ತರೀಕೆರೆ: ಒಂದು ನಾಮಪತ್ರ ತಿರಸ್ಕೃತ
ತರೀಕೆರೆ: ಕ್ಷೇತ್ರದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ನಾಮಪತ್ರ ಪರಿಶೀಲನಾ ಕಾರ್ಯ ಗುರುವಾರ ನಡೆದು ಪಕ್ಷೇತರ ಅಭ್ಯರ್ಥಿ ಕೆ. ಮಂಜುನಾಥ ರವರ ಒಂದು ನಾಮಪತ್ರ ತಿರಸ್ಕೃತವಾಗಿದ್ದು ಕೆ. ಮಂಜುನಾಥ್ ಅವರದ್ದೇ, ಬಿಎಸ್ಆರ್ ಕಾಂಗ್ರೆಸ್ ಪಕ್ಷದ ನಾಮಪತ್ರ ಅಂಗೀಕೃತವಾಗಿದೆ.
ಒಟ್ಟು 23 ಅಭ್ಯರ್ಥಿಗಳ 30 ನಾಮಪತ್ರಗಳು ಅಂಗೀಕೃತವಾಗಿದೆ ಎಂದು ಚುನಾವಣಾಧಿಕಾರಿ ಜಿ. ಅನುರಾಧ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಮುಸ್ಲಿಂ ಪ್ರಗತಿಪರ ಒಕ್ಕೂಟ ಸಭೆ
ತರೀಕೆರೆ: ತಾಲೂಕಿನ ಪ್ರಗತಿಪರ ಮುಸ್ಲಿಂ ಒಕ್ಕೂಟ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಾತ್ಯಾತೀತ ಮನೋಭಾವವುಳ್ಳ ಅಲ್ಪ ಸಂಖ್ಯಾತರ ಏಳಿಗೆಗೆ ಶ್ರಮಿಸುವ, ಅಲ್ಪ ಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ಮನೋಭಾವವುಳ್ಳ ಅಭ್ಯರ್ಥಿ, ಪಕ್ಷವನ್ನು ಬೆಂಬಲಿಸುವ ಸಂಬಂಧ ನಿರ್ಧಾರ ಪ್ರಕಟಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಶಿರಾಜ್ ಆಹಮದ್ ತಿಳಿಸಿದ್ದಾರೆ.
ತಾಲೂಕಿನ ರಾಂಪುರ ಗ್ರಾಮದಲ್ಲಿ ಮುಸ್ಲಿಂ ಪ್ರಗತಿಪರ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ಒಕ್ಕೂಟ ತನ್ನ ಎಲ್ಲಾ ಸದಸ್ಯರಿಗೂ 20ರಂದೇ ಒಕ್ಕೂಟದ ತೀರ್ಮಾನವನ್ನು ತಿಳಿಸಿ ಸಂಘದ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪ ಸಮಿತಿಯೊಂದನ್ನು ರಚಿಸಲಾಗಿದ್ದು, ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಸಮಿತಿಯ ಸದಸ್ಯರಾಗಿ ಸಮಾಜದ ಗಣ್ಯರಾದ ಮಸೂದ್ ಆಹ್ಮದ್, ಸಿರಾಜ್ ಅಹ್ಮದ್, ಆದಿಲ್ ಪಾಷ, ಫಜಲೂರ್ ರೆಹಮಾನ್, ಮೊಹಮದ್ ಉಮರ್, ಎಸ್.ಎಂ.ಸಮಿ, ಸಮೀವುಲ್ಲಾ, ಶಬೀರ್ ಅಹ್ಮದ್ ಲಕ್ಕವಳ್ಳಿ, ಪ್ಯಾರು ಸಾಬ್ ಕರಕುಚ್ಚಿ, ಮುಸ್ತಾಪ್ ಕರಕುಚ್ಚಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
'ಜೆಡಿಎಸ್ ಗೆಲವು '
ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ ತನಗೆ ನೆಲೆ ಮತ್ತು ಕುಮಾರಸ್ವಾಮಿಯವರ ಅಲೆ ಇದ್ದು, ಜಯಗಳಿಸುವುದಾಗಿ ಜೆಡಿಎಸ್ ಅಭ್ಯರ್ಥಿ ತಳಕಾನೆ ರಾಜೇಂದ್ರ ವಿಶ್ವಾಸ ವ್ಯಕ್ತ ಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಬಗ್ಗೆ ಕಾಳಜಿಯಿಂದ ಪವಿತ್ರ ಧಾರ್ಮಿಕ ಕ್ಷೇತ್ರ ಶೃಂಗೇರಿ ಹೆಸರಿಗೆ ಚ್ಯುತಿ ಬಾರದ ರೀತಿಯಲ್ಲಿ ಚುನಾವಣೆ ಎದುರಿಸಿ ಜಯಗಳಿಸುತ್ತೇನೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದ್ದು, ಅವುಗಳನ್ನು ಬಗೆಹರಿಸಿ ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯನ್ನಾಗಿಸುವುದು ನನ್ನ ಉದ್ದೇಶವಾಗಿದೆ ಎಂದರು.
ಕ್ಷೇತ್ರದ ಮೂರು ತಾಲೂಕುಗಳು ತುಂಗಾ ಹಾಗೂ ಭದ್ರಾ ನದಿಯ ತಟದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ. ನೀರಿದ್ದರೂ ವ್ಯವಸ್ಥೆ ಸರಿಯಿಲ್ಲದಿರುವುದೇ ಇದಕ್ಕೆ ಕಾರಣ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಈವರಗೆ ಅಧಿಕಾರ ಅನುಭವಿಸಿದವರು ಗಮನಹರಿಸಿಲ್ಲ ಎಂದು ಅವರು ಆರೋಪಿಸಿದರು. ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಮತದಾರರು ತನ್ನನ್ನು ಆಯ್ಕೆ ಮಾಡಬೇಕು ಎಂದು ಅವರು ವಿನಂತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

