ಚಿಕ್ಕಮಗಳೂರು

ಅಧಿಕಾರಕ್ಕಿಂತ ವಿಶ್ವಾಸ ದೊಡ್ಡದು: ಸಿ.ಟಿ ರವಿ

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.3
ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು. ಅಧಿಕಾರದ ಆಸೆಗಿಂತ ಜನರ ಪ್ರೀತಿ ವಿಶ್ವಾಸವೇ ದೊಡ್ಡದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
  ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ತೊಗರಿಹಂಕಲ್, ದಾಸರಹಳ್ಳಿ, ಬಿಜೆಪಿ  ಕಾರ್ಯಖರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ರು. 800 ಕೋಟಿಗೂ ಅಧಿಕ ಅನುದಾನ ತಂದು ಈ ಭಾಗದ 3 ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳಿಗೆ ರು. 22 ಕೋಟಿ ನೀಡಲಾಗಿದೆ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.  
ಸ್ವಯಂಪ್ರೇರಿತ ಸೇರ್ಪಡೆ: ಮಲ್ಲೇನಹಳ್ಳಿ ಗ್ರಾಮಕ್ಕೆ ಐ.ಟಿ.ಐ ಕಾಲೇಜು, ಬಿಸಿಎಂ ಹಾಸ್ಟೆಲ್ ನೀಡಲಾಗಿದೆ. ವರ್ಷದ 365 ದಿನವೂ ಜನರ  ಜೊತೆ ಸಂಪರ್ಕದಲ್ಲಿದ್ದು ದಿನದ 24 ಗಂಟೆಯೂ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ.
   ನಾನು ಮಾಡಿರುವ  ಅಭಿವೃದ್ಧಿ ಕೆಲಸಗಳನ್ನು ನೋಡಿ ಪ್ರತಿ ಪಕ್ಷದವರು ಸಹ ಈ ಬಾರಿ ಬಿಜೆಪಿಗೆ ಮತ ನೀಡಲಿದ್ದಾರೆ. ಮುಸ್ಲಿಂ ಬಾಂಧವರು, ಮಹಿಳೆಯರು ಬಿಜೆಪಿ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸ್ವಯಂಪ್ರೇರಿತರಾಗಿ ಸೇರುತ್ತಿದ್ದಾರೆ ಎಂದು ಹೇಳಿದರು.
   ಜಿಪಂ ಸದಸ್ಯ ಜೆ.ಡಿ. ಲೋಕೇಶ್ ಮಾತನಾಡಿ, ಬಿಜೆಪಿ ಪಕ್ಷದ ಕಾರ್ಯಕರ್ತರಾಗಿ ಈ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಮತ ಪಡೆಯಬಹುದು.
 ಯಾವ ಗ್ರಾಮಗಳನ್ನೂ ಕಡೆಗಣಿಸದೆ ಕಾಲೋನಿಗಳಲ್ಲೂ ಕಾಂಕ್ರಿಟ್ ರಸ್ತೆ ನಿರ್ಮಿಸಿ ಹೆಚ್ಚಿನ ವಿಶ್ವಾಸ ಗಳಿಸಿದ್ದೇವೆ ಎಂದರು.
 ವೆನಿಲ್ಲಾ ವಿಜಯಕುಮಾರ್ ಮಾತನಾಡಿದರು.  ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಶೈಲಜಾ ಪ್ರಕಾಶ್, ತಾಪಂ ಮಾಜಿ ಉಪಾಧ್ಯಕ್ಷೆ ರೀನು ಶಿವರಾಜ್, ಮಾಜಿ ಅಧ್ಯಕ್ಷ ಚಂದ್ರೇಗೌಡ, ನಿಂಗಶೆಟ್ರು, ಕುಲಶೇಖರ್, ಮನೋಜ್, ದೇವರಾಜ್, ವೆಂಕಟೇಶ್, ಪ್ರಕಾಶ್, ವಿನೋದ್ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.