29 ರವರೆಗೆ ಅದ್ಧೂರಿ ರಾಮೋತ್ಸವ
ಕ.ಪ್ರ.ವಾರ್ತೆ, ಬೀರೂರು, ಏ.21 ಬೀರೂರು ಪಟ್ಟಣದಲ್ಲಿ ದಿವಂಗತ ಕಣಕಟ್ಟೆ ರಾಮಣ್ಣನವರಿಂದ ನಿರ್ಮಿಸಲ್ಪಟ್ಟಿರುವ ಪಟ್ಟಾಭಿರಾಮ ಚಂದ್ರಮೌಳೇಶ್ವರ ದೇವಾಲಯದಲ್ಲಿ ಏ.29ರವರೆಗೆ ರಾಮೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ಎಂಟು ದಿನಗಳ ಕಾಲ ನಡೆಯಲಿರುವ ರಾಮೋತ್ಸವದಲ್ಲಿ ಪ್ರತಿದಿನ ರಾಮನವಮಿ ಅಂಗವಾಗಿ ಬೆಳಗ್ಗೆ 6 ರಿಂದ 7.30ರವರೆಗೆ ಸೂರ್ಯ ನಮಸ್ಕಾರ, ನವಗ್ರಹ ಜಪ, 7.30 ರಿಂದ 12ರವರೆಗೆ ಅಭಿಷೇಕ, ಪೂಜೆ, ರಾಮಾಯಣ ಪಾರಾಯಣ, ಲಿಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಪುಣ್ಯಾಹ, ದೇವನಾಂದಿ, ಗಣಪತಿ ಪೂಜೆ, ಸಂಕಲ್ಪ ಸೇರಿದಂತೆ ವಿವಿಧ ಪಾರಾಯಣಗಳ ಪ್ರಾರಂಭ. ಚಂದ್ರಮೌಳೇಶ್ವರ ಸ್ವಾಮಿಯ ಕಲಾಶಾಭಿಷೇಕ, ಸಂಪ್ರೋಕ್ಷಣೆ ನಡೆಯುತ್ತಿದೆ.
ಗಿರಿಜಾ ಕಲ್ಯಾಣ: ಏಪ್ರಿಲ್ 22ರ ಸಂಜೆ 6ಗಂಟೆಗೆ ಸೀತಾಕಲ್ಯಾಣ ಮತ್ತು ಗಿರಿಜಾ ಕಲ್ಯಾಣ ನಡೆಯಲಿದೆ. 28ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಶ್ರೀರಾಮತಾರಕ ಹೋಮ ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ,ಶ್ರೀರಾಮ ಪಟ್ಟಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 6 ಗಂಟೆಗೆ ನಗರದ ರಾಜಬೀದಿಗಳಲ್ಲಿ ಶ್ರೀರಾಮ ಉತ್ಸವ ಮೂರ್ತಿಯ ಶೋಭಾಯಾತ್ರೆ ನಡೆಯಲಿದೆ. 29ರ ಸೋಮವಾರ ಅವಭೃತೋತ್ಸವ ನಡೆಯಲಿದ್ದು, ರಾತ್ರಿ ಹನುಮಂತೋತ್ಸವ ನಡೆಯಲಿದೆ.
ರಾಮೋತ್ಸವದ ಅಂಗವಾಗಿ 21ರಂದು ಸಂಜೆ ಸಪ್ತಸ್ವರ ಸಂಗೀತ ಶಾಲೆಯ ಬಾಲ ಕಲಾವಿದರಾದ ಜ್ಯೋತಿ ಆನಂತ್, ವಿಷ್ಣು ಭಾರಧ್ವಾಜ್ ಅವರಿಂದ ಗಾಯನ ನಡೆಯಲಿದೆ. 23ರಂದು ಸಂಜೆ ಶಿವಮೊಗ್ಗದ ನಂದಿನಿ ಪ್ರಶಸ್ತಿ ವಿಜೇತ, ಕೇಂದ್ರ ಸಂಗೀತ ನಾಟಕ ವಿಭಾಗದ ಕಲಾವಿದ ಎಸ್.ಎಸ್. ಶಿವಾನಂದ ಸ್ವಾಮಿಯವರಿಂದ ಸಮುದ್ರಮಥನ ಕಥಾ ಕಾಲಕ್ಷೇಪ ನಡೆಯಲಿದೆ.
ಭಜನಾ ಕಾರ್ಯಕ್ರಮ: 24ರ ಸಂಜೆ ಕಡೂರಿನ ಕೆರೆಸಂತೆ ಮಹಾಲಕ್ಷ್ಮೀ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. 25ರಂದು ಲಿಂಗದಹಳ್ಳಿಯ ಪದ್ಮಾ ದಿವಾಕರ್ ಮತ್ತು ಶಾರದಾ ಗೋಪಾಲ್ ಅವರಿಂದ ಭಾರತ ವಚನ ಕಾರ್ಯಕ್ರಮ ನಡೆಯಲಿದೆ.
26ರಂದು ನಿವೃತ್ತ ಶಿಕ್ಷಕರು ಮತ್ತು ಅರ್ಚಕ ಎಂ.ವಿ. ಕೃಷ್ಣಮೂರ್ತಿಯವರಿಂದ ರಾಮಾಯಣ ಕುರಿತ ಉಪನ್ಯಾಸ ನಡೆಯಲಿದೆ. 27ಕ್ಕೆ ಶ್ರೀಮತಿ ಸೀತಾಲಕ್ಷ್ಮಿ ನಾಗರಾಜು ಹಾಗು ಸುಜಾತ ಸುರೇಶ್ ಅವರಿಂದ ಸಂಗೀತ ಸೇವೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಸೋಮಶೇಖರ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

