ಚಿಕ್ಕಮಗಳೂರು

ಸ್ನೇಕ್ ನರೇಶ್ ಪಕ್ಷೇತರ ಸ್ಪರ್ಧೆ

Published On :

ಕಪ್ರವಾರ್ತೆ,ಚಿಕ್ಕಮಗಳೂರು, ಏ.16
ವೃತ್ತಿಯಲ್ಲಿ ಟೈಲರ್, ಪ್ರವೃತ್ತಿಯಲ್ಲಿ ಸ್ನೇಕ್ ಕ್ಯಾಚರ್.
ಈತ ಯಾರು ಗೊತ್ತೆ? ಸ್ನೇಕ್ ನರೇಶ್. ಈ  ಬಾರಿ ಅವರು ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ.
 ಪತ್ನಿ ಡಿ.ಎಸ್. ಗೀತಾ ಅವರೊಂದಿಗೆ ತಾಪಂನಲ್ಲಿರುವ ಚುನಾವಣಾ ಕಚೇರಿಗೆ ಬಂದು ಮಂಗಳವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ: ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರಿಂದ ಕೈಯಲ್ಲಿ ಠೇವಣಿ ಕಟ್ಟಲು 5 ಸಾವಿರ ರುಪಾಯಿ, ಇದರ ಜತೆಗೆ ನಾಮಪತ್ರ ಸಲ್ಲಿಕೆಗೆ ಬೇಕಾದ ದಾಖಲಾತಿಗಳನ್ನು ತಂದಿದ್ದರು. ತಾಪಂ ಆವರಣಕ್ಕೆ ಬಂದ ಮೇಲೆ ಪರಿಚಯಸ್ಥರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಕರೆಸಿಕೊಂಡು ಸೂಚಕರಾಗಿ ಸಹಿ ಮಾಡಿಸಿ ನಾಮಪತ್ರವನ್ನು ಸಲ್ಲಿಸಿದರು.
ಸಲಹೆ: ಕಳೆದ ಮೂರು ವರ್ಷದ ಹಿಂದೆ ಮರ್ಲೆ ಗ್ರಾಮದ ದೇವರಾಜ್ ಹಾವು ಹಿಡಿಯಲು ಹೋಗಿದ್ದಾಗ ಸಿಕ್ಕಿದ್ದರು. ಅವರು ಅಲ್ಲಿ ಸೇರಿರುವ ಜನರನ್ನು ನೋಡಿ, ಎಲೆಕ್ಷನ್ ಏಕೆ ನಿಂತುಕೊಳ್ಳಬಾರದು ಎಂದು ಸಲಹೆ ನೀಡಿದರು. ಆ ಮಾತು ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತು. ಅಂದಿನಿಂದ ಈಗಿನವರೆಗೆ ಹಾವು ಹಿಡಿಯುವ ಜತೆ ಜತೆಗೆ ಕಳೆದ ಮೂರು ವರ್ಷಗಳಿಂದ ಪ್ರಚಾರ ಮಾಡುತ್ತಾ ಬಂದಿದ್ದೇನೆ. ನಾನು ಹಾವು ಹಿಡಿಯುವ ಜಾಗದಲ್ಲಿ ಕನಿಷ್ಠ 50 ರಿಂದ 100 ಜನ ಸೇರುತ್ತಾರೆ. ಅವರೆಲ್ಲರೂ ನನ್ನನ್ನು ನೋಡಿರುತ್ತಾರೆ.
ಈವರೆಗೆ ಸುಮಾರು 15 ಸಾವಿರ ಹಾವು ಹಿಡಿದಿರಬಹುದು. ಪ್ರತಿ ಮನೆಯಿಂದ ಕನಿಷ್ಠ 3 ಮತಗಳು ಬರುವ ವಿಶ್ವಾಸ ಇದೆ. ಅಂದರೆ 45 ಸಾವಿರ ಮತಗಳನ್ನು ಪಡೆಯುವ ನಂಬಿಕೆ ಇದೆ ಎನ್ನುತ್ತಾರೆ.
ಭರವಸೆ: ಚಿಕ್ಕಮಗಳೂರಿನ ಹೆಣ್ಣು ಮಕ್ಕಳು ಸ್ಥಳೀಯವಾಗಿ ಕೆಲಸ ಸಿಗದೆ ಗಾರ್ಮೆಂಟ್ಸ್ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಅವರಿಗಾಗಿ ಚಿಕ್ಕಮಗಳೂರಿನಲ್ಲಿ ಗಾರ್ಮೆಂಟ್ಸ್ ಸ್ಥಾಪನೆ ಮಾಡಿ 10 ಸಾವಿರ ಮಹಿಳೆಯರಿಗೆ ಉದ್ಯೋಗ ಕೊಡಿಸುವುದು.
- ಶೇ. 60  ರಷ್ಟು ನಗರವಾಸಿಗಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರಿಗೆ ಮನೆ ಮಂಜೂರು. ಸರ್ಕಾರದಿಂದಲೇ  ವೃದ್ಧಾಶ್ರಮ ಸ್ಥಾಪನೆ. ಬಡ ಮಕ್ಕಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ. ಶಿಕ್ಷಣ ಕ್ಷೇತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆ ಏಳನೇ ಸ್ಥಾನದಲ್ಲಿದೆ. ಅದು ಮೊದಲನೇ ಸ್ಥಾನಕ್ಕೆ ಬರಬೇಕು.
ಬಾಳೆಹೊನ್ನೂರಿನ ಶ್ರೀಪತಿ ಖಾನ್ ಎಸ್ಟೇಟ್‌ನಲ್ಲಿ ಕಾಳಿಂಗ ಸರ್ಪ ಹಿಡಿಯುತ್ತಿರುವ ಸ್ನೇಕ್ ನರೇಶ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.