರೆಸ್ ಎಸ್ಟಿ ಘಟಕದ ಕಾರ್ಯದರ್ಶಿಯಾಗಿ ನರೇಂದ್ರಕುಮಾರ್, ಇಂದಿರಾಗಾಂಧಿ ಬ್ಲಾಕ್ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್, ಹಿಂದುಳಿದ ವರ್ಗಗಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆರ್. ಬಸವಣ್ಣ, ಬಿಎಸ್‌ಆರ್ ಕಾಂಗ್ರೆಸ್ ಎನ್.ಆರ್. ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಅಬ್ರಾರ್ ಖಾನ್, ಕರ್ನಾಟಕ ಜನತಾ ಪಕ್ಷ ಯುವ ಘಟಕದ ಉಪಾಧ್ಯಕ್ಷರಾಗಿ ದೀಪು ನೇಮಕವಾಗಿದ್ದಾರೆ.
ಕಾರ್ಯಾಗಾರ
ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ್ ಮತ್ತು ವಾಕ್ ಶ್ರವಣ ಸಂಸ್ಥೆಯಲ್ಲಿ ಮಾ. 27ರ ಬೆಳಗ್ಗೆ 9.30ಕ್ಕೆ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಆಯಿಶ್ ನಿರ್ದೇಶಕಿ ಡಾ.ಎಸ್.ವಿ. ಸಾವಿತ್ರಿ ಉದ್ಘಾಟಿಸುವರು. ದೂ. 0821- 2514449 ಸಂಪರ್ಕಿಸಿರಿ.
ಜೂಜಾಟ: ಬಂಧನ
ಜೂಜಾಡುತ್ತಿದ್ದ 6 ಮಂದಿಯನ್ನು ಇಲವಾಲ ಠಾಣೆ ಪೊಲೀಸರು ಬಂಧಿಸಿ, 10,490 ವಶಪಡಿಸಿಕೊಡಿರುವ ಘಟನೆ ಭಾನುವಾರ ನಡೆದಿದೆ. ಇಲವಾಲ ಬಳಿಯ ಮೈರಾ ಕಾಲೇಜಿನ ಬಳಿ ಜೂಜಾಡುತ್ತಿದ್ದ ಈ 6 ಮಂದಿಯನ್ನು ಇಲವಾಲ ಠಾಣೆ ಎಸ್‌ಐ ಜೀವನ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

