ಚಿಕ್ಕಮಗಳೂರು

ಎಚ್ಡಿಕೆ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ: ಭೋಜೇಗೌಡ

Published On :

ಕಪ್ರವಾರ್ತೆ,ಚಿಕ್ಕಮಗಳೂರು, ಏ.29
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಾರಿಗೆ ತಂದ ಜನಪರ ಯೋಜನೆಗಳು ಈ ಬಾರಿ ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ಬೋಜೇಗೌಡ ಹೇಳಿದ್ದಾರೆ.
ನಗರದ ಮಾರ್ಕೇಟ್ ರಸ್ತೆ, ಕೆ.ಎಂ. ರಸ್ತೆ, ಕೋಟೆ, ಹೊಸಮನೆ ಬಡಾವಣೆಗಳಲ್ಲಿ ಸೋಮವಾರ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಪರ ಮತಯಾಚನೆ ನಡೆಸಿ ನಂತರ ಅವರು ಮಾತನಾಡಿದರು.
ಗೆಲವು ಖಚಿತ: ಕ್ಷೇತ್ರದ ಮತದಾರರಿಗೆ ಆಮಿಷವೊಡ್ಡುವ ಕೆಲಸವನ್ನು ನಿರಂತರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಾಡುತ್ತಿದೆ. ಈ ಚುನಾವಣೆಯಲ್ಲಿ ಫಲಿತಾಂಶ ತನ್ನದಾಗಿಸಿಕೊಳ್ಳಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಹಾಗಾಗಿ ಈ ಎರಡು ಪಕ್ಷದ ಬಗ್ಗೆ ಭ್ರಷ್ಟಾಚಾರದ ಆರೋಪಗಳಿದ್ದು ಇದರಿಂದ ಜನರ ಮನಸ್ಸು ಕೆಟ್ಟಿ ಜೆಡಿಎಸ್ ಪರ ಒಲವಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್, ಬಿಜೆಪಿ ಕಸರತ್ತು ನಡೆಸುತ್ತಿದ್ದು ಆ ಕಾರ್ಯ ಫಲಪ್ರದವಾಗುವುದಿಲ್ಲ. ಈ ಬಾರಿ ಜೆಡಿಎಸ್ ಗೆಲುವು ಶಥಸಿದ್ದ ಎಂದರು.
ಎಸ್.ಎಲ್. ಧರ್ಮೇಗೌಡ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಸೋಲಿನ ಹತಾಶೆಯಿಂದ ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ. ಇದೆ ಪೈಪೋಟಿ ಹಣ ಹಂಚುವುದರಲ್ಲೂ ಮುಂದುವರೆಸಿದ್ದಾರೆ. ಇವರ ಆಮೀಷವನ್ನು ಜನ ತಿರಸ್ಕರಿಸಿ ಅಲ್ಪಸಂಖ್ಯಾತರಾದಿಯಾಗಿ ನಮ್ಮ ಗೆಲುವಿಗೆ ಶುಭ ಸೂಚನೆ ನೀಡಿದ್ದಾರೆಂದರು.
ಪಕ್ಷದ ಮುಖಂಡರಾದ ಚಂದ್ರು, ಸಿ.ಎನ್. ಅಕ್ಮಲ್, ಷರೀಫ್, ಹೊಲದಗದ್ದೆ ಗಿರೀಶ್, ಕೆ. ಸಂತೋಷ್ ಹಾಜರಿದ್ದರು.
ಕರಗಡಕ್ಕೆ ನಾನೇ ಚಾಲನೆ ನೀಡಿದ್ದು: ಬೆಳವಾಡಿ ಕೆರೆಗೆ ನೀರು ಹರಿಸುವ ಕರಗಡ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೆ ತಾವೇ ಎಂದು ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಹೇಳಿದ್ದಾರೆ.
ಕಳಸಾಪುರ, ಬೆಳವಾಡಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬೆಳವಾಡಿ ಕೆರೆಗೆ ನೀರಾಹಿಸಿ ಈ ಭಾಗದ ಜನರ ನೀರಿನ ಬವಣೆ ತಪ್ಪಿಸಲು ಯೋಜನೆ ರೂಪಿಸಿ ಅಂದಿನ ಸಿ.ಎಂ. ಕುಮಾರಸ್ವಾಮಿಯವರನ್ನು ಗ್ರಾಮ ವಾಸ್ತವ್ಯ ಮಾಡಿಸಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಬಾರಿ ನಿಮ್ಮಗಳ ಆಶೀರ್ವಾದದಿಂದ ಅದನ್ನು ತಾವೇ ಉದ್ಘಾಟಿಸುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಭಾಗಕ್ಕೆ ಕೋಟ್ಯಂತರ ರುಪಾಯಿ ಅನುದಾನ ತಂದು ರಸ್ತೆ, ಶಾಲೆ, ವಸತಿ ನಿಲಯಗಳಿಗೆ ಚಾಲನೆ ಕೊಟ್ಟೆ, ನಂತರ ಸಿ.ಟಿ. ರವಿಯವರು ಶಾಸಕರಾಗಿ ಅದನ್ನು ಉದ್ಘಾಟನೆ ಮಾಡಿದ್ದಾರೆ. ಆದರೆ, ಈ ಕಾರ್ಯಗಳಿಗೆ ಹಣ ಮಂಜೂರು ಮಾಡಿಸಿದ್ದು ನಾನೆ ಎಂಬುದನ್ನು ಮರೆಯಬೇಡಿ ಎಂದರು.
ಕಾಂಗ್ರೆಸ್ ಸಾಧನೆ ಶೂನ್ಯ: ಕ್ಷೇತ್ರದಲ್ಲಿ ಬಿಜೆಪಿ ಮಾಡಿದ ಭ್ರಷ್ಟಾಚಾರ ಬಯಲಿಗೆಳೆದಿದ್ದು ಜೆಡಿಎಸ್ ಪಕ್ಷ. ಅನೇಕ ಜನಪರ ಹೋರಾಟ ಮಾಡಿದ್ದೇವೆ. ಈಗಿನ ಕಾಂಗ್ರೇಸ್ ಅಭ್ಯರ್ಥಿ ಶಾಂತೇಗೌಡರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗುತ್ತಿಗೆ ಕೆಲಸ ಮಾಡಿದ್ದಾರೆ. ಒಂದೆ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿದ ಅವರು, ಒಂದೇ ಮನೆಗೆ 2 ಅಧಿಕಾರಬೇಕೆಂಬ ಆಸೆ ಬೇಡ ಇರುವ ಅಧಿಕಾರ ಉಪಯೋಗಿಸಿ ಕ್ಷೇತ್ರದ ಅಭಿವೃದ್ಧಿ ಮಾಡಬಹುದಿತ್ತು ಆದರೆ ಕಾಂಗ್ರೆಸ್ ಸಾಧನೆಯೆ ಶೂನ್ಯ ಎಂದು ಹೇಳಿದರು. ಪಕ್ಷದ ಮುಖಂಡರಾದ ಗಿರಿಗೌಡ, ನರೇಂದ್ರ, ರಾಮೇಗೌಡ, ಕೆ. ಸಂತೋಷ್, ಸ್ವಾಮಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.