ವೃತ್ತಿಯನ್ನು ಗೌರವದಿಂದ ಕಾಣಿ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಏ.22
ನಾವು ಮಾಡುವ ವೃತ್ತಿಯನ್ನು ಗೌರವದಿಂದ ಕಾಣಬೇಕು ಎಂದು ಜಿಲ್ಲಾ ಮುದ್ರಕರ ಒಕ್ಕೂಟದ ಅಧ್ಯಕ್ಷ ಭಗವತಿ ಹರೀಶ್ ಹೇಳಿದ್ದಾರೆ.
ನಗರದ ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಬಳಿ ನೂತನವಾಗಿ ತೆರೆಯಲಾದ ಜಿಲ್ಲಾ ಮುದ್ರಕರ ಸಂಘದ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಹಿರಿಯ ಬೈಂಡಿಂಗ್ ಕೆಲಸಗಾರರಾದ ವಿಕ್ಟರ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ನಾವು ಜೀವನಕ್ಕೆ ಆಯ್ಕೆ ಮಾಡಿಕೊಂಡ ವೃತ್ತಿಯನ್ನು ಪ್ರೀತಿಸಬೇಕು. ಅದನ್ನು ಗೌರವದಿಂದ ಕಾಣುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಕಳೆದ 85 ವರ್ಷಗಳಿಂದ ಕೆಲಸ ಮಾಡುತ್ತಿರುವ ಮುದ್ರಣಕಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಲ್ಲರ ಶ್ರಮದಿಂದ ಇಂದು ಕಚೇರಿ ಉದ್ಘಾಟನೆಯಾಗಿದೆ. ಮುಂದೆ ಮುದ್ರಣಕಾರರ ಸ್ವಂತ ಕಟ್ಟಡ ನಿರ್ಮಿಸುವಲ್ಲಿ ಪ್ರತಿಯೊಬ್ಬರ ಸಲಹೆ ಸಹಕಾರ ಅಗತ್ಯ. ತಾವು ವೈಯಕ್ತಿಕ 3 ಲಕ್ಷ ರು. ಹಣವನ್ನು ನೀಡುವುದಾಗಿ ತಿಳಿಸಿದರು.
ಸಂಘದ ಸದಸ್ಯರ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಅನೇಕ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುದ್ರಣಕಾರರು ಆಧುನಿಕತೆಗೆ ತಕ್ಕಂತೆ ಅನೇಕ ವಿನ್ಯಾಸಗಳನ್ನು ರೂಪಿಸಿ ಜನರಿಗೆ ಉತ್ತಮ ಸೇವೆ ಒದಗಿಸಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೂ ಸಂಘದ ಮೂಲಕ ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಇರುವಂತೆ ಸೂಚಿಸಿದರು.
ಸಂಘದ ಗೌರವ ಕಾರ್ಯದರ್ಶಿ ಮಂಜುನಾಥ ಜೋಷಿ ಮಾತನಾಡಿ, ಪ್ರತಿಯೊಬ್ಬರ ತಮ್ಮ ಬಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟನೆಗೆ ಹೆಚ್ಚು ಗಮನ ನೀಡಬೇಕು. ಯಾವುದೇ ಸಮಸ್ಯೆಗಳು ಬಂದರೂ ಧೈರ್ಯವಾಗಿ ಎದುರಿಸಿದಾಗ ಗುರಿ ಮುಟ್ಟಬಹುದುದು. ಕಾಲಕ್ಕೆ ತಕ್ಕಂತೆ ಅತ್ಯಂತ ವೇಗವಾಗಿ ಗ್ರಾಹಕರಿಗೆ ಕೆಲಸ ಮಾಡಿಕೊಂಡು ಎಲ್ಲರ ವಿಶ್ವಾಸ ಪಡೆದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವೇಣುಗೋಪಾಲ್, ರಾಮದಾಸ್ ಪ್ರಭು, ಲಕ್ಷಣ್ರಾಜ್ ಅರಸ್, ಕೇಶವಮೂರ್ತಿ, ಮೋಹನ್ಕುಮಾರ್, ಗುರು, ಮುನ್ನಾವರ್, ಓಂಕಾರಪ್ಪ, ವಿನಯ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

