ಚಾಮರಾಜನಗರ

ಮತ್ತೆ ಬನ್ನಿ... ಮಹದೇವ್ ಗೆಲ್ಲಿಸೋಣ

Published On :

ಕೊಳ್ಳೇಗಾಲ: ಮಾಜಿ ಸಚಿವ ಹಾಗೂ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂ.ಮಹದೇವ್ ಅವರನ್ನು ಹನೂರು ಕ್ಷೇತ್ರದಿಂದ ಜೆಡಿಎಸ್‌ನಿಂದ ಕಣಕ್ಕಿಳಿಸಿ ಗೆಲ್ಲಿಸೋಣ ಬನ್ನಿ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರಿಗೆ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪೊನ್ನಾಚಿ ಮಹದೇವಸ್ವಾಮಿ ಆಹ್ವಾನ ನೀಡಿದ್ದಾರೆ. ಈ ಸಂಬಂಧ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಈಗ ರಾಜಕೀಯ ಗೊಂದಲದಲ್ಲಿದ್ದು, ಈ ನಿಟ್ಟಿನಲ್ಲಿ ಅವರು ಜೆಡಿಎಸ್ ಸೇರ್ಪಡೆಗೊಂಡರೆ, ಈ ಹಿಂದೆ 1983ರಲ್ಲಿ ನಾಗಪ್ಪ ತ್ಯಾಗಿಗಳಾಗಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆ.ಪಿ. ಶಾಂತಮೂರ್ತಿ ಅವರನ್ನು  ಗೆಲ್ಲಿಸಿದಂತೆ ಈಗ ಪರಿಮಳಾ ಅವರು ಜೆಡಿಎಸ್ ಸೇರ್ಪಡೆಗೊಂಡು  ತ್ಯಾಗಿಗಳಾಗಬೇಕಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ನಾನು ಸಹಾ ಹಿಂದೆ ಸರಿಯುತ್ತೆನೆ. ಮುಂದೆ ನೀವೆ ನಮ್ಮ ನಾಯಕರು ಎಂದು  ಅವರು ಮನವಿ ಮಾಡಿದರು.
1983ರಲ್ಲಿ ರಾಜೂಗೌಡ, ಎಚ್.ನಾಗಪ್ಪ, ಮರಿಗೌಡ ಈ ಮೂವರ ನಡುವೆ ಟಿಕೆಟ್‌ಗಾಗಿ ಗೊಂದಲ ಏರ್ಪಟ್ಟಿತ್ತು. ಆದರೆ, ಆ ಸಂದರ್ಭದಲ್ಲಿ ದಿ.ನಾಗಪ್ಪ ಪಕ್ಷೇತರ ಅಭ್ಯರ್ಥಿ  ಶಾಂತಮೂರ್ತಿ ಅವರ ಗೆಲವಿಗೆ ಶ್ರಮಿಸಿದರು. ಬಳಿಕ  ನಾಗಪ್ಪ ಅವರೆ ನಾಯಕರಾಗಿ ಹೊರಹೊಮ್ಮಿದರು.   ಅದೇ  ರೀತಿ ಈಗ ಕೆಜೆಪಿ ಟಿಕೆಟಟ್ಪರಿಮಳಾ ಅವರಿಗೆ ದೊರಕದ ಕಾರಣ ಅವರು ತಕ್ಷಣ ಜೆಡಿಎಸ್‌ಗೆ ಮರಳಬೇಕು. ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ತುಂಬು ಹೃದಯದಿಂದ  ಸ್ವಾಗತಿಸುತ್ತೆನೆ. ಎಲ್ಲವನ್ನೂ ಮರೆತೂ ನಾನು ಒಗ್ಗೂಡಿ ಚದುರಿ ಹೋಗಿರುವ ನಾಗಪ್ಪ ಅಭಿಮಾನಿಗಳ ಸಂಘಟನೆಗೆ ಹೆಚ್ಚು ಒತ್ತು ನೀಡಲು ಸಿದ್ಧನಿದ್ದೇನೆ. ಈ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮಾಜಿ ಸಚಿವ  ಮಹದೇವ್ ಅವರನ್ನು ನಿಲ್ಲಿಸಲು ನಾನು ತ್ಯಾಗಿಯಾಗುತ್ತೆನೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಪಂಚಾಕ್ಷರಿ, ಮಂಜುನಾಥ್,  ಮಲ್ಲನಾಯಕ,  ಶಕ್ತಿಮೂರ್ತಿ, ಜಿನಕನಹಳ್ಳಿ ಶ್ರೀನಿವಾಸ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.