ಚಿಕ್ಕಮಗಳೂರು

ನಾಡಿನ ಸಮಗ್ರ ಪ್ರಗತಿಗೆ ಆದ್ಯತೆ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಏ.28:
ನಾಡಿನ ಸಮಗ್ರ ಪ್ರಗತಿಯೇ ನಮ್ಮ ಪ್ರಾಧಾನ್ಯತೆಯಾಗಿದ್ದು, ಇದಕ್ಕಾಗಿ ಜೆಡಿಎಸ್ ಸರ್ಕಾರದ 20 ತಿಂಗಳ ಆಡಳಿತದಲ್ಲಿ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವು ಯಶಸ್ವಿಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಆಡ್ಯಂತಾಯ ರಂಗಮಂದಿರದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಬಿ.ಬಿ. ನಿಂಗಯ್ಯ ಮಂತ್ರಿಯಾಗಿದ್ದಾಗ ರೈತರಿಗೆ ಉಪಯುಕ್ತವಾಗುವಂತೆ ರಾಷ್ಟ್ರೀಯ ಕೃಷಿ ಸಂಶೋಧನಾ ಕೇಂದ್ರ, ಪಶು ಆಸ್ಪತ್ರೆ, ಎಪಿಎಂಸಿಯನ್ನು ಮೂಡಿಗೆರೆಗೆ ತರುವುದರ ಮೂಲಕ ಜನೋಪಯೋಗಿ ಕೆಲಸ ಮಾಡಿದ್ದಾರೆ. ನಂತರ ಬಂದವರು ಅದರ ಲಾಭ ಪಡೆದುಕೊಂಡಿದ್ದಾರೆ ಎಂದವರು ಹೇಳಿದರು.
ಮೊದಲ ಆದ್ಯತೆ: ಬಡವರು, ದೀನದಲಿತರು, ಹಿಂದುಳಿದವರು, ಮಹಿಳೆಯರು ಸೇರಿದಂತೆ ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರೈತರ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದಾಗಿ, ಕೃಷಿ ಹಾಗೂ ಪಶುಸಂಗೋಪನೆಯ ಪ್ರಗತಿ, ತೋಟಗಾರಿಕೆ, ನೀರಾವರಿ ಹಾಗೂ ವಿದ್ಯುತ್‌ಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇನೆ. ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಅವರಿಗೆ ಮತ ನೀಡಿ ಜಯಶಿಲರನ್ನಾಗಿಸುವಂತೆ ಮನವಿ ಮಾಡಿದರು.
ಸ್ವ ಅಭಿವೃದ್ಧಿ ಕಡೆ ಗಮನ: ಜಿಲ್ಲಾಧ್ಯಕ್ಷ ಮಂಜಯ್ಯ ಮಾತನಾಡಿ, ವಿರೋಧ ಪಕ್ಷಗಳು ಮತದಾರರನ್ನು ಹಣದಲ್ಲಿ ಅಳೆಯಲು ನೋಡುತ್ತಿವೆ. ಮತದಾರರೇ ಎಚ್ಚರಿಕೆ, ಹಣ ಕೊಟ್ಟು ಮತ ಪಡೆದವರು ಕ್ಷೇತ್ರದ ಅಭಿವೃದ್ಧಿ ಮಾಡುವ ಬದಲು ತಮ್ಮ ಸ್ವ ಅಭಿವೃದ್ಧಿ ಮಾಡಿಕೊಳ್ಳುವವರುವವರು ಎಂದು ಎಚ್ಚರಿಸಿದರು.
ಜೆಡಿಎಸ್ ಬಡವರ ಪಕ್ಷ. ಅಭಿವೃದ್ಧಿಯೇ ಮೂಲಮಂತ್ರ. ಕೇಂದ್ರ ಸರ್ಕಾರ ಜೆಡಿಎಸ್ ಆಡಳಿತದಲ್ಲಿದ್ದಾಗ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿತ್ತು. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಆಡಳಿತದಲ್ಲಿದ್ದಾಗ ಶಾಲಾ ಮಕ್ಕಳಿಗೆ ಉಚಿತ ಸೈಕಲ್, ಸಾರಾಯಿ ನಿಷೇಧ, ಲಾಟರಿ ನಿಷೇಧ, ಭಾಗ್ಯಲಕ್ಷ್ಮಿ, ಆರೋಗ್ಯ ಯೋಜನೆ, ವಿಕಲಚೇತನರ
ಅವಕಾಶ ನೀಡಿ: ಅಭ್ಯರ್ಥಿ ಬಿ.ಬಿ. ನಿಂಗಯ್ಯ ಮತಯಾಚಿಸಿ, ಮೂಡಿಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ನಡುವೆ ನೇರ ಸ್ಫರ್ಧೆ ್ಧ ಏರ್ಪಟ್ಟಿದ್ದು, ಈಬಾರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಮತದಾರರು ಒಂದು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
  ರಾಜ್ಯ ಸಮಿತಿಯ ಸದಸ್ಯ ಎಂ.ಎಸ್. ಬಾಲಕೃಷ್ಣ, ರಂಜನ್ ಅಜಿತ್ ಕುಮಾರ್, ಎಚ್.ಎಚ್. ದೇವರಾಜ್, ಭರತ್, ಲೋಹಿತ್, ಬಿ.ಎಂ. ಭೈರೇಗೌಡ, ಅಜಿತ್ ಕುಮಾರ್, ಸುಬ್ರಾಯ ಗೌಡ, ಗಬ್ಬಳ್ಳಿ ಚಂದ್ರೇಗೌಡ, ರಮೇಶ್, ಬಕ್ಕಿನಾರಾಯಣ, ನಾಗೇಂದ್ರ, ಆಲ್ದೂರ್ ಹೋಬಳಿಯ ಜಿ.ವಿ. ರಘು, ಸುರೇಶ್, ಸಿ,ಎಂ. ಗೋಪಾಲಗೌಡ, ಹಮ್ಮಬ್ಬ, ವಸಂತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರುಣನ ಆರ್ಭಟ: 11 ಗಂಟೆಗೆ ಆಗಮಿಸಬೇಕಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಮಳೆಯ ಕಾರಣದಿಂದ 3 ಗಂಟೆಗಳ ಕಾಲ ತಡವಾಗಿ ಆಗಮಿಸಿ ತಮ್ಮ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಮಳೆರಾಯನ ಆಗಮನವಾಗಿದ್ದು. ವೇದಿಕೆಯಲ್ಲಿ ಪ್ರಚಾರ ಭಾಷಣ ಶುರುವಾಗುತ್ತಿದ್ದಂತೆ. ಮಳೆ ಆರ್ಭಟ ಹೆಚ್ಚಿದಾಗ ಕುರ್ಚಿಯಲ್ಲಿ ಕುಳಿತಿದ್ದ ಸಾರ್ವಜನಿಕರು ಕುರ್ಚಿಯನ್ನೇ ಛತ್ರಿಯನ್ನಾಗಿಸಿ ತಲೆಯ ಮೇಲೆ ಹೊತ್ತುಕೊಂಡು ಭಾಷಣ ಕೇಳಿದರು. ಇದೇ ಸಂದರ್ಭದಲ್ಲಿ ರಾಮೇಗೌಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.