ಪಕ್ಷದ ಅಲೆ ಮತವಾಗಿ ಪರಿವರ್ತಿಸಬೇಕು
ಜೆಡಿಎಸ್ ಶೃಂಗೇರಿ ಅಭ್ಯರ್ಥಿ ತಳಕಾನೆ ರಾಜೇಂದ್ರ ಟಿ ಜೆಡಿಎಸ್ ಕಾರ್ಯಕರ್ತರ ಸಭೆ
ಕನ್ನಡ ಪ್ರಭ ವಾರ್ತೆ ಟಿ ನರಸಿಂಹರಾಜಪುರ ಟಿ ಏ.20
ಶೃಂಗೇರಿ ಕ್ಷೇತ್ರದಲ್ಲಿ ನಾನು ಜೆಡಿಎಸ್ನಿಂದ ಸ್ಪರ್ಧಿಸಬೇಕು ಎಂಬುದು ನನ್ನ ನಿರ್ಧಾರವಲ್ಲ. ಎಚ್.ಡಿ. ಕುಮಾರಸ್ವಾಮಿ, ದೇವೇಗೌಡ ಹಾಗೂ ಎಚ್.ಟಿ. ರಾಜೇಂದ್ರ ಅವರ ಸಲಹೆ ಮೇರೆಗೆ ನಾನು ಸ್ಫರ್ಧಿಸಿದ್ದೇನೆ ಎಂದು ಜೆಡಿಎಸ್ ತಳಕಾನೆ ರಾಜೇಂದ್ರ ತಿಳಿಸಿದರು.
ಶನಿವಾರ ವಾಸವಿ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ ಹಿತದೃಷ್ಟಿಯಿಂದ ಹಿರಿಯ ಮುತ್ಸದ್ದಿಗಳು ಈ ತೀರ್ಮಾನ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಇಬ್ಬರು ರಾಜೇಂದ್ರ ಇರುತ್ತೇವೆ ಎಂದರು.
ನಾನೊಬ್ಬ ಕನಸುಗಾರ: ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಇದ್ದು, ಇದನ್ನು ಮತವನ್ನಾಗಿ ಪರಿವರ್ತಿಸುವ ಕಲೆ ನನಗೆ ತಿಳಿದಿದೆ. ನಾನು ಮಲೆನಾಡಿನ ಬಗ್ಗೆ ಹಲವು ಕನಸು ಹೊತ್ತು ಬಂದಿದ್ದೇನೆ. ನಾನೊಬ್ಬ ಕನಸುಗಾರರಾಗಿದ್ದೇನೆ. ಶಾಶ್ವತ ಕುಡಿಯುವ ನೀರಿನ ಯೋಜನೆ, ಸುಸಜ್ಜಿತ ಆಸ್ಪತ್ರೆ, 100 ಹೆಚ್ಚು ಇರುವ ಧುಮುಕುವ ನೀರಿನ ಝರಿಯ ಮೂಲಕ ಕಿರು ವಿದ್ಯುತ್ ಉತ್ಪಾದನೆ, ಪ್ರವಾಸೋದ್ಯಮ, ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ನನ್ನ ಕನಸಾಗಿದೆ. ನಾನು ಈ ಕ್ಷೇತ್ರಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಲು ಸಿದ್ಧನಾಗಿದ್ದೇನೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿ, ಜೆಡಿಎಸ್ ನನಗೆ ಟಿಕೆಟ್ ನಿರಾಕರಿಸಲಿಲ್ಲ. ನಾನೇ ಕೆಲವು ಸೈದ್ಧಾಂತಿಕ ನಿಲುವಿನ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸಲು ಹಿಂದೆ ಸರಿದಿದ್ದೇನೆ. ಇದರಲ್ಲಿ ಕಾರ್ಯಕರ್ತರು ಯಾವುದೇ ತಪ್ಪು ಅಭಿಪ್ರಾಯಕ್ಕೆ ಬರಬೇಕಾಗಿಲ್ಲ ಎಂದರು.
ಕಾಂಗ್ರೆಸ್, ಬಿಜೆಪಿ ಪಕ್ಷ ರೈತರ ಪರವಾಗಿಲ್ಲ. ಜೆಡಿಎಸ್ ಮಾತ್ರ ರೈತರ ಕಷ್ಟಗಳಿಗೆ ಸ್ಪಂದಿಸುತ್ತದೆ.ದೇವಗೌಡರು ಪ್ರಧಾನಿಯಾಗಿದ್ದಾಗ ರೈತರಿಗೆ ರಸಗೊಬ್ಬರದಲ್ಲಿ ಸಬ್ಸಿಡಿ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಸಬ್ಸಿಡಿ ತೆಗೆದಿದೆ. ಹುಲಿ ಸಂರಕ್ಷಣೆ ಯೋಜನೆ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ. ಮಲೆನಾಡಿನ ಸಮಸ್ಯೆ ಬಗ್ಗೆ ಈ ಚುನಾವಣೆಯಲ್ಲಿ ಚರ್ಚೆ ನಡೆಯಬೇಕಾಗಿದೆ. ಆದರೆ ಹಣದ ಮುಂದೆ ಚರ್ಚೆಗಳೇ ಮರೆತುಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯ ಜೆಡಿಎಸ್ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿ ಕಣುವೆ ವಿನಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಹೊಸೂರು ಸುರೇಶ್ ವಹಿಸಿದ್ದರು. ಜೆಡಿಎಸ್ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ಹೂವಪ್ಪಗೌಡ, ಕೊಪ್ಪ ಜೆಡಿಎಸ್ ಮುಖಂಡ ಕಂಠಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಉಮಾಶಂಕರ್, ದಾನೆಹಳ್ಳಿ ಮಂಜುನಾಥ್, ಬಾಳೆಹೊನ್ನೂರಿನ ಜಿನ್ನಪ್ಪ, ರೇವತಿ ಮೊದಲಾದವರಿದ್ದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣಶೆಟ್ಟಿ, ತಾಪಂ ಸದಸ್ಯ ಎಸ್.ಎಸ್. ಶಾಂತಕುಮಾರ್ ಮೊದಲಾದವರು ಇದ್ದರು. ಅಬ್ದುಲ್ ಹಜೀಫ್ ಸ್ವಾಗತಿಸಿದರು. ವರ್ಕಾಟೆ ಸುಧಾಕರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

