ಚಿಕ್ಕಮಗಳೂರು

ರಕ್ತದಾನ ಶ್ರೇಷ್ಠದಾನ: ಡಾ. ಗೀತಾ ಅಭಿಮತ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.25
ರಕ್ತದಾನ ಶ್ರೇಷ್ಠದಾನವಾಗಿದ್ದು, ಅದು ಜೀವವನ್ನು ಉಳಿಸುತ್ತದೆ ಎಂದು ಸ್ವಚ್ಛತಾ ಟ್ರಸ್ಟ್ ಕಾರ್ಯದರ್ಶಿ ಡಾ. ಗೀತಾ ವೆಂಕಟೇಶ್ ಹೇಳಿದ್ದಾರೆ.
ಕಾಫಿ ಮಿರಾಕಲ್ಸ್ ಸ್ವಯಂ ಸೇವಾ ತಂಡ ಬೇಲೂರು ರಸ್ತೆಯ ಡಾ. ಇಂದಿರಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಯುವಕರಿಗಾಗಿ ಆಯೋಜಿಸಿದ್ದ ರಕ್ತದಾನ ಹಾಗೂ ರಕ್ತಗುಂಪು ಪತ್ತೆ ಹಚ್ಚುವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಪ್ರತಿ ತಿಂಗಳು 200 ಬಾಟಲ್‌ಗೂ ಹೆಚ್ಚು ರಕ್ತದ ಅಗತ್ಯವಿದೆ. ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಹಲವರ ಜೀವ ಉಳಿಸಬಹುದು ಎಂದು ತಿಳಿಸಿದರು.
ಅಭ್ಯಾಸ ಬೆಳೆಸಿಕೊಳ್ಳಿ: ರಕ್ತ ನೀಡಿದ 24 ಗಂಟೆಯೊಳಗಾಗಿ ದೇಹದಲ್ಲಿ ರಕ್ತ ಉತ್ಪಾದನೆಯಾಗುತ್ತದೆ. ರಕ್ತ ನೀಡುವುದರಿಂದ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ ಎಂದ ಅವರು, ಯುವಕರು, ವಿದ್ಯಾರ್ಥಿಗಳು ನಿಯಮಿತವಾಗಿ ರಕ್ತದಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಅರಳಗುಪ್ಪೆ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಮುಖ್ಯಸ್ಥ ಡಾ. ಶಿವದತ್ತ ಅವರು ರಕ್ತದಾನದ ಮಹತ್ವ ವಿವರಿಸಿದರು. ಕಾಫಿ ಮಿರಾಕಲ್ಸ್ ತಂಡದ 8 ಯುವಕರು ರಕ್ತದಾನ ಮಾಡಿದ್ದು, ಸುಮಾರು 30 ಯುವಕರ ರಕ್ತದ ಗುಂಪು ಪರೀಕ್ಷಿಸಲಾ ಯಿತು.
ಕಾಫಿ ಮಿರಾಕಲ್ಸ್ ತಂಡದಿಂದ ಅಗತ್ಯವಿರುವವರಿಗೆ ಉಚಿತವಾಗಿ ರಕ್ತದ ವ್ಯವಸ್ಥೆ ಮಾಡಲು ಉದ್ದೇಶಿಸಿದ್ದು, ಎಲ್ಲ ಆಸ್ಪತ್ರೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ವಿವಿಧ ಕಾಲೇಜು ವಿದ್ಯಾರ್ಥಿಗಳು, ಎನ್.ಎಸ್.ಎಸ್., ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿದಂತೆ ರಕ್ತದಾನಿಗಳಿಗೆ ಅವರ ರಕ್ತದ ವಿವರಗಳನ್ನೊಳಗೊಂಡ ಗುರುತಿನ ಚೀಟಿ ವಿತರಿಸಲಾಗಿದೆ.
ರಕ್ತ ಅಗತ್ಯವಿರುವವರು ಡಾ. ಗೀತಾ - 9448555155, ಮಿಥನ್- 7899351521 ಅಥವಾ ದರ್ಶನ್- 9448190675 ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.