'ಕೇಂದ್ರ ಸಚಿವರ ರಾಜಿನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ'
ಕೊಪ್ಪ: ಕಾಂಗ್ರೆಸ್ ಕೇಂದ್ರ ನಾಯಕರ ರಾಜಿನಾಮೆ ಕೇಳುವ ನೈತಿಕ ಹಕ್ಕು ಶೃಂಗೇರಿ ಬಿಜೆಪಿ ನಾಯಕರಿಗಿಲ್ಲ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅಡಕೆ ಹಳದಿ ಎಲೆ ರೋಗದ ಸಂತ್ರಸ್ತರ ಪರಿಹಾರಕ್ಕಾಗಿ ರೈತ ಸಂಘದ ಸಹಕಾರದೊಂದಿಗೆ ನೈಜ ಹೋರಟ ರೂಪಿಸಿದ್ದರ ಪರಿಣಾಮವಾಗಿ ಕೇಂದ್ರ ನಾಯಕ ವೀರಪ್ಪ ಮೊಯ್ಲಿ ಗೋರಖ್ಸಿಂಗ್ ವರದಿ ಜಾರಿಗೆ ತರುವ ಬರವಸೆ ನೀಡಿದರ ಫಲವಾಗಿ ವರದಿಯ 10 ಅಂಶದ ಪೈಕಿ 9 ಅಂಶಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಉಳಿದ ಸಂತ್ರಸ್ತರ ಸಾಲ ಮನ್ನಾ ಅಂಶದ ವಿಚಾರವಾಗಿ ಪ್ರಮಾಣಿಕ ಪ್ರಯತ್ನವನ್ನು ಕೇಂದ್ರ ಸಚಿವರು ಮಾಡುತ್ತಿದ್ದಾರೆ. ಅದರೆ ಬಿಜೆಪಿ ಶೃಂಗೇರಿ ಕ್ಷೇತ್ರದಲ್ಲಿ ಹಳದಿ ಅಡಕೆ ಬೆಳೆಗಾರ ಸಮೀಕ್ಷೆ ಮಾಡುವುದಾಗಿ ಜನರ ಕಣ್ಣಿಗೆ ಮಣ್ಣು ಎರಚಿ ಹಣ ಪೋಲುಮಾಡಿ ಕೇಂದ್ರ ಸಚಿವರ ರಾಜಿನಾಮೆ ಕೇಳುವ ನೈತಿಕ ಹಕ್ಕಿಲ್ಲ ಎಂದರು.
ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಜಿಪಂ ಅಧ್ಯಕ್ಷರಾದ ಸಮಯದಲ್ಲಿ ಗ್ರಾಪಂಗಳಲ್ಲಿ ಸಮನ್ವಯತೆಯ ಅಧಿಕಾರವನ್ನು ನಡೆಸಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ಎಂದರು. ಗೋಷ್ಠಿಯಲ್ಲಿ ನಾರ್ವೆ ಅಶೋಕ್, ಗಿರೀಶ್ ಕೂಡಿಗೆ, ಒಣಿತೋಟ ರತ್ನಕಾರ್, ಇನೇಶ್, ನಾರ್ವೆ ನಾಗೇಶ್, ಕಲ್ಮಕ್ಕಿ ನಾಗೇಂದ್ರ, ಮಹ್ಮದೇ ಸಾಹೇಬ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

