ವೃದ್ಧರಿಗೆ ವೃದ್ಧಾಶ್ರಮ ಸಹಕಾರಿ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಏ.10
ಹಿರಿಯ ಜೀವಗಳಿಗೆ ಆಸರೆಯಾಗಿ ಯುವಕರು ನಿಲ್ಲಬೇಕು ಎಂದು ಜೀವನಸಂಧ್ಯಾ ವೃದ್ಧಾಶ್ರಮದ ಸಭಾಪತಿ ಎಂ.ಆರ್. ಗುರುಮೂರ್ತಿ ಕರೆ ನೀಡಿದ್ದಾರೆ.
ಇಲ್ಲಿನ ಸರ್ಕಾರಿ ಕಾಲೇಜಿನ ಯುವ ರೆಡ್ ಕ್ರಾಸ್ ವತಿಯಿಂದ ಕದ್ರಿಮಿದ್ರಿಯ ಜೀವನ ಸಂಧ್ಯಾ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ವೃದ್ಧರೊಂದಿಗೆ ವಿದ್ಯಾರ್ಥಿಗಳ ಸಂಬಂಧ ಬೆಸುಗೆಯ ಬಾಂಧವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೃದ್ಧಾಶ್ರಮ ಅಗತ್ಯವೇ ಎಂಬ ಚರ್ಚೆ ಹಿಂದಿನಿಂದಲೂ ಇದೆ. ಅನೇಕ ಕಾರಣಗಳಿಂದ ವೃದ್ಧ ಪೋಷಕರೊಂದಿಗೆ ಮಕ್ಕಳು ಅನಿವಾರ್ಯ ಸಂದರ್ಭದಲ್ಲಿ ಇರಲು ಸಾಧ್ಯವಾಗದ ಕಾಲಘಟ್ಟದಲ್ಲಿ ಹಿರಿಯರ ಬಾಳಸಂಜೆ ಸುಖಮಯವಾಗಿಸಲು ವೃದ್ಧಾಶ್ರಮ ಸಹಕಾರಿ. 8 ವೃದ್ಧರಿಂದ ಆರಂಭಗೊಂಡ ಜೀವನಸಂಧ್ಯಾ 60ರ ಗಟಿದಾಟಿದೆ. ಹಣ ವಿನಿಯೋಗಿಸುವರಿಗಾಗಿ ಸೆಮಿಸ್ಪಷಲ್ ವಾರ್ಡ್ ಸೌಲಭ್ಯವಿದ್ದು, ಉಳಿದವರಿಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ಜೀವನಾನುಭವ ಅರಿವ ವಿದ್ಯಾರ್ಥಿಗಳ ಆಸಕ್ತಿ ಅನುಕರಣಿಯ ಎಂದು ಗುರುಮೂರ್ತಿ ಹೇಳಿದರು.
ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಶ್ರೀಶಾರದಾಮಠದ ಮಾತಾಜಿ ಪ್ರವರಾಜಿಕ ಆದಿತ್ಯಪ್ರಾಣ ಸಾನ್ನಿಧ್ಯವಹಿಸಿ ಮಾತನಾಡಿ, ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ನಡೆ, ನುಡಿ, ಆಚಾರ, ವಿಚಾರಗಳು ಮೌಲ್ಯವನ್ನು ಪ್ರತಿಪಾದಿಸುತ್ತದೆ. ಪಕ್ವವಾದ ಮನಸ್ಸು, ಬುದ್ಧಿ ಅರಿತು ಅವರ ಮಾರ್ಗದರ್ಶನ ಪಡೆಯುವ ವಿದ್ಯಾರ್ಥಿಗಳ ಆಸಕ್ತಿ ಸ್ವಾಗತಾರ್ಹ. ಒಳ್ಳೆಯ ಸಂಸ್ಕಾರ ಲಭ್ಯವಾಗಿ, ಸತ್ಪ್ರಜೆಗಳಾಗಲು ಪ್ರೇರಕ ಕಾರ್ಯಕ್ರಮ ಇದು ಎಂದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬಿ.ಎಚ್. ನರೇಂದ್ರಪೈ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಗೆ ಬಾಂಧವ್ಯ ಕಾರ್ಯಕ್ರಮ ಪೂರಕ. ಅನುಭವ, ಸಿರಿವಂತಿಕೆ ಹೆಚ್ಚಿಸುವುದರ ಜೊತೆಗೆ ಕರ್ತವ್ಯ ನಿರ್ವಹಣೆಯ ಮಾರ್ಗದರ್ಶನಕ್ಕೂ ಪ್ರೇರಕ ಎಂದು ತಿಳಿಸಿದರು.
ಸಂಬಂಧ ಸುಧಾರಣೆ ಅಗತ್ಯ: ರೆಡ್ ಕ್ರಾಸ್ ಶಾಖಾ ಸಭಾಪತಿ ಡಾ. ಕೆ. ಸುಂದರ್ ಗೌಡ ಮಾತನಾಡಿ, ಆಧುನಿಕತೆಯ ಭರಾಟೆಯ ನಡುವೆ ಹಿರಿಯರು ಮತ್ತು ಕಿರಿಯರ ನಡುವಿನ ಸಂಬಂಧ ಸುಧಾರಣೆ ಅಗತ್ಯ. ಪ್ರೀತಿ, ವಿಶ್ವಾಸದ ಕಲಿಕೆಯಿಂದ ಒಳ್ಳೆಯ ಪ್ರಜೆಗಳು ಮೂಡುತ್ತಾರೆ. ಕ್ಷಮಾಗುಣ ಪ್ರೀತಿಯನ್ನು ಪ್ರೇರೇಪಿಸುತ್ತದೆ. ಹಿರಿಯಜೀವಗಳು ಕಿರಿಯರನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕೆಂದರು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಸ್. ಜಯಪ್ರಕಾಶ್ ಮಾತನಾಡಿದರು. ಕಾಲೇಜು ಪ್ರಾಂಶುಪಾಲೆ ಡಾ. ಜರೀನಾ ಕೌಸರ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಯುವ ರೆಡ್ ಕ್ರಾಸ್ ಘಟಕ ಕಾರ್ಯಕ್ರಮಾಧಿಕಾರಿ ಡಾ. ಕೆ.ಸಿ. ಜಗದೀಶ್ ಸ್ವಾಗತಿಸಿದರು, ಉಪನ್ಯಾಸಕ ಆರ್. ಶ್ರೀನಿವಾಸ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

