ಕ್ಷೇತ್ರದ ಸಮಸ್ಯೆ ಅರಿವಿದೆ'
ಕ.ಪ್ರ.ವಾರ್ತೆ ನರಸಿಂಹರಾಜಪುರ ಏ.26 ನನ್ನ ಪತಿ ಕನಸುಗಾರರಾಗಿದ್ದು, ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಳಕಾನೆ ರಾಜೇಂದ್ರ ಅವರ ಪತ್ನಿ ಅನಿತಾ ರಾಜೇಂದ್ರ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ತಳಕಾನೆ ರಾಜೇಂದ್ರ ಅವರು ಹಣ ಮಾಡಲು ರಾಜಕೀಯ ಕ್ಷೇತ್ರಕ್ಕೆ ಬರಲಿಲ್ಲ. ಸಾರ್ವಜನಿಕ ಸೇವೆ ಮಾಡಲು ಅಧಿಕಾರ ಬೇಕಾಗುತ್ತದೆ ಎಂದರು.
ಅಭಿಮಾನ ಇಟ್ಟು ಸ್ಪರ್ಧೆ: ಶೃಂಗೇರಿ ಕ್ಷೇತ್ರದ ಬಗ್ಗೆ ಅಭಿಮಾನ ಇಟ್ಟು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲೇ ಹುಟ್ಟಿ ಬೆಳೆದ ತಳಕಾನೆ ರಾಜೇಂದ್ರ ಅವರಿಗೆ ರಾಜಕೀಯ ಹೊಸದಾದರೂ ಕ್ಷೇತ್ರದ ನೋವು, ಸಮಸ್ಯೆಗಳ ಅರಿವು ಇದೆ. ನನ್ನ ಪತಿಯ ಗೆಲವಿಗೆ ಎಲ್ಲಾ ಜೆಡಿಎಸ್ ಕಾರ್ಯಕರ್ತರೂ ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.
ಜೆಡಿಎಸ್ ಮುಖಂಡ ಎಸ್.ಎಸ್. ಶಾಂತಕುಮಾರ್ ಮಾತನಾಡಿ, ತಳಕಾನೆ ರಾಜೇಂದ್ರರಿಗೆ ಅವಕಾಶ ನೀಡಿದರೆ ಶೃಂಗೇರಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಿದ್ದಾರೆ ಎಂದರು. ಅಧ್ಯಕ್ಷತೆಯನ್ನು ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಹೊಸೂರು ಸುರೇಶ್ ವಹಿಸಿದ್ದರು. ಪಪಂ ಸದಸ್ಯ ಸುಬಾನ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಉಮಾಶಂಕರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ಜೆಡಿಎಸ್ ಮುಖಂಡ ಎಂ.ಒ. ಜೋಯಿ, ಬಾಳೆಹೊನ್ನೂರು ಜಿನ್ನಪ್ಪ, ಜಾನಕೀರಾಮ್ ಮೊದಲಾದವರಿದ್ದರು. ನಂತರ ಅನಿತಾ ರಾಜೇಂದ್ರ ಜೆಡಿಎಸ್ ಕಾರ್ಯಕರ್ತರ ಜೊತೆ ಪಟ್ಟಣದ ಮುಖ್ಯ ಬೀದಿಯಲ್ಲಿ ಅಂಗಡಿ, ಮನೆಗಳಿಗೆ ತೆರಳಿ ಮತ ಯಾಚನೆ ಮಾಡಿದರು. ಜೆಡಿಎಸ್ ನೂತನ ಕಚೇರಿಯನ್ನು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಗುರುವಾರ ಉದ್ಘಾಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

