ಚಿಕ್ಕಮಗಳೂರು

'ಬ್ರಾಹ್ಮಣ ನಿಂದನೆ ಶುದ್ಧ ಸುಳ್ಳು'

Published On :

ಕ.ಪ್ರ.ವಾರ್ತೆ, ಕೊಪ್ಪ, ಏ.30
ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ವಿಪ್ರ ಸಮ್ಮೇಳನದಲ್ಲಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಬ್ರಾಹ್ಮಣರನ್ನು ನಿಂದಿಸಿದ್ದಾರೆ ಎಂಬ ವಿಚಾರ ಶುದ್ಧ ಸುಳ್ಳು ಹಾಗೂ ಚುನಾವಣೆ ಸಮಯದಲ್ಲಿ ಹುಟ್ಟಿಕೊಂಡಿರುವ ಬ್ರಾಹ್ಮಣ ಪರಿಷತ್ ವೇದಿಕೆ ಅಪ್ರಸ್ತುತ ಕ್ಷೇತ್ರ ಮಟ್ಟದ ಬ್ರಾಹ್ಮಣ ಮಹಾಸಭಾ ಮುಖಂಡ  ವೇ.ಬ್ರಂ.ಶ್ರೀ ನಾ.ಸು. ನಾಗೇಂದ್ರ ಭಟ್ ಹೇಳಿದರು.
 ನಾನು ಈ ವಿಚಾರದ ಕುರಿತು  ಜೀವರಾಜ್ ಬಳಿ ವೈಯಕ್ತಿಕವಾಗಿ ವಿಚಾರಿಸಿದಾಗಲೂ ತಾನು ನನ್ನ ಜೀವಮಾನದಲ್ಲಿ ಯಾವುದೇ ಜನಾಂಗವನ್ನು ದೂಷಿಸಿಲ್ಲ. ಶೃಂಗೇರಿ ವಿಪ್ರ ಸಮಾವೇಶದಲ್ಲಿಯೂ ಬ್ರಾಹ್ಮಣ ಸಮುದಾಯವನ್ನು ಅವಹೇಳನೆ ಮಾಡಿಲ್ಲ ಎಂದು ಶೃಂಗೇರಿ ಗುರುಗಳ ಎದುರು ಪ್ರಮಾಣ ಮಾಡಿದ್ದೇನೆ, ಶಾರದಾಂಬೆಯ ಎದುರು ಬೇಕಾದರೂ ಪ್ರಮಾಣ ಮಾಡುತ್ತೇನೆ ಎಂದಿದ್ದಾರೆ ಎಂದರು.
ಒಡಕು ಮೂಡಿಸುವ ಹುನ್ನಾರ: ಜೀವರಾಜ್ ರಾಜಕೀಯ ಏಳಿಗೆಯನ್ನು ಸಹಿಸದ ಯಾರೋ ಕುಹಕಿಗಳು ಸೃಷ್ಟಿಸಿದ ಈ ಹುಸಿ ಸುದ್ದಿಯನ್ನು ಮುಂದಿಟ್ಟು ಶೃಂಗೇರಿ ಕ್ಷೇತ್ರ ಬ್ರಾಹ್ಮಣ ಪರಿಷತ್ ಎಂಬ ಹೊಸ ಸಂಘಟನೆ ವಿಪ್ರ ಸಮುದಾಯದ ಮಧ್ಯೆ ಒಡಕು ಮೂಡಿಸುವ ರಾಜಕೀಯ ಹುನ್ನಾರ ನಡೆಸುತ್ತಿರುವುದು ತಿಳಿದುಬಂದಿದೆ ಎಂದರು.
 ವಿಪ್ರ ಸಮಾಜದಲ್ಲಿ ಕ್ಷೇತ್ರ ಮಟ್ಟದ ಬ್ರಾಹ್ಮಣ ಮಹಾಸಭಾ ಎಂಬ ಸಂಘಟನೆ ಇದ್ದು, ಕೂಟ ಮಹಾಜಗತ್ತು. ಹೆಬ್ಬಾರ್ ಮಹಾಕೂಟ ಮುಂತಾದ ಬ್ರಾಹ್ಮಣ ಉಪಪಂಗಡಗಳಿಗೆ ಸೇರಿದ ಸಂಘಟನೆಗಳಿದ್ದರೂ, ಬ್ರಾಹ್ಮಣರ ಐಕ್ಯಮತ್ಯ ಆಗಿಲ್ಲ. ಇಂತಹ ಸಂದರ್ಭದಲ್ಲಿ ಇನ್ನೊಂದು ಸಂಘಟನೆಯ ಅವಶ್ಯಕತೆ ಇದೆಯೇ ಎಂದವರು ಪ್ರಶ್ನಿಸಿದರು.
   ನಮ್ಮ ಸಮಾಜಕ್ಕೆ ಬಿಜೆಪಿ ಮತ್ತು ಜೀವರಾಜ್ ಅವರಿಂದ ಏನೂ ತೊಂದರೆಯಾಗಲೀ ಅವಮಾನವಾಗಲೀ ಆಗಿಲ್ಲ. ಪಕ್ಷ ಎಲ್ಲಾ ಸ್ಥಾನ, ಮಾನ, ಸೌಲಭ್ಯವನ್ನೂ ನಮ್ಮ ಸಮುದಾಯಕ್ಕೆ ನೀಡಿದೆ. 3 ವರ್ಷದ ಹಿಂದೆ ವಾರ್ಷಿಕ ರು. 500ರಿಂದ 600 ಇದ್ದ ಮುಜರಾಯಿ ದೇವಸ್ಥಾನಗಳ ತಸ್ತೀಕನ್ನು ರು. 24,000 ಕ್ಕೆ ಏರಿಸಿದೆ. ಇದರಿಂದ ಸಂಕಷ್ಟ ಸ್ಥಿತಿಯಲ್ಲಿದ್ದ ಅರ್ಚಕರ ಜೀನನ ತುಸು ನೆಮ್ಮದಿ ಕಂಡಿರವುದು ಬಿಜೆಪಿ ಮತ್ತು ಜೀವರಾಠಜಜ ನಮ್ಮ ಸಮುದಾಯದ ಮೇಲೆ ತೋರುತ್ತಿರುವ ಕಾಳಜಿಗೆ ಕೈಗನ್ನಡಿಯಂತಿದೆ. ಅದ್ದರಿಂದ ಸುಳ್ಳು ವದಂತಿಗಳ ಬಗ್ಗೆ ಜಾಗೃತ ಸಮುದಾಯ ಎಚ್ಚರದಿಂದಿರಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.