ಚಿಕ್ಕಮಗಳೂರು

ರಾಮನವಮಿಗೆ ಸಾಂಸ್ಕೃತಿಕ ಉತ್ಸವ

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.20
ರಾಮನವಮಿ ಉತ್ಸವದ ಅಂಗವಾಗಿ ರಾಮೋತ್ಸವ ಸೇವಾ ಸಮಿತಿ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಏ.19ರಿಂದ ಐದು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
   ಐದು ದಿನಗಳ ಕಾಲ ನಡೆಯುವ ರಾಮೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಬ್ರಾಹ್ಮಣ ಮಹಾಸಭಾದ ತಾಲೂಕು ಅಧ್ಯಕ್ಷ ಡಿ.ಎಚ್. ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆದರ್ಶ ಪುರುಷ  ಶ್ರೀರಾಮನ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಯ ಮಕ್ಕಳಲ್ಲಿ ಬೆಳೆಸುವ ಪ್ರಯತ್ನ ಪೋಷಕರು  ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಅಕ್ಕಿಕಾಳು ವೆಂಕಟೇಶ್, ನಮ್ಮ ದೇಶೀಯ  ಸಂಸ್ಕೃತಿ ಬಿಟ್ಟು ವಿದೇಶಿ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುತ್ತಿದ್ದೇವೆ. ಹಿರಿಯರು ಬಿಟ್ಟು ಹೋದ ಸಂಸ್ಕೃತಿ, ಪರಂಪರೆ ನಶಿಸುತ್ತಿದೆ. ವಿದ್ಯೆ ಕಲಿತು ದುಡ್ಡಿನಾಸೆಗೆ ಹೊರದೇಶಕ್ಕೆ ಹೋಗಿ ಹುಟ್ಟಿದ ಊರನ್ನೇ ಮರೆಯುತ್ತಿರುವುದು ದುರ್ದೈವ ಎಂದು ವಿಷಾದಿಸಿದರು.
ಕನಸು ಕಾಣುವಂತಾಗಲಿ: ಮುಂದಿನ ಪೀಳಿಗೆಗೆ ತಾವೇನಾದರೂ ಕೊಡುಗೆ ನೀಡುತ್ತೇವೆಂದರೆ ಅದು ನಮ್ಮ ಸಂಸ್ಕೃತಿ, ಕಲೆ, ಆಚಾರ -ವಿಚಾರ ಬೆಳೆಸಬೇಕೆಂಬ ಕನಸು ಕಾಣುವಂತಾಗಬೇಕು ಎಂದರು.
ರಾಮೋತ್ಸವ ಸೇವಾ ಸಮಿತಿ ಅಧ್ಯಕ್ಷ ಎ.ವಿ. ಅನಂತರಾಮಯ್ಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಸನ್ಮಾನ: ದಾನಿಗಳಾದ ಕೆ.ಎಸ್. ನಾರಾಯಣಮೂರ್ತಿ, ಹಿರಿಯ ನಿವೃತ್ತ ಉಪಾಧ್ಯಾಯೆ ನಂಜಮ್ಮರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಗೋಪಿನಾಥ್ ಸ್ವಾಗತಿಸಿ, ಶೋಭಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ಡಿ.ವಿ. ಶಾರದಾ  ವಂದಿಸಿದರು. ಬಳಿಕ ಪುಂಡರೀಕ ಭಾಗವತರು ಮತ್ತು ವೃಂದದವರಿಂದ ಹರಿಕಥೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.