ಅದ್ಧೂರಿ ಶರಣ ಸಂಸ್ಕೃತಿ ಮಹಾಯಾತ್ರೆ
ಕ.ಪ್ರ ವಾರ್ತೆ, ಕಡೂರು, ಏ.2
ಬಸವ ಜಯಂತಿ ಶತಮಾನೋತ್ಸವದ ಅಂಗವಾಗಿ ರಾಜ್ಯಾದ್ಯಂತ ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸುತ್ತಿರುವ ಶರಣ ಸಂಸ್ಕೃತಿ ಮಹಾಯಾತ್ರೆಯು ಮಂಗಳವಾರ ಪಟ್ಟಣಕ್ಕೆ ಆಗಮಿಸಿದಾಗ ನೂರಾರು ಸಂಖ್ಯೆಯಲ್ಲಿ ವಿವಿಧ ಸಮುದಾಯದ ಮುಖಂಡರು ಮಹಾಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.
ಚಿಕ್ಕಮಗಳೂರಿನಿಂದ ಸಖರಾಯಪಟ್ಟಣದ ಮಾರ್ಗವಾಗಿ ಕಡೂರಿಗೆ ಆಗಮಿಸಿದ ಮಹಾಯಾತ್ರೆಯನ್ನು ವಿವಿಧ ಸಮುದಾಯದ ಹಾಗೂ ವಿವಿಧ ಪಕ್ಷಗಳ ಮುಖಂಡರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬರಮಾಡಿಕೊಂಡು ಸ್ವಾಗತಿಸಿದರು.
ಮಹಾಯಾತ್ರೆಯ ರಥದಲ್ಲಿದ್ದ ಶ್ರೀ ಬಸವೇಶ್ವರರ ಪುತ್ಥಳಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್, ಶಾಸಕ ಡಾ. ವೈ.ಸಿ. ವಿಶ್ವನಾಥ್, ಕೆಜೆಪಿ ಮುಖಂಡ ಬೆಳ್ಳಿಪ್ರಕಾಶ್, ಕಾಂಗ್ರೆಸ್ ಮುಖಂಡ ಮಹೇಶ್ ಒಡೆಯರ್, ಮಹಾಸಭಾದ ಪದಾಧಿಕಾರಿ ತುರುವನಹಳ್ಳಿ ರೇಣುಕಯ್ಯ, ಜಿ.ಪಂ. ಉಪಾಧ್ಯಕ್ಷೆ ಮಾಲಿನಿಬಾಯಿ ರಾಜನಾಯ್ಕ ಮತ್ತಿತರರು ಪುಷ್ಪಮಾಲೆ ಅರ್ಪಿಸುವ ಮೂಲಕ ನಮನಗಳನ್ನು ಸಲ್ಲಿಸಿದರು.
ನಂತರ ಬಸವೇಶ್ವರ ವೃತ್ತದಿಂದ ವಾದ್ಯಗೋಷ್ಟಿಗಳೊಂದಿಗೆ ಮೆರವಣಿಗೆಯಲ್ಲಿ ಬಸವಣ್ಣನವರ ಘೋಷಣೆಗಳೊಂದಿಗೆ ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಯಾತ್ರೆಯಲ್ಲಿ ವಿವಿಧ ಮುಖಂಡರು ಪುಷ್ಪಮಾಲೆ ಅರ್ಪಿಸುವ ಮೂಲಕ ಮಾನವತಾವಾದಿ ಶಿವಶರಣ ಬಸವಣ್ಣನವರಿಗೆ ನಮಸ್ಕರಿಸಿದರು.
ಬೀರೂರಲ್ಲಿ ಸ್ವಾಗತ: ಮೆರವಣಿಗೆಯು ಮರವಂಜಿ ವೃತ್ತದ ಮೂಲಕ ಪಟ್ಟಣದ ಕೆ.ಎಲ್.ವಿ. ವೃತ್ತಕ್ಕೆ ಸಾಗಿತು. ಸಭೆಯ ನಂತರ ಪಟ್ಟಣದಿಂದ ಬೀರೂರು ಪಟ್ಟಣಕ್ಕೆ ಬೀಳ್ಕೊಡಲಾಯಿತು. ಬೀರೂರು ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಡಾ. ಶಶಿಕಲಾ ನೇತೃತ್ವದಲ್ಲಿ ಪೂರ್ಣ ಕುಂಭಗಳೊಂದಿಗೆ ಮಹಾಯಾತ್ರೆಗೆ ಸ್ವಾಗತ ನೀಡಲಾಯಿತು.
ಬೀರೂರು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಪಟ್ಟಣದ ಗಾಂಧೀ ವೃತ್ತದಲ್ಲಿ ವಿವಿಧ ವರ್ಗಗಳ ಮುಖಂಡರು ಶ್ರೀ ಬಸವಣ್ಣನವರ ಪ್ರತಿಮೆಗೆ ಹೂವಿನ ಹಾರಹಾಕಿ ನಮನ ಸಲ್ಲಿಸಿದರು. ಆನಂತರ ಲಿಂಗದಹಳ್ಳಿ ಮಾರ್ಗವಾಗಿ ನಂದಿ ಕ್ಷೇತ್ರಕ್ಕೆ ಮಹಾಯಾತ್ರೆಯನ್ನು ಬೀಳ್ಕೊಡಲಾಯಿತು.
ಯಾತ್ರೆಯ ಸಂದರ್ಭದಲ್ಲಿ ಪುರಸಭಾ ಸದಸ್ಯ ರೇಣುಕಯ್ಯ,ಬೀರೂರು ಜಗದೀಶ್, ಮುಖಂಡರಾದ ಗಂಗಾಧರಯ್ಯ, ಪಿ.ಕೆ. ರೇವಣ್ಣಯ್ಯ, ದೇವರಾಜು, ಗಂಗಾಧರಯ್ಯ, ನಂದಕುಮಾರ್, ಚಿದಾನಂದ, ಮಹೇಶ್, ರಾಜನಾಯ್ಕ, ಚಂದ್ರು, ಬಳ್ಳೇಕೆರೆ ಶಶಿ, ಪುಷ್ಪರಾಜ್, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

