ಬಾಸ್ಕೆಟ್ ಬಾಲ್ ಶಿಬಿರಕ್ಕೆ ಚಾಲನೆ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.9
8 ರಿಂದ 16 ವರ್ಷದೊಳಗಿನ ಬಾಲಕ- ಬಾಲಕಿಯರಿಗಾಗಿ ಚಿಕ್ಕಮಗಳೂರು ಬಾಸ್ಕೆಟ್ ಬಾಲ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿರುವ ಒಂದು ತಿಂಗಳ ಬಾಸ್ಕೆಟ್ ಬಾಲ್ ತರಬೇತಿ ಶಿಬಿರಕ್ಕೆ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರದ ಸಂಜೆ ಚಾಲನೆ ನೀಡಲಾಯಿತು.
ತರಬೇತಿ ಶಿಬಿರವನ್ನು ಕ್ಲಬ್ನ ಗೌರವ ಉಪಾಧ್ಯಕ್ಷ ಸಿ.ಎಂ. ಜಾರ್ಜ್ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಪ್ರತಿಯೊಬ್ಬರ ಜೀವನವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆಗೆ ಮಹತ್ತರ ಪಾತ್ರವಿದೆ. ಕ್ರೀಡೆಯಲ್ಲಿ ಆಸಕ್ತಿ ಬೆಳೆಸುವುದರ ಜೊತೆಗೆ ಸಹಪಾಠಿಗಳನ್ನು ಕ್ರೀಡಾಸಕ್ತರನ್ನಾಗಿ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕೆಂದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಧರ್ ಮಾತನಾಡಿ, ಬಾಸ್ಕೆಟ್ ಬಾಲ್ ತರಬೇತಿ ನೀಡುವ ಮೊದಲ ಉಚಿತ ಶಿಬಿರ ಇದಾಗಿದೆ. ಇಂಥಹ ಶಿಬಿರಗಳ ಲಾಭ ಪಡೆಯುವಲ್ಲಿ ಮಕ್ಕಳನ್ನು ಪೋಷಕರು ಪ್ರೋತ್ಸಾಹಿಸಬೇಕು. ಶಿಬಿರದಲ್ಲಿ ಭಾಗವಹಿಸುವವರು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಹಾಗೂ ಬೇರೆಯವರಿಗೂ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.
ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳ ಮೂಲಕ ಪ್ರಾಮಾಣಿಕತೆ ಕಲಿಯಲೂ ಸಾಧ್ಯವಾಗುತ್ತದೆ. ಮನಸ್ಸು ಚುರುಕುಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಈ ತರಬೇತಿ ಶಿಬಿರದಲ್ಲಿ ಭಾಗವಹಿಸುವವರಿಂದ ಬಾಸ್ಕೆಟ್ ಬಾಲ್ ತಂಡಗಳು ಸೃಷ್ಟಿಯಾಗಲಿ ಎಂದು ಹೇಳಿದರು. ಕ್ಲಬ್ಬಿನ ಅಧ್ಯಕ್ಷ ಪೆಪ್ಪಿ ಜೇಕಬ್ ಮಾತನಾಡಿದರು. ಕಾರ್ಯದರ್ಶಿ ಪರಮೇಶ್ ರಾಜ್ ಅರಸ್, ಲೋಸನ್ ಲೋಬೋ, ಅಖಿಲ್ ಸುವರ್ಣ ಉಪಸ್ಥಿತರಿದ್ದರು. ಕ್ರೀಡಾಪಟು ಹನಿಗೌಡ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

