ವಾಮಮಾರ್ಗ ಫಲಿಸದು
ಕಪ್ರ ವಾರ್ತೆ, ಚಿಕ್ಕಮಗಳೂರು, ಏ.7
ನನ್ನ ಶಕ್ತಿ ದಲಿತರ ಹೃದಯದಲ್ಲಿ ಅಡಗಿದ್ದು ಕೆಂಪು ಬಣ್ಣದ ಗರಿ, ಗರಿ ನೋಟಿನಿಂದ ಅದನ್ನು ಕಿತ್ತುಕೊಳ್ಳುವ ಭ್ರಮೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಾತೋರೆಯುವ ವಾಮ ಮಾರ್ಗಗಳ ಪ್ರಯತ್ನ ಫಲಿಸದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಪಾಂಚಜನ್ಯ ಜಿಲ್ಲಾ ಬಿಜೆಪಿ ಕ:ಕೇರಿ ಆವರಣದಲ್ಲಿ ಭಾನುವಾರ ನಡೆದ ಎಸ್.ಸಿ. ಮೋರ್ಚಾ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
6 ದಶಕಗಳ ಕಾಲ ದೇಶ ಆಳಿದ ಕಾಂಗ್ರೆಸ್ಸಿಗರು ಪ್ರತಿ ನಗರ ಹಾಗೂ ಗ್ರಾಮಗಳಲ್ಲೂ ಕಾಲೋನಿ ಸೃಷ್ಟಿಸುವ ಮೂಲಕ ಜಾತಿ ಕಂದಕವನ್ನು ತೆರೆದಿಟ್ಟು ದಲಿತರನ್ನು ಓಟ್ ಬ್ಯಾಂಕ್ಗೆ ಸೀಮಿತ ಮಾಡಿಕೊಂಡು ಅಸ್ಪೃಶ್ಯತೆಯ ಪಟ್ಟ ಕಟ್ಟಿ ಈಗ ನಾಟಕದ ಹೇಳಿಕೆ ನೀಡುತ್ತಿರುವುದನ್ನು ಜನ ನಂಬುವಂತ ಕಾಲ ಇದಲ್ಲ ಎಂದರು.
ಇಂದು ಕ್ಷೇತ್ರದ 80 ರಷ್ಟು ಕಾಲೋನಿಗಳಲ್ಲಿ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ, 7400 ಮನೆಗಳನ್ನು ನೀಡಿದ್ದೇವೆ, ಅಂಬೇಡ್ಕರ್ ಭವನ ಸೇರಿದಂತೆ ದಲಿತರ ಏಳಿಗೆಗೆ ಶ್ರಮವಹಿಸಿರುವುದು ಬಿಜೆಪಿ ಎಂದು ಹೇಳಿದರು.
ಅಭಿವೃದ್ಧಿಯನ್ನು ಸ್ವಾಗತಿಸಿ ದಲಿತರು ಬಿಜೆಪಿಗೆ ಬೆಂಬಲಿಸುತ್ತಿರುವುದನ್ನು ನೋಡಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ದುರ್ಬಲವಾಗಿವೆ. ಅಧಿಕಾರದಲ್ಲಿದ್ದಾಗ ಬಡ ಜನರನ್ನು ಕಡೆಗಣಿಸಿ ಓಟ್ ಬ್ಯಾಂಕ್ ಮಾಡಿಕೊಂಡು ಶೋಷಣೆ ಮಾಡಿರುವ ಕಾಂಗ್ರೆಸ್ ಇಡಿಗಂಟು ಜಪ್ತಿಯಾಗೋದು ಕಾತರಿಯಾಗಿ ವಾಮ ಮಾರ್ಗದಲ್ಲಿ ನಾನಾ ನಾಟಕೀಯ ವೇಶ ಹಾಕುವ ಸಿದ್ದತೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ಹಣ, ಜಾತಿ, ಹೆಂಡಗಳಲ್ಲಿ ಚುನಾವಣೆ ಗೆಲ್ಲುವ ನಂಬಿಕೆ ನಮಗಿಲ್ಲ, ಸೈದ್ದಾಂತಿಕ ನೆಲೆ ಗಟ್ಟಿನಲ್ಲಿ ರೂಪುಗೊಂಡ, ದೇಶದ ಕಟ್ಟೆ ಕಡೆಯ ಮನುಷ್ಯನೂ ತಲೆ ಎತ್ತಿ ಸ್ವಾಭಿಮಾನದಿಂದ ಬಾಳಬೇಕೆಂಬ ಕನಸು ಹೊತ್ತಿ ಬಂದಂತ ಪಕ್ಷ ನಮ್ಮದು ಎಂದರು.
ತರಕಾರಿ ಅಥವಾ ಮಣ್ಣಿನ ಮಡಿಕೆ ಕೊಳ್ಳುವಾಗ ಪರೀಕ್ಷಿಸುವ ನೀವು ನಿಮ್ಮ ಒಂದು ಮತ ಊರಿನ ಅಭಿವೃದ್ದಿ, ನಿಮ್ಮ ಆಶ್ರಯ ಮನೆ, ನೆಮ್ಮದಿ ಜೀವನಕ್ಕೆ ಆಧಾರ, ಅದನ್ನು ಹಣ ಹೆಂಡಕ್ಕೆ ಮಾರಿಕೊಳ್ಳಲು ಸಾಧ್ಯವೆ ಎಂದು ಅರಿತು ಮತ ಚಲಾಯಿಸುತ್ತೀರಾ ಎನ್ನುವ ವಿಶ್ವಾವಿದೆ ಎಂದು ಹೇಳಿದರು.
ತಾಪಂ ಸದಸ್ಯ ಕನಕರಾಜ್ ಮಾತನಾಡಿ, ಬಡವರ ಮಕ್ಕಳು ಎಂಜಿನೀಯರ್ ಅಥವಾ ಡಾಕ್ಟರ್ ಆದರೆ ಓಟ್ ಬ್ಯಾಂಕ್ ಎಲ್ಲಿ ಕುಲಾಸೆ ಆಗುತ್ತದೊ ಎಂಬ ಭಯ ಕಾಂಗ್ರೆಸ್ಸಿಗರಿಗಿದೆ.
ಆದ್ದರಿಂದಲೇ ಸರ್ಕಾರಿ ಎಂಜಿನೀಯರಿಂಗ್ ಕಾಲೇಜು ಮತ್ತು ಮೆಡಿಕಲ್ ಕಾಲೇಜು ತರಲು ಹಿಂದೇಟು ಹಾಕಿದ್ದು, ಬಡವರ ಮಕ್ಕಳು ಶಿಕ್ಷಣ ಹೊಂದಿ ಆರ್ಥಿಕವಾಗಿ ಸಬಲರಾಗಬೇಕೆಂಬ ಕನಸು ಹೊತ್ತಿ ಸಹಕರಿಸಿದ್ದು ಬಿಜೆಪಿ ಎಂದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರದಲ್ಲಿ ಬಡವರ ಮೂಗಿಗೆ ತುಪ್ಪ ಸವರಿದ ಹಾಗೆ ಸಿ.ಟಿ. ರವಿ ಮಾಡಲಿಲ್ಲ, ಉಳಿದ ಅಭಿವೃದ್ದಿ ಕೆಲಸಗಳನ್ನು ಕಾರ್ಯಗತ ಮಾಡುವ ಶಕ್ತಿಯಾಗಿ ಹೊರಹೊಮ್ಮಲು ಎಲ್ಲರೂ ಕೈಜೋಡಿಸಬೇಕೆಂದರು.
ನಗರಾಧ್ಯಕ್ಷ ರಂಗನಾಥ್, ಲಕ್ಷ್ಮಣ್ ನಾಯಕ್, ದಲಿತ ಮೋರ್ಚಾ ತಾಲೂಕು ಅಧ್ಯಕ್ಷ, ವೆಂಕಟೇಶ್, ಜಿ.ಪಂ. ಸದಸ್ಯ ಜೆ.ಡಿ. ಲೋಕೇಶ್,ವನೀತಾ, ನಿಂಗೇಗೌಡ, ಲಕ್ಮಮ್ಮ, ಜಾನಯ್ಯ,ಇರಿಗಯ್ಯ, ಹಿರೇಮಗಳೂರು ಕೇಶವಮೂರ್ತಿ, ವರಸಿದ್ದಿ ವೇಣುಗೋಪಾಲ್, ಸೀತಾರಾಂ ಭರಣ್ಯ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

