ಜಾತಿ ರಾಜಕೀಯ ಮಾಡಲಾರೆ
ಚಿಕ್ಕಮಗಳೂರು, ಏ.12
ಜಾತಿ ರಾಜಕಾರಣ ಮಾಡದೆ ನೀತಿ, ಪ್ರೀತಿ, ಅಭಿವೃದ್ಧಿ ರಾಜಕಾರಣಕ್ಕೆ ಬೆಲೆ ಕೊಟ್ಟು, ಸ್ವ ಇಚ್ಚೆಯಿಂದ ಸಹಕಾರ ನೀಡಿದ ಕುರುಬ ಜನಾಂಗದ ಶಕ್ತಿಯಿಂದ ನನಗೆ ನೂರಾನೆ ಬಲ ಬಂದಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಬೆಂಬಲಿತ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ನಿಷ್ಠೆ, ಪರಿಶ್ರಮ ಇದ್ದರೆ ಯೋಗ್ಯತೆ ಆಧಾರದಲ್ಲಿ ಮೇಲೆ ಮುಂದೆ ಬರಲು ಸಾಧ್ಯ. ಅದಕ್ಕೆ ಬಿಜೆಪಿ ಎಂದಿಗೂ ಅವಕಾಶ ಕಲ್ಪಿಸುತ್ತದೆ. ಹಾಗಾಗಿ ಗ್ರಾಮ ಪಂಚಾಯಿತಿಯಿಂದ, ನಗರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎ.ಪಿ.ಎಂ.ಸಿ. ಸೇರಿದಂತೆ ರಾಜಕೀಯವಾಗಿ ಎಲ್ಲೂ ತಾರತಮ್ಯ ಮಾಡದೆ ಮನ್ನಣೆ ನೀಡಲಾಗಿದೆ ಎಂದರು.
ಎಲ್ಲರ ವಿಶ್ವಾಸ: ಜಾತಿ ಹಣೆಪಟ್ಟಿ ಮೇಲೆ ರಾಜಕೀಯ ಮಾಡಲು ನಂಬಿಕೆ ಇಲ್ಲ. ಅದನ್ನು ಅಸ್ತ್ರವಾಗಿಟ್ಟುಕೊಂಡು ಅಭಿವೃದ್ಧಿಯೂ ಮಾಡಿಲ್ಲ. ಜಗಳವೂ ಮಾಡಿಸಿಲ್ಲ. ಎಲ್ಲ ಸಮುದಾಯಕ್ಕೂ ನ್ಯಾಯ ಸಮ್ಮತವಾಗಿ ಕಂಡು ಕ್ಷೇತ್ರದ ಉದ್ದಗಲಕ್ಕೂ ಅಭಿವೃದ್ಧಿ ಮಾಡಿದ್ದರ ಪರಿಣಾಮ ಎಲ್ಲರ ವಿಶ್ವಾಸಗಳಿಸಿದ್ದೇನೆಂದರು.
ಅಧಿಕಾರದಲ್ಲಿ ಮೈಮರೆಯದೆ, ಮಕ್ಕಳಿಂದ ವೃದ್ಧರವರೆಗೂ ಸಲಿಗೆಯಿಂದ, ಯಾರಲ್ಲೂ ಭಯ ಹುಟ್ಟಿಸದೆ, ಪ್ರೀತಿ ರಾಜಕಾರಣ ಮಾಡಿದ್ದೇನೆ. ಸತ್ಯವನ್ನರಿತು ನೀವು ಇಂದು ನೀಡುತ್ತಿರುವ ಪ್ರೋತ್ಸಾಹಕ್ಕೆ ಮುಂದೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹೆಚ್.ಎಸ್. ಪುಟ್ಟೇಗೌಡ ಮಾತನಾಡಿ, ವಿರೋಧ ಪಕ್ಷಗಳ ಸುಳ್ಳಿನ ಅಪಪ್ರಚಾರಕ್ಕೆ ಬಲಿಯಾಗಿ ಅಭಿವೃದ್ಧಿ ಚಿಂತನೆಯುಳ್ಳ ಇಂತಹ ವ್ಯಕ್ತಿಯನ್ನು ಕೈಬಿಟ್ಟರೆ ಆತ್ಮವಂಚನೆ ಮಾಡಿಕೊಂಡ ಹಾಗಾಗುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಹಿಂದೆ ಕುರುಬ ಸಮಾಜ ಇದೆ ಎಂದು ದಿಕ್ಕು ತಪ್ಪಿಸುತ್ತಾರೆ. ನಮ್ಮ ಸಮಾಜವನ್ನು ಗುರುತಿಸಿ ರಾಜಕೀಯವಾಗಿ ಹಾಗೂ ಸಮಾಜಕ್ಕೆ ಶಕ್ತಿ ತುಂಬಿದ ಏಕೈಕ ಪಕ್ಷ ಬಿಜೆಪಿ ಎಂದರು. ತಾಪಂ ಸದಸ್ಯ ಕನಕರಾಜ್, ನಗರಾಧ್ಯಕ್ಷ ಸಿ.ಎಸ್. ರಂಗನಾಥ್, ಗ್ರಾ.ಪಂ. ಅಧ್ಯಕ್ಷ ದಿನೇಶ್, ನಗರಸಭಾ ಸದಸ್ಯ ಶ್ರೀನಿವಾಸ್, ಮುಖಂಡರಾದ ಮಧುಕುಮಾರ್ ರಾಜ್ ಅರಸ್, ವರಸಿದ್ದಿ ವೇಣುಗೋಪಾಲ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

