ಸಂಸ್ಕೃತಿ ಜೀವನ ಪದ್ಧತಿಯ ಅವಲೋಕನ
ಕ.ಪ್ರ.ವಾರ್ತೆ, ತರೀಕೆರೆ, ಏ.4.
ಸಂಸ್ಕೃತಿ ಎಂಬುದು ನಮ್ಮ ಜೀವನ ಪದ್ಧತಿಯ ಅವಲೋಕನ ಎಂದು ಮೈಸೂರು ಮಹಾರಾಣಿ ಕಾಲೇಜು ಪ್ರಾದ್ಯಾಪಕ ಡಾ.ಬಿ.ವಿ. ವಸಂತಕುಮಾರ್ ತಿಳಿಸಿದ್ದಾರೆ.
ಅವರು, ಪಟ್ಟಣದ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗ, ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಮೈಸೂರು ವತಿಯಿಂದ, ಕಾಲೇಜು ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ನಾವು ಮತ್ತು ನಮ್ಮ ಸಂಸ್ಕೃತಿ ಕುರಿತು ಮಾತನಾಡುತ್ತಿದ್ದರು.
ಸಂಬಂಧವೆನ್ನುವುದು ಬಹಳ ಮುಖ್ಯವಾದುದು, ಸಂಬಂಧ ಪದ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ನಮ್ಮ ಜೀವನವನ್ನು ಸಾಧುವಾಗಿಸಿಕೊಳ್ಳುವ ವಿಧಾನಗಳು ಹಾಗೂ ಪಾರಂಪರಿಕ ವಿಕಸನಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದ ಅವರು, ಸಂಸ್ಕೃತಿಯನ್ನು ಪುಸ್ತಕದಲ್ಲಿ ಹುಡುಕುವುದಕ್ಕಿಂತ ಜೀವನದಲ್ಲಿ ಹುಡುಕಬೇಕು, ರಾಷ್ಟ್ರಪತಿಯಾಗುವ ಆಸೆಗಿಂತ ರಾಷ್ಟ್ರಪುತ್ರನಾಗಬೇಕು ಎಂಬ ಆಸೆ
ಜನ್ಮ ತಳೆಯಬೇಕು ಎಂದು ಅವರು ತಿಳಿಸಿದರು.
ಅಸ್ತಿತ್ಯ ಕಳೆದುಕೊಳ್ಳುತ್ತಿರುವ ಭಾಷೆಗಳು: ಅತಿ ವೇಗದಲ್ಲಿ ಹೊರಟ ಸಾಮಾಜಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಲವು ಭಾಷೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ, ಯಾವ ಜನಾಂಗ ತನ್ನ ಭಾಷೆಯನ್ನು ಕೆಳೆದುಕೊಳ್ಳುತ್ತದೆಯೋ, ಆ ಜನಾಂಗ ತಮ್ಮ ಸಂಸ್ಕೃತಿಯನ್ನೇ ಕಳೆದುಕೊಳ್ಳುತ್ತದೆ. ಸಂಸ್ಕೃತಿ ಅರ್ಥವಾದಾಗ ಮಾತ್ರ ಅದರ ಮಹತ್ವ ಅರ್ಥವಾಗುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯ ಪ್ರೊ.ಕೆ.ವಿ. ಸಜ್ಜನಶಟ್ಟರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಪತ್ತನ್ನು ಹೊಂದುವುದು ಮುಖ್ಯವಲ್ಲ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವದು ಹೇಗೆ ಮುಖ್ಯವೋ
ಹಾಗೆ ಸಾವಿರಾರು ವರ್ಷಗಳ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇತಿಹಾಸ ಪ್ರಾಧ್ಯಾಪಕ ಪ್ರೊ.ಈ. ಭದ್ರಪ್ಪ, ಪರಂಪರೆ ಕೂಡದ ಸಂಚಾಲಕ ಪ್ರೊ. ಕೆ.ಎಸ್. ಮೇಲ್ಮಾಳಗಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

