ಒಂದೇ ಹೆಸರಿನ 4 ಅಭ್ಯರ್ಥಿ
ಆರ್. ತಾರಾನಾಥ್
ಕಪ್ರ ವಾರ್ತ್ಣೆ ಚಿಕ್ಕಮಗಳೂರ್ಣು ಏ.22
ಒಂದೇ ಹೆಸರಿನ ನಾಲ್ಕು ಮಂದಿ ಸ್ಪರ್ಧೆ.. - ಇದು, ಜಿಲ್ಲೆಯ ತರೀಕೆರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ 17 ಅಭ್ಯರ್ಥಿಗಳಲ್ಲಿ ಒಂದೇ ಹೆಸರಿನ ನಾಲ್ವರು ಇದ್ದಾರೆ.
ಈ ಕ್ಷೇತ್ರದ ರಾಜಕೀಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಹೆಸರಿನ ನಾಲ್ಕು ಮಂದಿ ಸ್ಪರ್ಧೆ ಮಾಡಿರುವುದು. ಇದೆಲ್ಲಾ, ಚುನಾವಣಾ ಗಿಮಿಕ್ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದ್ದು, ಇದನ್ನು ತಳ್ಳಿ ಹಾಕುವಂತಿಲ್ಲ. ಮತದಾನದ ಹಕ್ಕು ಪಡೆದಿರುವವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಮ್ಮ ದೇಶದ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಅದುದರಿಂದ ಯಾರೂ ಬೇಕಾದರೂ ಸ್ಪರ್ಧೆ ಮಾಡಬಹುದು. ಈ ಬಾರಿ ತರೀಕೆರೆ ಕ್ಷೇತ್ರದಲ್ಲಿ ಒಂದೇ ಹೆಸರಿನ ನಾಲ್ವರು ಸ್ಪರ್ಧೆ ಮಾಡಿದ್ದಾರೆ.
ಅಭ್ಯರ್ಥಿಗಳು: 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಜಯಗಳಿಸಿದ ಡಿ.ಎಸ್. ಸುರೇಶ್ ಈ ಬಾರಿ ಕೆಜೆಪಿಯಿಂದ ತರೀಕೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಇದೇ ಕ್ಷೇತ್ರದಲ್ಲಿ ಸರ್ವೋದಯ ಪಕ್ಷದಿಂದ ಡಿ.ಸಿ. ಸುರೇಶ್, ಪಕ್ಷೇತರರಾಗಿ ಎ.ಎಸ್. ಸುರೇಶ್, ಟಿ.ಎಸ್. ಸುರೇಶ್ ಸ್ಪರ್ಧೆ ಮಾಡಿದ್ದಾರೆ. ಮತದಾರರಲ್ಲಿ ಗೊಂದಲ ಉಂಟು ಮಾಡುವುದರಲ್ಲಿ ಇದು ಸಹ ಒಂದು ಚುನಾವಣಾ ಗಿಮಿಕ್.
ಇದನ್ನು ರಾಜಕೀಯ ಪಕ್ಷದವರು ಅತ್ಯಂತ ಸುಲುಭವಾಗಿ ಪ್ರಯೋಗ ಮಾಡುವ ತಂತ್ರಗಾರಿಕೆ.
ಡಿ ಎಂಬ ಇನಿಷಿಯಲ್ ಇಬ್ಬರ ಹೆಸರಿನ ಹಿಂದಿದೆ. ಅದೇ ರೀತಿ ಎಸ್ ಎಂಬುದು ಮೂವರ ಹೆಸರಿನ ಹಿಂದಿದೆ. ಹೀಗೆ ಹೆಸರಿನ ಜತೆಗೆ ಇನಿಷಿಯಲ್ಗಳು ಒಂದಕ್ಕೊಂದು ಹೊಂದಾಣಿಕೆಯಾಗುವ ರೀತಿಯಲ್ಲಿವೆ. ಈ ಪ್ರಯೋಗ ಯಶಸ್ವಿಯಾಗುತ್ತದೆಯೋ, ಇಲ್ಲವೋ ಎಂಬ ಕುತೂಹಲ ಮತದಾರರ ಮುಂದಿದೆ.
17 ಮಂದಿ ಸ್ಪರ್ಧೆ: 1952ರಿಂದ 2008ರವರೆಗೆ ನಡೆದಿರುವ ಚುನಾವಣೆಗಳಲ್ಲಿ ಇದೇ ಪ್ರಥಮ ಬಾರಿಗೆ ತರೀಕೆರೆ ಕ್ಷೇತ್ರದಲ್ಲಿ ಹೆಚ್ಚು ಮಂದಿ ಸ್ಪರ್ಧೆ ಮಾಡಿದ್ದಾರೆ.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ 57 ಮಂದಿ ಸ್ಪರ್ಧೆ ಮಾಡಿದ್ದು, ತರೀಕೆರೆ ಕ್ಷೇತ್ರವೊಂದರಲ್ಲೇ 17 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ 14 ಮಂದಿ ಸ್ಪರ್ಧೆ ಮಾಡಿದ್ದರು. ಈ ಬಾರಿ ಈ ಸಂಖ್ಯೆ 17ಕ್ಕೆ ಏರಿದೆ. ಇವರಲ್ಲಿ 10 ಮಂದಿ ಪಕ್ಷೇತರರು ಇದ್ದಾರೆ. ಬೇರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಪ್ರತಿ ಚುನಾವಣೆಯಲ್ಲೂ ಇಲ್ಲಿ ಹೆಚ್ಚು ಮಂದಿ ಸ್ಪರ್ಧೆ ಮಾಡುತ್ತಾರೆ. ಇತ್ತೀಚೆಗೆ ನಡೆದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತರೀಕೆರೆ ಪುರಸಭೆ ಚುನಾವಣೆಯಲ್ಲಿ ಹೆಚ್ಚು ಮಂದಿ ಸ್ಪರ್ಧೆಮಾಡಿದ್ದರು.
ಮೂರನೇ ಸ್ಥಾನ: ಪ್ರತಿ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ.
ಅಂದಹಾಗೆ ಇಲ್ಲಿ ಇತರೆ ಕ್ಷೇತ್ರಗಳಿಗಿಂತ ಹೆಚ್ಚು ಮತದಾರರೇನೂ ಇಲ್ಲ. ಜಿಲ್ಲೆಯಲ್ಲಿ 8,35,022 ಮತದಾರರು ಇದ್ದು, ತರೀಕೆರೆ ಕ್ಷೇತ್ರದಲ್ಲಿ 1,54,802 ಮತದಾರರು ಇದ್ದಾರೆ. ಅಂದರೆ 5 ಕ್ಷೇತ್ರಗಳ ಮತದಾರರ ಸಂಖ್ಯೆಯಲ್ಲಿ ತರೀಕೆರೆ ಮೂರನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿಯೆ ಹೆಚ್ಚು ಮತದಾರರನ್ನು ಹೊಂದಿರುವ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಸಂಖ್ಯೆ 15. ಮತದಾರರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕಡೂರು ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧೆ ಮಾಡಿರುವವರು 9 ಮಂದಿ ಮಾತ್ರ. ಹಿಂದಿನ ಚುನಾವಣೆಯಲ್ಲೂ ಇಷ್ಟೇ ಮಂದಿ ಇದ್ದರು. ಮೂಡಿಗೆರೆ ಕ್ಷೇತ್ರದಲ್ಲೂ ಕಳೆದ ಚುನಾವಣೆಯಷ್ಟೇ 8 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇನ್ನುಳಿದಂತೆ ಶೃಂಗೇರಿ ಕ್ಷೇತ್ರದ ಅಭ್ಯರ್ಥಿಗಳ ಸಂಖ್ಯೆ 7 ರಿಂದ 8ಕ್ಕೆ, ಚಿಕ್ಕಮಗಳೂರಿನಲ್ಲಿ 10 ರಿಂದ 15ಕ್ಕೆ, ತರೀಕೆರೆಯಲ್ಲಿ 14 ರಿಂದ 17ಕ್ಕೆ ಅಭ್ಯರ್ಥಿಗಳ ಸಂಖ್ಯೆ ಏರಿಕೆಯಾಗಿದೆ.
ಒಂದೇ ಹೆಸರಿನ ನಾಲ್ವರು ಸ್ಪರ್ಧಿಸಿರುವ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ತರೀಕೆರೆ ಕ್ಷೇತ್ರದಲ್ಲಿ ಮತದಾರರು ನೀಡುವ ತೀರ್ಪು ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

