ಚಿಕ್ಕಮಗಳೂರು

ಆತ್ಮಹತ್ಯೆ

Published On :

ನರಸಿಂಹರಾಜಪುರ: ತಾಲೂಕಿನ ಮಡಬೂರಿನ ರೈತರಾದ ಬೂದಪೂಜಾರಿ (65) ಎಂಬವರು ಸಾಲದ ಬಾದೆ ತಾಳಲಾರದೆ ತಮ್ಮ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಬೂದ ಪೂಜಾರಿ ಅವರಿಗೆ ಒಂದೂವರೆ ಎಕರೆ ಒಣ ಭೂಮಿ ಮಾತ್ರ ಇದ್ದು ನೀರಿನ ಸೌಕರ್ಯ ಇರಲಿಲ್ಲ.
ಜಮೀನಿನಲ್ಲಿದ್ದ ಬಾವಿಯನ್ನು ನಂಬಿಕೊಂಡು ಅರ್ಧ ಎಕರೆಗೆ ಅಡಿಕೆ ಗಿಡ ನೆಟ್ಟಿದ್ದರು. ಆದರೆ, ಈ ವರ್ಷ ಬಾವಿ ಬತ್ತಿಹೋಗಿ ಅಡಿಕೆ ಗಿಡ ಒಣಗುತ್ತಿತ್ತು. ಅಡಿಕೆ ಗಿಡಕ್ಕೆ ನೀರು ಕೊಡಲು 3 ಬೋರ್ ವೆಲ್ ಕೊರೆಸಿದರೂ ನೀರು ಬರಲಿಲ್ಲ ಎನ್ನಲಾಗಿದೆ.
ಇದರಿಂದ ಕೈಗಡ ಸಾಲ ಹೆಚ್ಚಾಗಿದ್ದರಿಂದ ಮನ ನೊಂದ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ಜಮೀನಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.