ದತ್ತ ಜೆಡಿಎಸ್ನ ಪ್ರಶ್ನಾತೀತ ಅಭ್ಯರ್ಥಿ
ಕ.ಪ್ರ. ವಾರ್ತೆ, ಕಡೂರು, ಏ.4
ವೈ.ಎಸ್.ವಿ. ದತ್ತರವರು ಜೆಡಿಎಸ್ ಪಕ್ಷದ ಪ್ರಶ್ನಾತೀತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಜೆಡಿಎಸ್ ಪಕ್ಷಕ್ಕಾಗಿ ಶ್ರಮವಹಿಸಿ ದುಡಿಯುತ್ತೇವೆ ಎಂದು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಜ್ಞೆ ಮಾಡಿದರು.
ಕಡೂರು ಪಟ್ಟಣದ ಕಾರ್ಯಕರ್ತರ ಕಚೇರಿ ಆರಂಭದ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖಂಡರು ಮಾತನಾಡಿ, ಕಡೂರು ಪಟ್ಟಣದಲ್ಲಿ ಜೆಡಿಎಸ್ ನೂತನ ಕಚೇರಿಯನ್ನು ಅಧಿಕೃತವಾಗಿ ಆರಂಭಿಸುವ ಮೂಲಕ ವಿಧಾನಸಭಾ ಚುನಾವಣೆ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ನಮ್ಮ ನಾಯಕರಾದ ವೈ.ಎಸ್.ವಿ.ದತ್ತರವರು ವಿಧಾನಪರಿಷತ್ ಸದಸ್ಯರ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಎರಡು ಚುನಾವಣೆಗಳಲ್ಲಿ ಹೆಚ್ಚಿನ ಮತ ನೀಡಿ ತಮ್ಮ ಅಭಿಮಾನ ಮೆರೆದಿದ್ದಾರೆ. ಜೆಡಿಎಸ್ ಪಕ್ಷದ ಪ್ರಶ್ನಾತೀತ ವ್ಯಕ್ತಿಯಾಗಿರುವ ದತ್ತರವರು ಈ ಭಾರಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದರು.
ಸಾಮಾಜಿಕ ನ್ಯಾಯ: ಕಡೂರು ಪುರಸಭೆ ಚುನಾವಣೆಯಲ್ಲಿ 30 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಪರಿಶಿಷ್ಟ ವರ್ಗದ ಮಹಿಳೆಗೆ ಟಿಕೆಟ್ ನೀಡಿ ಗೆಲ್ಲಿಸಿರುವುದು ಜೆಡಿಎಸ್ನ ಸಾಮಾಜಿಕ ನ್ಯಾಯಕ್ಕೆ ಸಾಕ್ಷಿಯಾಗಿದೆ. ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜನರ ಸೇವೆ ಮಾಡುವ ಸಂಕಲ್ಪ ಹೊಂದಿರುವ ದತ್ತರವರು ಜನಸಾಮಾನ್ಯರು ಪ್ರೀತಿಸುವ ವ್ಯಕ್ತಿಯಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಅಧ್ಯಕ್ಷ ಕೆ.ವಿ. ವಾಸು, ಮುಖಂಡರಾದ ಕೆ.ಎಸ್. ರಮೇಶ್, ಕೆ.ಹೆಚ್. ಲಕ್ಕಣ್ಣ, ಎನ್. ಇಮಾಮ್, ಬಿ.ಪಿ.ನಾಗಪ್ಪ, ಕೆ.ಎಸ್. ತಿಪ್ಪೇಶ್, ಸೀಗೇಹಡ್ಲು ಹರೀಶ್, ತನ್ವೀರ್ ಅಹಮದ್, ಬಿ.ಟಿ. ಗಂಗಾಧರನಾಯ್ಕ, ಜಿಗಣೇಹಳ್ಳಿ ನೀಲಕಂಠಪ್ಪ, ಡಿ. ಪ್ರಶಾಂತ್, ಲೋಕೇಶ್, ಸತೀಶನಾಯ್ಕ, ನಿಂಗಪ್ಪ, ಜಯಮ್ಮ, ಯಶೋಧಮ್ಮ, ನೇತ್ರಾವತಿ, ವಿನಯ್ ದಂಡಾವತಿ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

