ಸಮಸ್ಯೆಗೆ ಕಾರಣವಾಗಲಿರುವ ಒತ್ತುವರಿ
ಕ.ಪ್ರ.ವಾರ್ತೆ, ಮೂಡಿಗೆರೆ, ಏ.18 ರಾಜ್ಯದಲ್ಲಿ ಈ ಚುನಾವಣೆಯ ಬಳಿಕ ಭೂಮಿ ವಿಷಯವು ಪ್ರಮುಖ ವಿಷಯವಾಗಲಿದೆ. ಇತ್ಯರ್ಥವಾಗದಿರುವ ಕಳಸ ಇನಾಂ ಭೂಮಿ ಹಾಗೂ 1.67 ಲಕ್ಷ ಎಕರೆ ಒತ್ತುವರಿ ಭೂಮಿ ತೆರವು ಬಹು ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ ಎಂದು ಮೀಸಲು ಕ್ಷೇತ್ರದ ಸಿಪಿಐ ಅಭ್ಯರ್ಥಿ ಸಾತಿ ಸುಂದರೇಶ್ ಹೇಳಿದರು.
ಅವರು ಬುಧವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳಸ ಇನಾಂ ಭೂಮಿ ಮತ್ತು ಒತ್ತುವರಿ ಸಂಗತಿ ದೊಡ್ಡ ಸವಾಲಿನದ್ದಾಗಿದೆ. ಭೂ ಕಬಳಿಕೆ ಕಾಯ್ದೆ ಜಾರಿಯಾದರೆ, ಅದರಿಂದ ಸಾವಿರಾರು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿರುವ ಶ್ರೀಮಂತರು ಮಾತ್ರವಲ್ಲದೇ ಬದುಕಿಗಾಗಿ ನಾಲ್ಕೈದು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿರುವವರ ಮೇಲೂ ಪರಿಣಾಮ ಬೀರಲಿದ್ದು, ಅದನ್ನು ತಪ್ಪಿಸಲು ಸಿಪಿಐ ನ್ಯಾಯೋಚಿತ ತೀರ್ಮಾನ ಕೈಗೊಳ್ಳಲಿದೆ ಎಂದರು.
ತಿದ್ದುಪಡಿ ಅಗತ್ಯ: ಸಣ್ಣಪುಟ್ಟ ಒತ್ತುವರಿದಾರರ ಭೂಮಿಯನ್ನು ಉಳಿಸಲು ಕಾಯ್ದೆಗೆ ತಿದ್ದುಪಡಿ ತರುವುದು ಅಗತ್ಯ. ಎಲ್ಲಾ ವರ್ಗದ ಜನರ ಮತ್ತು ಪ್ರತಿ ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸುವ ಪ್ರಯತ್ನದ ಭಾಗವಾಗಿ ಹೋರಾಡುವ ಛಲ, ಶಕ್ತಿ ಮತ್ತು ಚೈತನ್ಯ ನಮ್ಮಲ್ಲಿದೆ. ಹಲವು ವರ್ಷದಿಂದಲೂ ಕ್ಷೇತ್ರದಲ್ಲಿ ಶಾಸಕರಾಗಿರುವವರಿಂದ ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ನಡೆದಿಲ್ಲ. ಹುಲಿ ಯೋಜನೆ ಜಾರಿ ವಿಷಯದಲ್ಲಿ ಆಡಳಿತಾರೂಢರಲ್ಲಿಯೇ ದ್ವಂದ್ವ ನಿಲುವುಗಳಿದ್ದು, ಜನಸಾಮಾನ್ಯರು ಗೊಂದಲ ಅನುಭವಿಸಿ ದಿನಗಳೆಯುವಂತಾಗಿದೆ ಎಂದು ದೂರಿದರು.
ಹಿರಿಯ ಮುಖಂಡ ಲಕ್ಷ್ಮಣ ಕುಮಾರ್ ಮಾತನಾಡಿದರು. ರವಿಕುಮಾರ್, ಎಂ.ಎಸ್. ಹರೀಶ್, ಗೋಪಾಲ್ ಎನ್. ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

