ಚಿಕ್ಕಮಗಳೂರು

ಯಡಿಯೂರಪ್ಪ ನೀಡಿದ ಅನುದಾನ ಸ್ಮರಣಾರ್ಹ

Published On :

ಕ.ಪ್ರ ವಾರ್ತೆ, ಶಿಕಾರಿಪುರ, ಏ.13
ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಯಡಿಯೂರಪ್ಪನವರು ಕಾಗಿನೆಲೆ ಕನಕ ಗುರುಪೀಠದ ಕನಕ ವಿದ್ಯಾ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕೋಟಿ ಅನುದಾನ ನೀಡುವ ಮೂಲಕ ಮಠದ ಬಡಮಕ್ಕಳ  ಶೈಕ್ಷಣಿಕ ಕನಸನ್ನು ನನಸಾಗಿಸಲು ಸಹಕರಿಸಿ ಬಹುದೊಡ್ಡ ಜವಾಬ್ದಾರಿ ಕಡಿಮೆಗೊಳಿಸಿದ್ದಾರೆ ಎಂದು ಕಾಗಿನೆಲೆ  ಕನಕ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು.
ಶನಿವಾರ ಸಂಜೆ ಪಟ್ಟಣದ ಹೊರವಲಯ ಕಾನಹಕ್ಕಲು ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ  ಕೋಟ್ಯಂತರ ವೆಚ್ಚದ ಕನಕವಿದ್ಯಾಸಂಸ್ಥೆಯ ಕಾಮಗಾರಿ ಪ್ರಗತಿ ಪರಿಶೀಲಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧಿಕಾರವಧಿಯಲ್ಲಿ ಅನುದಾನ: ಸಮಾಜದ ನಿರ್ಗತಿಕ, ಬಡ ಮಕ್ಕಳ ಹಾಗೂ ಸಂಚಾರಿ ಕುರಿಗಾರರ ಮಕ್ಕಳ ಉನ್ನತ ಶೈಕ್ಷಣಿಕ ಪ್ರಗತಿಗೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಅಡಿಯಲ್ಲಿನ ಶ್ರೀ ಕನಕ ವಿದ್ಯಾಸಂಸ್ಥೆಯ ವಸತಿ ಶಾಲೆಯ ನಿರ್ಮಾಣಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಕೋಟಿ ರುಪಾಯಿ ಅನುದಾನ ನೀಡುವ ಮೂಲಕ ಮಠದ ಬಡ ಮಕ್ಕಳ ಶೈಕ್ಷಣಿಕ ಕನಸು ಸಾಕಾರಗೊಳ್ಳಲು ಸಹಕರಿಸಿದ್ದಾರೆ ಎಂದರು.
ಇದೇ 18,19ರಂದು ಶ್ರೀ ಕ್ಷೇತ್ರ ಕಾಗಿನೆಲೆಯಲ್ಲಿ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ  ಹಾಗೂ ಮಹಾಸಿದ್ದೇಶ್ವರಿ ದೇವರ ವರ್ಷಾಭಿಷೇಕ ಮತ್ತು ಕನಕ ರಥೋತ್ಸವ ಹಾಗೂ ಸಾಮೂಹಿಕ ವಿವಾಹ  ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ ಅನುಗ್ರಹಕ್ಕೆ ಪಾತ್ರರಾಗಲು ತಿಳಿಸಿದರು. ---
ಇಂದು ಸ್ವ ಸಹಾಯ ಸಂಘದ ಗ್ರಾಮೀಣ ಕ್ರೀಡಾಕೂಟ
ನರಸಿಂಹರಾಜಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ, ಶೃಂಗೇರಿ ಹಾಗೂ ನರಸಿಂಹರಾಜಪುರ ತಾಲೂಕುಗಳ ಯೋಜನಾ ಕಚೇರಿ ವ್ಯಾಪ್ತಿಯ ಪ್ರಗತಿ ಬಂಧು- ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಗ್ರಾಮೀಣ ಕ್ರೀಡಾ ಕೂಟವು ಕುದುರೆ ಗುಂಡಿಯಲ್ಲಿ ಏಪ್ರಿಲ್ 14 ರ ಭಾನುವಾರ ನಡೆಯಲಿದೆ.
ಕ್ರೀಡಾ ಕೂಟದಲ್ಲಿ ವಿಶೇಷ ಆಕರ್ಷಣೆಯಾಗಿ ಕೆಸರು ಗದ್ದೆ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಕುದುರೆಗುಂಡಿಯ ಕೃಷಿಕರಾದ ಅನುಸೂಯಮ್ಮ ಉದ್ಘಾಟಿಸಲಿದ್ದಾರೆ.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪದ ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪ ಸಹಕಾರ ಸಾರಿಗೆ ಅಧ್ಯಕ್ಷ ಜಿ.ಆರ್. ವಿಶ್ವನಾಥ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಧ.ಗ್ರಾ. ಯೋಜನೆಯ 3 ತಾಲೂಕುಗಳ ಯೋಜನಾಧಿಕಾರಿ ಎ.ಎಸ್. ಸುಕೇಶ್, ನರಸಿಂಹರಾಜಪುರದ ಸಾಹಿತಿ ಎಂ. ಜಯಮ್ಮ ಉಪಸ್ಥಿತರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.